ಕೀನ್ಯಾದ ಖ್ಯಾತ ಓಟಗಾರ್ತಿ ಟಿರೊಪ್ ಕೊಲೆ
Team Udayavani, Oct 16, 2021, 5:24 AM IST
ಇಟೆನ್ (ಕೀನ್ಯಾ): ಕೀನ್ಯಾದ ಖ್ಯಾತ ಓಟಗಾರ್ತಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಆಗ್ನೆಸ್ ಟಿರೊಪ್ ಕೊಲೆಯಾಗಿದ್ದಾರೆ. ಅವರನ್ನು ಬುಧವಾರ ಚಾಕುವಿನಿಂದ ತಿವಿದು ಸಾಯಿಸಲಾಗಿದೆ.
ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾದ ಅವರನ್ನು ಪತಿಯೇ ಕೊಂದಿರಬಹುದೆಂದು ಊಹಿಸಲಾಗಿದೆ. ತನಿಖೆ ಜಾರಿಯಲ್ಲಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟಿರೊಪ್ 5000 ಮೀ. ಓಟದಲ್ಲಿ ಪಾಲ್ಗೊಂಡಿದ್ದರು. ನಾಲ್ಕನೆಯವರಾಗಿ ಗುರಿ ತಲುಪಿದ್ದರು. ಕಳೆದ ತಿಂಗಳಷ್ಟೇ ಜರ್ಮನಿಯಲ್ಲಿ 10 ಕಿ.ಮೀ. ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. 30 ನಿಮಿಷ,1 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು. ಈ ವೇಳೆ ಹಿಂದಿನ ದಾಖಲೆಗಿಂತ 28 ಸೆಕೆಂಡ್ ಮುಂಚಿತವಾಗಿ ಗುರಿ ಸಾಧಿಸಿದ್ದರು. ಹಾಗೆಯೇ 2017, 2019ರ ವಿಶ್ವ ಚಾಂಪಿಯನ್‌ಶಿಪ್‌ನ 10,000 ಮೀ. ಓಟದಲ್ಲಿ ಕಂಚು ಗೆದ್ದಿದ್ದರು.
ಇದನ್ನೂ ಓದಿ:ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಘಟನೆಯ ಹಿನ್ನೆಲೆ
25 ವರ್ಷದ ಆಗ್ನೆಸ್ ಟಿರೊಪ್ ಕೀನ್ಯಾದ ಖ್ಯಾತ ಆ್ಯತ್ಲೀಟ್. ಅವರ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪೊಲೀಸರು ಕೀನ್ಯಾದ ಎಲ್ಗೆಯೊ ಮರಕ್ವೆಟ್ ರಾಜ್ಯದ ಇಟೆನ್ ನಗರದಲ್ಲಿರುವ ಆಗ್ನೆಸ್ ಮನೆಗೆ ತಲುಪಿದ್ದಾಗ, ಆಕೆ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದು ಸ್ಪಷ್ಟವಾಗಿದೆ. ಪ್ರಾಥಮಿಕ ಹಂತದಲ್ಲಿ ಆಗ್ನೆಸ್ ಅವರ ಪತಿಯೇ ಕೊಲೆಗಾರನೆಂದು ಸಂಶಯಿಸಲಾಗಿದೆ.
ಪೊಲೀಸರ ಈ ಸಂಶಯಕ್ಕೆ ಬಲವಾದ ಕಾರಣಗಳಿವೆ. ಕೊಲೆಯಾಗಿದ್ದಾಗ ಟಿರೊಪ್ ಅವರ ಪತಿ ತಮ್ಮ ಕುಟುಂಬಕ್ಕೆ ಕರೆ ಮಾಡಿ, “ನಾನೊಂದು ಪಾಪಕೃತ್ಯವನ್ನೆಸಗಿದ್ದೇನೆ. ದೇವರೇ ನನ್ನನ್ನು ಕ್ಷಮಿಸಬೇಕು’ ಎಂದು ಹೇಳಿ ಅತ್ತಿದ್ದಾರೆ. ಇದನ್ನು ಟಿರೊಪ್ ಕುಟುಂಬವೇ ಪೊಲೀಸರಿಗೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.