ಪಂಜಾಬ್ ಗೆದ್ದರೆ ಶೂ ಮೂಲಕ ಶಾಂಪೇನ್ ಕುಡಿದು ಸಂಭ್ರಮ!
Team Udayavani, Mar 30, 2019, 6:00 AM IST
ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಸ್ಟ್ರೇಲಿಯನ್ ಕ್ರಿಕೆಟಿಗ ಆಂಡ್ರ್ಯೂ ಟೈ ವಿಶೇಷ ಸಂಭ್ರಮಾ ಚರಣೆಯ ಬಗ್ಗೆ ಹೇಳಿಕೊಂಡಿದ್ದಾರೆ. ಪಂಜಾಬ್ ತಂಡ ಈ ಬಾರಿ ಐಪಿಎಲ್ ಚಾಂಪಿಯನ್ ಆದರೆ ತಾನು ಶೂ ಒಳಗೆ ಶಾಂಪೇನ್ ಸುರಿದು ಕುಡಿದು ಸಂಭ್ರಮಿಸುವುದಾಗಿ ಹೇಳಿದ್ದಾರೆ.
ಭಾರತದ ಮಟ್ಟಿಗೆ “ಡ್ರಿಂಕಿಂಗ್ ಫ್ರಾಮ್ ಶೂಸ್’ ಎಂಬುದು ವಿಚಿತ್ರ ಕಲ್ಪನೆ. ಆದರೆ ಆಸ್ಟ್ರೇಲಿಯದಲ್ಲಿ ಇದು ಮಾಮೂಲು. ಅಸಹ್ಯವೆನಿಸಿದರೂ ಕ್ರೀಡಾ ಸಂಭ್ರಮಾಚರಣೆಯ ವೇಳೆ ತಾವು ಧರಿಸಿದ ಶೂ ಒಳಗೆ ಶಾಂಪೇನ್ ಸುರಿದು, ಶೂವನ್ನು ಎತ್ತಿ ಆ ಶಾಂಪೇನ್ ಕುಡಿಯುವ ಸಂಪ್ರದಾಯ ಕಾಂಗರೂ ನಾಡಿನಲ್ಲಿದೆ.
2016ರಲ್ಲಿ ಇಲ್ಲಿನ ಮೋಟೊ ಜಿಪಿ ರೈಡರ್ ಜಾಕ್ ಮಿಲ್ಲರ್ ಮೊದಲ “ಪ್ರೀಮಿಯರ್ ಕ್ಲಾಸ್’ ಗೆಲುವಿನ ಬಳಿಕ ಹೀಗೆ ಮಾಡಿದ್ದರು. ಮತ್ತೋರ್ವ ಫಾರ್ಮುಲಾ-1 ಚಾಲಕ ಡೇನಿಯಲ್ ರಿಕಾರ್ಡೊ ಕೂಡ ಶೂ-ಶಾಂಪೇನ್ ಸವಿದು ಸಂಭ್ರಮಿಸಿದ್ದರು. ಆ್ಯಂಡ್ರೂ ಟೈ ಫಾರ್ಮುಲಾ-1ನ ದೊಡ್ಡ ಫ್ಯಾನ್ ಆಗಿರುವುದರಿಂದ ಇದನ್ನು ಅನುಸರಿಸಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.