IPL 2020: ಸತತ ಸೋಲಿನಿಂದ ಹೊರಬಂದ ಪಂಜಾಬ್
Team Udayavani, Oct 15, 2020, 11:01 PM IST
ಶಾರ್ಜಾ: ಸತತ ಐದು ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ಗುರುವಾರದ ಐಪಿಎಲ್ ಮುಖಾಮುಖೀಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ಇದು ಆರ್‌ಸಿಬಿಗೆ ಪಂಜಾಬ್ ವಿರುದ್ಧ ಎದುರಾದ ಕೂಟದ ಎರಡನೇ ಸೋಲಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 171 ರನ್ ಗಳಿಸಿ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್ 2 ವಿಕೆಟಿಗೆ 177 ರನ್ ಗಳಿಸಿ ಗೆಲುವು ದಾಖಲಿಸಿತು.
ಪಂಜಾಬ್ ಚೇಸಿಂಗ್ ವೇಳೆ ನಾಯಕ ರಾಹುಲ್ ಮತ್ತು ಅಗರ್ವಾಲ್ ಆರಂಭ ಸ್ಫೋಟಕ ಬ್ಯಾಟಿಂಗ್‌ನಿಂದ ಕೂಡಿತು. ಈ ಜೋಡಿ ಮೊದಲ ವಿಕೆಟಿಗೆ 78 ರನ್ ಸೂರಗೈದರು.
ರಾಹುಲ್ -ಗೇಲ್ ಅಬ್ಬರ
2ನೇ ವಿಕೆಟಿಗೆ ಕ್ರೀಸ್‌ಗಿಳಿದ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗಿಗೆ ಮುಂದಾದರೂ ಅನಂತರದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರ್ತಿಗೊಳಿಸಿದರು. ಗೇಲ್ ಗಳಿಕೆ 53 ( 1ಬೌಂಡರಿ, 5 ಸಿಕ್ಸರ್).
ರಾಹುಲ್ ಕೂಡ ಅಜೇಯರಾಗಿ ಉಳಿದು 49 ಎಸೆತಗಳಿಂದ 61ರನ್ ಬಾರಿಸಿದರು. ರಾಹುಲ್ ಒಟ್ಟು 1 ಬೌಂಡರಿ, 5 ಸಿಕ್ಸರ್ ಬಾರಿಸಿ ಆರ್‌ಸಿಬಿ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು.
ಆರ್‌ಸಿಬಿಗೆ ಆರಂಭಿಕರಾದ ಫಿಂಚ್ ಮತ್ತು ಪಡಿಕ್ಕಲ್ ಬೌಂಡರಿ, ಸಿಕ್ಸರ್ ಮೂಲಕ ಚುರುಕಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕುವ ಮುನ್ಸೂಚನೆ ನೀಡಿದರು. ಆದರೆ ದ್ವಿತೀಯ ಸ್ಪೆಲ್ ಎಸೆಯಲು ಬಂದ ಯುವ ವೇಗಿ ಆರ್ಷದೀಪ್ ಸಿಂಗ್ ಅವರು ಪಡಿಕ್ಕಲ್ (18) ವಿಕೆಟ್ ಬೇಟೆಯಾಡುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ಒಂದು ವಿಕೆಟ್ ಕಳೆದುಕೊಂಡರೂ ಆರ್‌ಸಿಬಿಗೆ ದೊಡ್ಡ ಆಘಾತವೇನೂ ಸಂಭವಿಸಲಿಲ್ಲ ಪವರ್ ಪ್ಲೇ ಅವಧಿಯಲ್ಲಿ 57 ರನ್ ಒಟ್ಟುಗೂಡಿತು.
ವನ್‌ಡೌನ್‌ನಲ್ಲಿ ಆಡಲಿಳಿದ ನಾಯಕ ವಿರಾಟ್ ಕೊಹ್ಲಿ ಜತೆ ಸೇರಿ ಫಿಂಚ್ ಮತ್ತೆ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಲು ಮುಂದಾದರು ಆದರೆ ಮುರುಗನ್ ಅಶ್ವಿನ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಒಂದು ಜೀವದಾನ ಪಡೆದ ಫಿಂಚ್ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಮರು ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ನಿರಾಶೆ ಮೂಡಿಸಿದರು. ಪಿಂಚ್ ಗಳಿಕೆ 20 (ಎರಡು ಬೌಂಡರಿ, ಒಂದು ಸಿಕ್ಸರ್).
ಮೂರನೇ ವಿಕೆಟಿಗೆ ಕ್ರೀಸ್ ಗಿಳಿದ ವಾಷಿಂಗ್ಟನ್ ಸುಂದರ್ ಹೆಚ್ಚು ಕಾಲ ಉಳಿಯಲಿಲ್ಲ 13 ರನ್ ಗಳಿಸಿ ಎಂ. ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
ದುಬೆ-ಕೊಹ್ಲಿ ಆಸರೆ
ಆಲ್‌ರೌಂಡರ್ ದುಬೆ ಮತ್ತು ವಿರಾಟ್ ಕೊಹ್ಲಿ ಸೇರಿಕೊಂಡು ತಂಡದ ಮೊತ್ತವನ್ನು ಹಿಗ್ಗಿಸಿದರು. 4ನೇ ವಿಕೆಟಿಗೆ ಈ ಜೋಡಿ 41 ರನ್ ಸೂರಗೈದಿತು. ದುಬೆ 19 ಎಸೆತಗಳಿಂದ 23 ರನ್ ಬಾರಿಸಿದರು. ಕಳೆದ ಪಂದ್ಯದ ಹೀರೋ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು ಕೇವಲ 2 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿಯೂ ಔಟಾದರು. ವಿರಾಟ್ 18 ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿ 48 ರನ್ ಬಾರಿಸಿದರು. ಈ ಎರಡೂ ವಿಕೆಟ್ ಶಮಿ ಪಾಲಾಯಿತು.
18 ಓವರ್‌ಗೆ 6ಕ್ಕೆ 136ರನ್ ಗಳಿಸಿ 150ರ ಗಡಿ ದಾಟಲು ಪರದಾಡುತಿದ್ದ ಆರ್‌ಸಿಬಿಗೆ ಬೌಲರ್‌ಗಳಾದ ಕ್ರಿಸ್ ಮಾರಿಸ್ ಮತ್ತು ಇಸುರು ಉದಾನ ಸೇರಿಕೊಂಡು ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರೂ ಅಂತಿಮ ಓವರ್ ಎಸೆದ ಶಮಿ 24 ರನ್ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಮಾರಿಸ್ 8 ಎಸೆತಗಳಿಂದ 25 ರನ್ ಸಿಡಿಸಿ ಅಜೇಯರಾಗಿ ಉಳಿದರು. ಉದಾನ ಗಳಿಕೆ ಅಜೇಯ 10 ರನ್.
ಗೇಲ್ ಇನ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನ್ಪೋಟಕ ಆಟಗಾರ ಕ್ರಿಸ್ ಗೇಲ್ ಅವರಿಗೆ ಕಡೆಗೂ ಆಡುವ ಅವಕಾಶ ಲಭಿಸಿತು. ಈ ಮೂಲಕ 13ನೇ ಆವೃತ್ತಿಯ ಮೊದಲ ಐಪಿಎಲ್ ಅಭಿಯಾನ ಆರಂಭಿಸಿದರು. ಕಳೆದ ಪಂದ್ಯದಲ್ಲಿಯೇ ಆಡಬೇಕಿದ್ದ ಗೇಲ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ಗೇಲ್ ಆಡಲಿಳಿದರು. ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಆಸೀಸ್ ಆಲ್‌ರೌಂಡರ್ ಗ್ಲೆàಮ್ ಮ್ಯಾಕ್ಸ್‌ವೆಲ್‌ಗೆ ತಂಡ ಮತ್ತೆ ವಿಶ್ವಾಸವನ್ನಿಟ್ಟು ಈ ಪಂದ್ಯದಲ್ಲಿಯೂ ಅವಕಾಶ ನೀಡಿತು. ಅಭ್ಯಾಸದ ವೇಳೆ ಗಾಯದ ಸಮಸ್ಯೆಗೆ ಸಿಲುಕಿದ ಮನ್‌ದೀಪ್ ಸಿಂಗ್ ಬದಲಿಗೆ ದೀಪಕ್ ಹೂಡಗೆ ಅವಕಾಶ ನೀಡಲಾಯಿತು. ಹೂಡ ಅವರಿಗೂ ಇದು ಈ ಬಾರಿಯ ಮೊದಲ ಐಪಿಎಲ್ ಪಂದ್ಯವಾಗಿತ್ತು.
ಧೋನಿ ಸಲಹೆಯಿಂದ ನೆರವು
“ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಎಂ.ಎಸ್. ಧೋನಿ ಅವರ ನಾಯಕತ್ವದಲ್ಲಿ ಆಡಿದ್ದು ಇಂದು ನಾನು ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ಸುಂದರ್ ನಾನು ಮಾಹಿ ಅವರ ತಂಡದಲ್ಲಿ ಆಡಿದ್ದು ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು. ಇಂದು ಗುಣಮಟ್ಟದ ಬೌಲಿಂಗ್ ನಡೆಸುತ್ತಿದ್ದೇನೆ ಎಂದರೆ ಅದರ ಹಿಂದೆ ಮಾಹಿಯ ಶ್ರಮವಿದೆ ಬ್ಯಾಟ್ಸ್‌ಮನ್‌ಗಳ ಚಲನವಲನಗಳನ್ನು ಗಮನಿಸುವ ಧೋನಿ ಬೌಲರ್‌ಗಳಿಗೆ ಸೂಕ್ತ ಸಲಹೆ ನೀಡುತ್ತಾರೆ. ಅವರು ಅಂದು ನೀಡಿದ ಕೆಲ ಸಲಹೆಗಳಿಂದ ಸಾಕಷ್ಟು ಕಲಿತಿದ್ದು ಹಂತಹಂತವಾಗಿ ಬೆಳೆಯುತ್ತಿದ್ದೇನೆ ಎಂದು ಹೇಳಿ¨ªಾರೆ.
ಸ್ಕೋರ್ ಪಟ್ಟಿ
ಬೆಂಗಳೂರು
ಆರನ್ ಫಿಂಚ್ ಬಿ ಅಶ್ವಿನ್ 20
ಪಡಿಕ್ಕಲ್ ಸಿ ಪೂರನ್ ಬಿ ಆರ್ಷದೀಪ್ 18
ವಿರಾಟ್ ಸಿ ರಾಹುಲ್ ಬಿ ಶಮಿ 48
ಸುಂದರ್ ಸಿ ಜೋರ್ಡನ್ ಬಿ ಅಶ್ವಿನ್ 13
ಶಿವಂ ದುಬೆ ಸಿ ರಾಹುಲ್ ಬಿ ಜೋರ್ಡನ್ 23
ವಿಲಿಯರ್ ಸಿ ಹೂಡ ಬಿ ಶಮಿ 2
ಕ್ರಿಸ್ ಮಾರಿಸ್ ಔಟಾಗದೆ 25
ಉದಾನ ಔಟಾಗದೆ 10
ಇತರ 12
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 171
ವಿಕೆಟ್ ಪತನ: 1-38, 2-62, 3-86, 4-127, 5-134, 6-136.
ಬೌಲಿಂಗ್:
ಮ್ಯಾಕ್ಸ್‌ವೆಲ್ 4-0-28-0
ಮೊಹಮ್ಮದ್ ಶಮಿ 4-0-45-2
ಆರ್ಷದೀಪ್ 2-0-20-1
ರವಿ ಬಿಶ್ನೋಯಿ 3-0-29-0
ಎಂ. ಅಶ್ವಿನ್ 4-0-23-2
ಜೋರ್ಡನ್ 3-0-20-1
ಪಂಜಾಬ್
ಕೆ. ಎಲ್. ರಾಹುಲ್ ಅಜೇಯ 61
ಅಗರ್ವಾಲ್ ಬಿ ಚಹಲ್ 45
ಕ್ರಿಸ್ ಗೇಲ್ ರನೌಟ್ 53
ನಿಕೋಲಸ್ ಪೂರನ್ ಔಟಾಗದೆ 6
ಇತರ 12
ಒಟ್ಟು (20 ಓವರ್‌ಗಳಲ್ಲಿ 2 ವಿಕೆಟಿಗೆ) 177
ವಿಕೆಟ್ ಪತನ:
ಬೌಲಿಂಗ್:
ಕ್ರಿಸ್ ಮಾರಿಸ್ 4-0-22-0
ನವದೀಪ್ ಸೈನಿ 4-0-21-0
ಚಹಲ್ 3-0-35-1
ಇಸುರು ಉದಾನ 2-0-14-0
ಮೊಹಮ್ಮದ್ ಸಿರಾಜ್ 3-0-44-0
ವಾಷಿಂಗ್ಟನ್ ಸುಂದರ್ 4-0-38-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.