ಕಿಂಗ್ಸ್ ಇಲೆವೆನ್ಗೆ ಎರಡು ತವರು
Team Udayavani, Jan 7, 2018, 6:55 AM IST
ಮೊಹಾಲಿ: ಪ್ರೀತಿ ಜಿಂಟಾ ಸಹ ಮಾಲಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ಗ ತವರಿನ ಮೊಹಾಲಿ ಅಂಗಳದ ಮೇಲೆ ನಿರಾಸೆ ಮೂಡಿದೆಯೇ? ಹೌದು ಎನ್ನುತ್ತದೆ ಇತ್ತೀಚಿನ ವಿದ್ಯಮಾನ. 2018ರ ಐಪಿಎಲ್ನಲ್ಲೂ 2 ತವರಿನ ಅಂಗಳಗಳನ್ನು ಬಳಸಿಕೊಳ್ಳುವುದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಯೋಜನೆ. ಮೊಹಾಲಿ ಜತೆಗೆ ಇಂದೋರ್ ಕೂಡ ಮತ್ತೂಮ್ಮೆ “ಹೋಮ್ ಗ್ರೌಂಡ್’ ಆಗಿರಲಿದೆ ಎಂಬುದು ಖಾತ್ರಿಯಾಗಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ನಿಂದ (ಪಿಸಿಎ) ಐಪಿಎಲ್ ತಂಡಕ್ಕೆ ಸೂಕ್ತ ಪ್ರೋತ್ಸಾಹ ಲಭಿಸದ ಕಾರಣ ಮೊಹಾಲಿಯಿಂದ ಬಿಡುಗಡೆಗೊಳಿಸುವಂತೆ ಕಳೆದ ಆಗಸ್ಟ್ನಲ್ಲೇ ಕಿಂಗ್ಸ್ ಇಲೆವೆನ್ ಮಾಲಕರು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಪಂಜಾಬ್ ಸರಕಾರ ಮತ್ತು ಪಿಸಿಎ ನಡುವೆ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳು ಇತ್ಯರ್ಥವಾಗದಿದ್ದುದೇ ಇದಕ್ಕೆ ಕಾರಣ.
ಈ ಕುರಿತು ಪ್ರತಿಕ್ರಿಯಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್, “ಸರಾಕರ ಮತ್ತು ಪಂಜಾಬ್ ಕ್ರಿಕೆಟ್ ಮಂಡಳಿ ನಡುವಿನ ಭದ್ರತಾ ವಿಚಾರಗಳು ತಾರ್ಕಿಕ ಅಂತ್ಯ ಕಂಡಿವೆ. ಮೊಹಾಲಿಯಲ್ಲಿ ಆಡುವುದು ನಮ್ಮ ಪಾಲಿನ ಸಂತೋಷದ ವಿಷಯ. ಆದರೆ ಇಲ್ಲಿ ನಾವು 4 ತವರಿನ ಪಂದ್ಯಗಳನ್ನಷ್ಟೇ ಆಡಲಿದ್ದು, ಉಳಿದ ಮೂರನ್ನು ಇಂದೋರ್ನಲ್ಲಿ ಆಡಲು ನಿರ್ಧರಿಸಿದ್ದೇವೆ. ಕಳೆದ ವರ್ಷ ಇಂದೋರ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಪ್ರೋತ್ಸಾಹ ಲಭಿಸಿತ್ತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.