ಕೀಫ್ ಸ್ಪಿನ್‌ಗೆ ತತ್ತರಿಸಿದ ಭಾರತ
Team Udayavani, Feb 26, 2017, 11:33 AM IST
– ಪುಣೆಯಲ್ಲಿ ಭಾರತಕ್ಕೆ 333 ರನ್ನುಗಳ ಬೃಹತ್ ಸೋಲು
– ಸ್ಟೀವ್ ಓ’ಕೀಫ್ ಅಸಾಮಾನ್ಯ ಸಾಧನೆ 70ಕ್ಕೆ 12 ವಿಕೆಟ್
– ಆಸ್ಟ್ರೇಲಿಯ 260 ಮತ್ತು 285; ಭಾರತ 105 ಮತ್ತು 107
– ಭಾರತದ ಸತತ 19 ಟೆಸ್ಟ್ ಅಜೇಯ ಸಾಧನೆಗೆ ಬ್ರೇಕ್
ಪುಣೆ: ಸತತ ಸರಣಿ ಗೆಲುವಿ ನಿಂದ ಬೀಗುತ್ತಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯದ ಸ್ಪಿನ್ ಸುಳಿಯಲ್ಲಿ ಸಿಲುಗಿ ಒದ್ದಾಡಿ 333 ರನ್ನುಗಳ ಬೃಹತ್ ಅಂತರದಿಂದ ಸೋಲಿನ ಆಘಾತ ಅನುಭವಿಸಿದೆ. ಆಸ್ಟ್ರೇಲಿಯ ವಿರುದ್ಧವೂ ಗೆಲುವಿನ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದ್ದ ಭಾರತಕ್ಕೆ ಸ್ನಿನ್ನರ್‌ಗಳಾದ ಸ್ಟೀವ್ ಓ’ಕೀಫ್ ಮತ್ತು ನಥನ್ ಲಿಯೋನ್ ಮರ್ಮಾಘಾತ ನೀಡಿದ್ದಾರೆ.
ಗೆಲ್ಲಲು 441 ರನ್ ಗಳಿಸುವ ಕಠಿನ ಗುರಿ ಪಡೆದ ಭಾರತ ತಂಡವು ಮತ್ತೆ ಓ’ಕೀಫ್ ಅವರ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಓ’ಕೀಫ್ ಅವರು ನಥನ್ ಲಿಯೋನ್ ಜತೆ ಸೇರಿಕೊಂಡು ಭಾರತದ ಮೇಲೆ ಆಕ್ರಮಣ ಮಾಡಿದರು. ಅವರಿಬ್ಬರ ಸ್ಪಿನ್ ಸುಳಿಗೆ ನಲುಗಿದ ಭಾರತ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 107 ರನ್ನಿಗೆ ಆಲೌಟಾಗುವ ಮೂಲಕ ಆಸ್ಟ್ರೇಲಿಯ ಭರ್ಜರಿ ಜಯ ಸಾಧಿಸುವಂತಾಯಿತು. ಕೇವಲ 33.5 ಓವರ್‌ಗಳಲ್ಲಿ ಭಾರತದ ಇನ್ನಿಂಗ್ಸ್ ಅಂತ್ಯಗೊಂಡಿತ್ತು. ಇದು ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಎದುರಾದ ಮೊದಲ ಸೋಲು ಆಗಿದೆ.
ಈ ಮೊದಲು ನಾಲ್ಕು ವಿಕೆಟಿಗೆ 143 ರನ್ನಿನಿಂದ ಮೂರನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡ ಸ್ಟೀವನ್ ಸ್ಮಿತ್ ಅವರ ಅಮೋಘ ಶತಕದಿಂದಾಗಿ 285 ರನ್ ಗಳಿಸಿ ಆಲೌಟಾಯಿತು. ಈ ಮೂಲಕ ಒಟ್ಟಾರೆ 440 ರನ್ ಮುನ್ನಡೆ ಸಾಧಿಸುವಂತಾಯಿತು.
ಈ ಗೆಲುವಿನಿಂದ ಆಸ್ಟ್ರೇಲಿಯ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ಬೆಂಗಳೂರಿನಲ್ಲಿ ಮಾ. 4ರಿಂದ ಆರಂಭವಾಗಲಿದೆ.
ಈ ಹೀನಾಯ ಸೋಲಿನಿಂದ ಭಾರತದ ಸತತ 19 ಟೆಸ್ಟ್‌ನ ಅಜೇಯ ಸಾಧನೆ ಅಂತ್ಯಗೊಂಡಿತು. 2012ರಲ್ಲಿ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಸೋತ ಬಳಿಕ ಭಾರತ ಇದೇ ಮೊದಲ ಸಲ ಸೋಲು ಕಾಣುವಂತಾಗಿದೆ. ಸತತ ಸರಣಿ ಗೆದ್ದ ಭಾರತಕ್ಕೆ ಈ ಮೂಲಕ ದೊಡ್ಡ ಹೊಡೆತ ಬಿದ್ದಂತಾಗಿದೆ.
ವಿಶ್ವದ ನಂಬರ್ ವನ್ ಟೆಸ್ಟ್ ತಂಡಕ್ಕೆ ಎದುರಾದ ದುರಂತಮಯ ಸೋಲು ಇದಾಗಿದೆ. ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಹೀನಾಯ ವೈಫಲ್ಯ ಕಂಡಿದೆ. ಕಳೆಪ ಬ್ಯಾಟಿಂಗ್, ಫೀಲ್ಡಿಂಗ್ ಮಾತ್ರವಲ್ಲದೇ ಅಂಪಾಯರ್ ತೀರ್ಪು ಪ್ರಶ್ನಿಸುವಲ್ಲಿಯೂ ಭಾರತ ಎಡವಿದೆ. ಇದರಿಂದಾಗಿ ಭಾರತಕ್ಕೆ ದೊಡ್ಡ ಹೊಡೆತ ಬೀಳುವಂತಾಗಿದೆ. ಈ ಹಿಂದಿನ ಟೆಸ್ಟ್‌ಗಳಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ವಿರಾಟ್ ಕೊಹ್ಲಿ ಇಲ್ಲಿ ತೀವ್ರ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿದ್ದಾರೆ. ಅವರು 0 ಮತ್ತು 13 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದು ತವರಿನ ಪಂದ್ಯದಲ್ಲಿ ಭಾರತದ ನಿಕೃಷ್ಟ ಮೊತ್ತವಾಗಿದೆ ಮತ್ತು ರನ್ ಅಂತರದಲ್ಲಿ ತಂಡದ ಎರಡನೇ ಬಲುದೊಡ್ಡ ಸೋಲು ಆಗಿದೆ.
ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಬ್ಯಾಟಿಂಗ್ ಘೋರ ವೈಫಲ್ಯ ಕಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಂಡದ ಆರು ಮಂದಿ ಎರಡಂಕೆ ತಲುಪಲು ವಿಫಲರಾಗಿದ್ದಾರೆ. ಚೇತೇಶ್ವರ್ ಪೂಜಾರ ಮಾತ್ರ ಸ್ವಲ್ಪಮಟ್ಟಿಗೆ ಆಸೀಸ್ ದಾಳಿಯನ್ನು ಎದುರಿಸಿ 31 ರನ್ ಗಳಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ತಂಡವನ್ನು ಆಧರಿಸಿದ್ದ ಕೆಎಲ್ ರಾಹುಲ್, ಮುರಳಿ ವಿಜಯ್, ಸಾಹಾ ರಹಾನೆ ಆಸೀಸ್ ಸ್ಪಿನ್ನರ್‌ಗಳಿಗೆ ಶರಣಾಗಿದ್ದಾರೆ.
ಸ್ಮಿತ್ ಅಮೋಘ ಶತಕ
ತವರಿನಲ್ಲಿಯೇ ಭಾರತೀಯರು ನೆಲಕಚ್ಚಿದ ಈ ಪಿಚ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಶತಕ ದಾಖಲಿಸಿರುವುದು ಆಶ್ಚರ್ಯ ತಂದಿದೆ. ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸ್ಮಿತ್ 202 ಎಸೆತ ಎದುರಿಸಿ 11 ಬೌಂಡರಿ ನೆರವಿನಿಂದ 109 ರನ್ ಗಳಿಸಿ ಸಂಭ್ರಮಿಸಿದರು. ಇದು ಟೆಸ್ಟ್‌ನಲ್ಲಿ ಅವರ 18ನೇ ಶತಕವಾಗಿದೆ. ಈ ಶತಕದಿಂದಾಗಿ ಆಸ್ಟ್ರೇಲಿಯ ಒಳ್ಳೆಯ ಮೊತ್ತ ಗಳಿಸುವಂತಾಯಿತು. ಟೆಸ್ಟ್‌ನಲ್ಲಿ ಅವರು ಭಾರತ ವಿರುದ್ಧ ಸತತ ಐದನೇ ಶತಕ ದಾಖಲಿಸಿದ್ದಾರೆ.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 260
ಭಾರತ ಪ್ರಥಮ ಇನ್ನಿಂಗ್ಸ್ 105
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್
ದ್ವಿತೀಯ ದಿನ 4 ವಿಕೆಟಿಗೆ 143
ಸ್ಟೀವನ್ ಸ್ಮಿತ್ ಎಲ್‌ಬಿಡಬ್ಲ್ಯು ಜಡೇಜ 109
ಮಿಚೆಲ್ ಮಾರ್ಷ್ ಸಿ ಸಾಹ ಬಿ ಜಡೇಜ 31
ಮ್ಯಾಥ್ಯೂ ವೇಡ್ ಸಿ ಸಾಹ ಬಿ ಉಮೇಶ್ 20
ಮಿಚೆಲ್ ಸ್ಟಾರ್ಕ್ ಸಿ ರಾಹುಲ್ ಬಿ ಅಶ್ವಿನ್ 30
ಸ್ಟೀವ್ ಓ’ಕೀಫ್ ಸಿ ಸಾಹ ಬಿ ಜಡೇಜ 6
ನಥನ್ ಲಿಯೋನ್ ಎಲ್‌ಬಿಡಬ್ಲ್ಯು ಉಮೇಶ್ 13
ಜೋಶ್ ಹ್ಯಾಝಲ್‌ವುಡ್ ಔಟಾಗದೆ 2
ಇತರ: 14
ಒಟ್ಟು (ಆಲೌಟ್) 285
ವಿಕೆಟ್ ಪತನ: 1-10, 2-23, 3-61, 4-113, 5-169, 6-204, 7-246, 8-258, 9-279
ಬೌಲಿಂಗ್:
ಆರ್. ಅಶ್ವಿನ್ 28-3-119-4
ರವೀಂದ್ರ ಜಡೇಜ 33-10-65-3
ಉಮೇಶ್ ಯಾದವ್ 13-1-39-2
ಜಯಂತ್ ಯಾದವ್ 10-1-43-1
ಇಶಾಂತ್ ಶರ್ಮ 3-0-6-0
ಭಾರತ ದ್ವಿತೀಯ ಇನ್ನಿಂಗ್ಸ್
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಓ’ಕೀಫ್ 2
ಕೆಎಲ್ ರಾಹುಲ್ ಎಲ್‌ಬಿಡಬ್ಲ್ಯು ಲಿಯೋನ್ 10
ಚೇತೇಶ್ವರ ಪೂಜಾರ ಎಲ್‌ಬಿಡಬ್ಲ್ಯು ಓ’ಕೀಫ್ 31
ವಿರಾಟ್ ಕೊಹ್ಲಿ ಬಿ ಓ’ಕೀಫ್ 13
ಅಜಿಂಕ್ಯ ರಹಾನೆ ಸಿ ಲಿಯೋನ್ ಬಿ ಓ’ಕೀಫ್ 18
ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಓ’ಕೀಫ್ 8
ವೃದ್ಧಿಮಾನ್ ಸಾಹಾ ಎಲ್‌ಬಿಡಬ್ಲ್ಯು ಓ’ಕೀಫ್ 5
ರವೀಂದ್ರ ಜಡೇಜ ಬಿ ಲಿಯೋನ್ 3
ಜಯಂತ್ ಯಾದವ್ ಸಿ ವೇಡ್ ಬಿ ಲಿಯೋನ್ 5
ಇಶಾಂತ್ ಶರ್ಮ ಸಿ ವಾರ್ನರ್ ಬಿ ಲಿಯೋನ್ 0
ಉಮೇಶ್ ಯಾದವ್ ಔಟಾಗದೆ 0
ಇತರ: 12
ಒಟ್ಟು (ಆಲೌಟ್) 107
ವಿಕೆಟ್ ಪತನ: 1-10, 2-16, 3-47, 4-77, 5-89, 6-99, 7-100, 8-102, 9-102
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 2-2-0-0
ನಥನ್ ಲಿಯೋನ್ 14.5-2-53-4
ಸ್ಟೀವ್ ಓ’ಕೀಫ್ 15-4-35-6
ಜೋಶ್ ಹ್ಯಾಝಲ್‌ವುಡ್ 2-0-7-0
ಪಂದ್ಯಶ್ರೇಷ್ಠ: ಸ್ಟೀವ್ ಓ’ಕೀಫ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.