ಸ್ಥಾನವೇನೋ ಏರಿತು; ಪದಕಗಳೂ ಹೆಚ್ಚಬೇಕು: ಖೇಲೋ ಇಂಡಿಯಾ: ಒಂದು ಮೆಟ್ಟಿಲು ಮೇಲೇರಿದ ಕರ್ನಾಟಕ

ಮಹಾರಾಷ್ಟ್ರವನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದ ಹರಿಯಾಣ;ಕರ್ನಾಟಕ 22 ಬಂಗಾರ ಸಾಧನೆ; ನಾಲ್ಕರಿಂದ ಮೂರಕ್ಕೆ ಪ್ರಗತಿ

Team Udayavani, Jun 14, 2022, 7:00 AM IST

ಸ್ಥಾನವೇನೋ ಏರಿತು; ಪದಕಗಳೂ ಹೆಚ್ಚಬೇಕು: ಖೇಲೋ ಇಂಡಿಯಾ: ಒಂದು ಮೆಟ್ಟಿಲು ಮೇಲೇರಿದ ಕರ್ನಾಟಕ

ಪಂಚಕುಲ: ನಾಲ್ಕನೇ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ ಸೋಮವಾರ ಸುಸಂಪನ್ನಗೊಂಡಿದೆ. ಕ್ರೀಡೆಯಲ್ಲಿ ದೇಶಕ್ಕೇ ಮಾದರಿಯಾಗಿ ರುವ ಹರಿಯಾಣ ಈ ಕೂಟದ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಹರಿಯಾಣಕ್ಕೆ ತೀವ್ರ ಪೈಪೋಟಿ ಯೊಡ್ಡಿದ ಮಹಾರಾಷ್ಟ್ರ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ತೃತೀಯ ಸ್ಥಾನದ ಗೌರವ ಸಂಪಾದಿಸಿದೆ. ನಮ್ಮ ರಾಜ್ಯ ಹರಿಯಾಣ ವನ್ನು ಮೀರಿಸುವುದಕ್ಕೆ ಸಜ್ಜಾಗ ಬೇಕಾದುದು ಮುಂದಿನ ಹಾದಿ.

ಹಾಗೆ ನೋಡಹೋದರೆ, ಹಿಂದಿನ ಮೂರೂ ಆವೃತ್ತಿಗಳಲ್ಲಿ ಕರ್ನಾಟಕದ್ದು ಸ್ಥಿರ ಪ್ರದರ್ಶನ. 4ನೇ ಸ್ಥಾನ ಖಾಯಂ. 2018ರಲ್ಲಿ 16 ಚಿನ್ನ, 2019ರಲ್ಲಿ 29 ಚಿನ್ನ ಗೆದ್ದ ಕರ್ನಾಟಕ 2020ರಲ್ಲಿ ಬಂಗಾರದ ಬೇಟೆಯನ್ನು 32ಕ್ಕೆ ಏರಿಸಿಕೊಂಡಿತು. ಆದರೂ 4ನೇ ಸ್ಥಾನ ಬಿಟ್ಟು ಮೇಲೇಳಲಿಲ್ಲ.

ಈ ಬಾರಿ ಜಯಿಸಿದ್ದು 22 ಸ್ವರ್ಣ ಪದಕ. ಪದಕಗಳ ಸಂಖ್ಯೆ ಕಡಿಮೆ ನಿಜ; ಆದರೆ ಮೊದಲ ಸಲ 3ನೇ ಸ್ಥಾನದ ಗೌರವ ಒಲಿದಿದೆ. ಇದನ್ನೇ ಸ್ಫೂರ್ತಿ ಜಿಗಿಹಲಗೆಯಾಗಿ ಬಳಸಿಕೊಂಡು ಪದಕ ಸಂಖ್ಯೆ ಹೆಚ್ಚಿಸಿಕೊಳ್ಳುವತ್ತ ಶ್ರಮಿಸಬೇಕಿದೆ. ಕಳೆದ ಬಾರಿ 122 ಪದಕಗಳೊಂದಿಗೆ ದಿಲ್ಲಿ ತೃತೀಯ ಸ್ಥಾನದಲ್ಲಿತ್ತು. 2021ರಲ್ಲಿ ಕೂಟ ಆಯೋಜನೆಗೊಂಡಿರಲಿಲ್ಲ.
ಕರ್ನಾಟಕದ ಸಾಧನೆಯನ್ನು ಟಾಪ್‌-2 ತಂಡ ಗಳಿಗೆ ಹೋಲಿಸಿ ನೋಡೋಣ. ಹರಿಯಾಣ 52 ಚಿನ್ನ, ಮಹಾರಾಷ್ಟ್ರ 45 ಚಿನ್ನ ಗೆದ್ದಿದೆ. ಈ ಗಳಿಕೆ ಯಲ್ಲಿ ಕರ್ನಾಟಕದ್ದು ದ್ವಿತೀಯ ಸ್ಥಾನಿ ಮಹಾ ರಾಷ್ಟ್ರಕ್ಕಿಂತ ಅರ್ಧದಷ್ಟು ಸಾಧನೆ. ಜತೆಗೆ ದಿಲ್ಲಿ ಯದ್ದೂ ಈಬಾರಿ ಕಳಪೆ ಸಾಧನೆ. ಚಿನ್ನದ ಬೇಟೆ 40ರ ಗಡಿ ತಲುಪಿದರಷ್ಟೇ ಅಗ್ರಸ್ಥಾನ ಅಥವಾ ದ್ವಿತೀಯ ಸ್ಥಾನದ ಗೌರವ ಸಾಧ್ಯ ಎನ್ನುವುದನ್ನು ಗುರಿಯಾಗಿಸಿಕೊಳ್ಳಬೇಕಿದೆ.

ಕ್ರೀಡಾ ಶಕ್ತಿ ದೇಶದ ಶಕ್ತಿ
ಕ್ರೀಡಾ ಶಕ್ತಿ ದೇಶದ ಶಕ್ತಿ ಆಗಬೇಕು ಎಂಬ ಪ್ರಧಾನಿ ಮೋದಿ ಅವರ ಆಶಯ ಈಡೇರಬೇಕಾದರೆ ಪ್ರತಿಯೊಂದು ರಾಜ್ಯಕ್ಕೂ ಹರಿಯಾಣ ಮಾದರಿ ಆಗಬೇಕು. ಅಲ್ಲಿನ ಸರಕಾರ, ಶಾಲಾ ಕಾಲೇಜುಗಳು ಕ್ರೀಡೆಗೆ ನೀಡುವ ಪ್ರೋತ್ಸಾಹ, ತರಬೇತಿ ವ್ಯವಸ್ಥೆ, ಮೂಲ ಸೌಕರ್ಯ, ಅಲ್ಲಿನ ಗಲ್ಲಿ ಗಲ್ಲಿಯಲ್ಲೂ ಬೀಸುತ್ತಿರುವ ಕ್ರೀಡಾ ಹವಾ… ಎಲ್ಲವೂ ಸಾಟಿಯಿಲ್ಲದ್ದು.

ಹರಿಯಾಣಕ್ಕೆ ಹೋಲಿಸಿದರೆ ಉಳಿದೆಲ್ಲ ರಾಜ್ಯಗಳು ಕ್ರೀಡಾ ಪೋಷಣೆಯ ವಿಷಯದಲ್ಲಿ ಹಿಂದುಳಿದಿವೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಆದರೆ ಇಲ್ಲಿನ ಆ್ಯತ್ಲೀಟ್ಸ್‌ ಯಾವ ಕ್ರೀಡೆಯಲ್ಲಿ ಮುಂದಿದ್ದಾರೆ ಎಂಬುದನ್ನು ಗಮನಿಸಿ ಉನ್ನತ ದರ್ಜೆಯ ತರಬೇತಿ ನೀಡುವ ಕೆಲಸ ಆಗಬೇಕಿದೆ. ಈ ಬಾರಿ ಕರ್ನಾಟಕ ಈಜಿನಲ್ಲಿ ಪ್ರಾಬಲ್ಯ ಮೆರೆಯಿತು. 19 ಪದಕಗಳು ಸ್ವಿಮ್ಮಿಂಗ್‌ನಲ್ಲೇ ಬಂದಿವೆ. ಇನ್ನೊಂದೆರಡು ಕ್ರೀಡೆಗಳಲ್ಲಿ ನಮ್ಮವರು ಹೆಚ್ಚಿನ ಸಾಧನೆ ಪ್ರದರ್ಶಿಸಬೇಕಿದೆ.

ಈ ನಿದರ್ಶನವನ್ನು ಗಮನಿಸಿ… ಈ ಸಲ ಹರಿಯಾಣ-ಮಹಾರಾಷ್ಟ್ರ ಒಂದು ಹಂತದಲ್ಲಿ 41 ಚಿನ್ನ ಗೆದ್ದು ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದವು. ಇಲ್ಲಿ ಹರಿಯಾಣದ ಕೈಹಿಡಿದವರು ಬಾಕ್ಸರ್‌ಗಳು. ಕೊನೆಯ ದಿನ 20ರಲ್ಲಿ 10 ಬಾಕ್ಸಿಂಗ್‌ ಚಿನ್ನಗಳನ್ನು ಹರಿಯಾಣವೇ ಬಾಚಿತು. 16 ಬಂಗಾರ ಕುಸ್ತಿಯಲ್ಲೇ ಒಲಿಯಿತು. ಅಗ್ರಸ್ಥಾನಕ್ಕೆ ನೆಗೆಯಲು ಇಷ್ಟೇ ಸಾಕು! ಇಂಥ ಸಾಧನೆ ಕರ್ನಾಟಕಕ್ಕೆ ಮಾದರಿ ಆಗಬೇಕಿದೆ.

ಟಾಪ್ ನ್ಯೂಸ್

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು… ಸುನಿಲ್‌ ಆರೋಪ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Arjun Tendulkar: 5 ವಿಕೆಟ್‌ ಕೆಡವಿದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಆಯ್ಕೆಗೆ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.