ಖೇಲೋ ಇಂಡಿಯಾ ಬಂಪರ್ ಯೋಜನೆ
Team Udayavani, Jul 24, 2018, 10:53 AM IST
ಹೊಸದಿಲ್ಲಿ: ಕೇಂದ್ರ ಸರಕಾರ ಆರಂಭಿಸಿದ ಖೇಲೋ ಇಂಡಿಯಾ ಯೋಜನೆ ಪ್ರಸಕ್ತ ಋತುವಿನಿಂದ ಇನ್ನಷ್ಟು ಆಶಾದಾಯಕ ವಾಗಲಿದೆ. “ಖೇಲೋ ಇಂಡಿಯಾ ಟ್ಯಾಲೆಂಟ್ ಐಡೆಂಟಿಫಿಕೇಶನ್ ಡೆವಲಪ್‌ಮೆಂಟ್’ (ಟಿಐಸಿ) ಯೋಜನೆಯಡಿ ದೇಶದ 734 ಮಂದಿ ಯುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ (ಸಾಯ್) ಸ್ಕಾಲರ್‌ಶಿಪ್ ನೀಡಲು ಯೋಜಿಸಿದೆ. ಭಾರತೀಯ ಕ್ರೀಡಾರಂಗದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸರಕಾರ ತೀರ್ಮಾನಿಸಿದ್ದು, ಕ್ರೀಡಾಪಟು
ಗಳು ಇದರ ಭರಪೂರ ಪ್ರಯೋ ಜನ ಪಡೆದುಕೊಳ್ಳಬೇಕು ಎಂದು ಈ ಸಂದರ್ಭ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದರು.
ಸ್ಕಾಲರ್‌ಶಿಪ್ ಪಡೆಯುವ ಕ್ರೀಡಾ ಪಟುಗಳು ಖೇಲೋ ಇಂಡಿಯಾದಿಂದ ಮಾನ್ಯತೆ ಪಡೆದ ಅಕಾಡೆಮಿ ಗಳಲ್ಲಿ ಉಚಿತ ತರಬೇತಿ ಪಡೆಯ ಲಿದ್ದಾರೆ. 385 ಬಾಲಕರು ಹಾಗೂ 349 ಬಾಲಕಿಯರ ಯಾದಿ ಈಗಾಗಲೇ ಅಂತಿಮಗೊಂಡಿದ್ದು, ಇವರೆಲ್ಲ ವಾರ್ಷಿಕ 1.2 ಲಕ್ಷ ರೂ. ಸ್ಕಾಲರ್‌ಶಿಪ್ ಪಡೆಯಲಿದ್ದಾರೆ. ಇದರಂತೆ ಪ್ರತೀ 3 ತಿಂಗಳಿಗೊಮ್ಮೆ 30 ಸಾವಿರ ರೂ. ಲಭಿಸಲಿದೆ. ಆಟಗಾರರ ಖರ್ಚು, ಚಿಕಿತ್ಸೆ, ಖಾಸಗಿ ಪ್ರಯಾಣ ಮೊದಲಾದ ವೆಚ್ಚಗಳಿಗೆ ಈ ಮೊತ್ತವನ್ನು ಬಳಸಿಕೊಳ್ಳಬಹುದಾಗಿದೆ. ಸ್ಕಾಲರ್‌ಶಿಪ್ ಪಡೆಯಲಿರುವ ಕ್ರೀಡಾ ಪ್ರತಿಭೆಗಳ ಯಾದಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
Bengaluru: ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.