ರನ್ ಪರ್ವತ ಏರಿ ಗೆದ್ದ ಕೆಕೆಆರ್
Team Udayavani, May 13, 2018, 12:23 PM IST
ಇಂದೋರ್: “ಹೋಳ್ಕರ್ ಸ್ಟೇಡಿಯಂ’ನಲ್ಲಿ ಹೊಡಿಬಡಿ ಆಟದ ಮೂಲಕ ರನ್ ಪರ್ವತ ಏರಿದ ಕೋಲ್ಕತಾ ನೈಟ್
ರೈಡರ್ 31 ರನ್ನುಗಳಿಂದ ಆತಿಥೇಯ ಕಿಂಗ್ಸ್ ಇಲೆವೆನ್‌ಗೆ ಸೋಲುಣಿಸಿದೆ. ಇದರೊಂದಿಗೆ ಪ್ಲೇ-ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಶನಿವಾರದ ಈ ಮಹತ್ವದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 6 ವಿಕೆಟಿಗೆ 245 ರನ್ ಸೂರೆಗೈದರೆ, ದಿಟ್ಟ ರೀತಿಯಲ್ಲೇ ಜವಾಬು ನೀಡಿದ ಪಂಜಾಬ್ 8ಕ್ಕೆ 214ರ ತನಕ ಬಂದು ಶರಣಾಯಿತು. 75
ರನ್ನಿನ ಜತೆಗೆ ಒಂದು ವಿಕೆಟ್ ಉರುಳಿಸಿದ ಸುನೀಲ್ ನಾರಾಯಣ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇದು 12 ಪಂದ್ಯಗಳಲ್ಲಿ ಕೆಕೆಆರ್ ಸಾಧಿಸಿದ 6ನೇ ಜಯ. 12 ಅಂಕಗಳೊಂದಿಗೆ ದಿನೇಶ್ ಪಡೆ 4ನೇ ಸ್ಥಾನಕ್ಕೆ
ನೆಗೆದಿದೆ. ಸೋಲಿನ ಹೊರತಾಗಿಯೂ ಪಂಜಾಬ್ 3ನೇ ಸ್ಥಾನದಲ್ಲೇ ನೆಲೆಸಿದೆ. ಈ ಫಲಿತಾಂಶ ದೊಂದಿಗೆ ಮುಂಬೈ
ಇಂಡಿಯನ್ಸ್ 5ನೇ ಸ್ಥಾನಕ್ಕೆ ಕುಸಿಯಿತು.
ಕೋಲ್ಕತಾದಿಂದ ರನ್ ಪರ್ವತ: ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್ ಪರ ಕ್ರೀಸ್ ಇಳಿದವರೆಲ್ಲ ಮುನ್ನುಗ್ಗಿ ಬಾರಿಸ
ತೊಡಗಿದರು. ಒಟ್ಟು 15 ಸಿಕ್ಸರ್, 24 ಬೌಂಡರಿ ಸಿಡಿ ಯಲ್ಪಟ್ಟಿತು. ಕೆಕೆಆರ್ ರನ್ ಪರ್ವತವನ್ನೇರಿ ಕುಳಿತಿತು.
ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ 4ನೇ ಸರ್ವಾಧಿಕ ಗಳಿಕೆ. 2013ರ ಬೆಂಗಳೂರು ಪಂದ್ಯದಲ್ಲಿ ಪುಣೆ ವಾರಿಯರ್ ವಿರುದ್ಧ ಆರ್‌ಸಿಬಿ 5ಕ್ಕೆ 263 ರನ್ ಪೇರಿಸಿದ್ದು ದಾಖಲೆ. ಇದು ಕೆಕೆಆರ್‌ದ ಸರ್ವಾಧಿಕ ಗಳಿಕೆಯೂ ಹೌದು. ಪ್ರಥಮ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ 3ಕ್ಕೆ 222 ರನ್ ಗಳಿಸಿದ್ದು ಕೋಲ್ಕತಾದ ಈವರೆಗಿನ ಅತೀ ಹೆಚ್ಚಿನ ಮೊತ್ತವಾಗಿತ್ತು.
ನಾರಾಯಣ್ ಸಿಂಹಪಾಲು: ಕೆಕೆಆರ್‌ನ ಈ ದೊಡ್ಡ ಮೊತ್ತದಲ್ಲಿ ಆರಂಭಕಾರ ಸುನೀಲ್ ನಾರಾಯಣ್ ಅವರದು ಸಿಂಹಪಾಲು. ಪವರ್ ಪ್ಲೇ ವೇಳೆ ತನ್ನ ಎಂದಿನ ಬ್ಯಾಟಿಂಗ್ ಖದರ್ ತೋರಿದ ಈ ಕೆರಿಬಿಯನ್ ಕ್ರಿಕೆಟಿಗ,36 ಎಸೆತಗಳಿಂದ ಸರ್ವಾಧಿಕ 75 ರನ್ ಬಾರಿಸಿದರು. ಪಂಜಾಬ್ ಎಸೆತಗಳಿಗೆ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ
ರುಚಿ ತೋರಿಸಿದರು. ಮೊದಲ ವಿಕೆಟಿಗೆ ಕ್ರಿಸ್ ಲಿನ್ ಜತೆ 5.2 ಓವರ್‌ಗಳಿಂದ 53 ರನ್ ಪೇರಿಸಿದರು. ಲಿನ್ ಗಳಿಕೆ
27 ರನ್ (17 ಎಸೆತ, 2 ಬೌಂಡರಿ, 2 ಸಿಕ್ಸರ್). ನಾರಾಯಣ್ ಮತ್ತು ರಾಬಿನ್ ಉತ್ತಪ್ಪ 2ನೇ ವಿಕೆಟಿಗೆ 6.1 ಓವರ್‌ಗಳಿಂದ 75 ರನ್ ರಾಶಿ ಹಾಕಿ ಬೃಹತ್ ಮೊತ್ತದ ಸೂಚನೆ ರವಾನಿಸಿದರು. ಉತ್ತಪ್ಪ 17 ಎಸೆತ ಎದುರಿಸಿ 24 ರನ್ ಹೊಡೆದರು (2 ಬೌಂಡರಿ, 1 ಸಿಕ್ಸರ್).
ನಾರಾಯಣ್ ಮತ್ತು ಉತ್ತಪ್ಪ ಒಂದೇ ರನ್ ಅಂತರದಲ್ಲಿ ನಿರ್ಗಮಿಸಿದರೂ ಆ್ಯಂಡ್ರೆ ರಸೆಲ್ ಮತ್ತು ದಿನೇಶ್ ಕಾರ್ತಿಕ್ ಇನ್ನಷ್ಟು ಬಿರುಸಾಗುವ ಮೂಲಕ ಪಂಜಾಬ್ ಬೌಲರ್‌ಗಳಿಗೆ ಉಳಿಗಾಲ ಇಲ್ಲದಂತೆ ಮಾಡಿದರು.
ರಾಹುಲ್ ದಿಟ್ಟ ಆರಂಭ: ದೊಡ್ಡ ಮೊತ್ತ ಎದುರಿಗಿದ್ದರೂ ಎದೆಗುಂದದೇ ಬ್ಯಾಟ್ ಬೀಸತೊಡಗಿದ ರಾಹುಲ್ ಪಂಜಾ ಬ್‌ಗ ದಿಟ್ಟ ಆರಂಭ ಒದಗಿಸಿದರು. ಇವರು ಗೇಲ್ ಜತೆ ಸೇರಿಕೊಂಡು ರನ್ ಪೇರಿಸುತ್ತಿದ್ದುನ್ನು ಕಂಡಾಗ ಪಂಜಾಬ್ ಅಚ್ಚರಿಯ ಫಲಿತಾಂಶ ಸಾಧಿಸೀತೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಕೋಲ್ಕತಾ ಬೌಲರ್‌ಗಳು ಮೇಲುಗೈ ಸಾಧಿಸಿದರು.
9ನೇ ಓವರ್ ತನಕ ಕ್ರೀಸಿಗೆ ಅಂಟಿಕೊಂಡ ರಾಹುಲ್ ಬರೀ 29 ಎಸೆತ ಎದುರಿಸಿ 66 ರನ್ ಸಿಡಿಸಿದರು. 7 ಸಿಕ್ಸರ್, 2 ಬೌಂಡರಿ ಸಿಡಿಸಿ ಕೆಕೆಆರ್ ಬೌಲರ್‌ಗಳಲ್ಲಿ ಭೀತಿಯೊಡಿದ್ದರು.
ಪಂದ್ಯದ ತಿರುವು
ಗೇಲ್ ಮತ್ತು ಮಾಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ಬಳಿಕ ಕರುಣ್ ನಾಯರ್ ಅವರನ್ನು ಅಗ್ಗಕ್ಕೆ ಉರುಳಿಸಿದ ವೇಗಿ ಆ್ಯಂಡ್ರೆ ರಸೆಲ್ ಕೆಕೆಆರ್‌ಗೆ ಮೇಲುಗೈ ಸಾಧಿಸುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರು
ಕೋಲ್ಕತಾ 20 ಓವರ್‌ಗೆ 245/6 (ಸುನೀಲ್ ನಾರಾಯಣ್ 75, ದಿನೇಶ್ ಕಾರ್ತಿಕ್ 50, ಆ್ಯಂಡ್ರೂé 41ಕ್ಕೆ 4) ಪಂಜಾಬ್ 20 ಓವರ್‌ಗೆ 214/8 (ಕೆ.ಎಲ್. ರಾಹುಲ್ 66, ಆರ್. ಅಶ್ವಿನ್ 45, ಆ್ಯಂಡ್ರೆ ರಸೆಲ್ 41ಕ್ಕೆ 3)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.