10 ಕಿ.ಮೀ. ಓಟ: ಕಿಪ್ರುಟೊ ವಿಶ್ವದಾಖಲೆ
Team Udayavani, Jan 13, 2020, 6:00 AM IST
ವೆಲೆನ್ಸಿಯಾ: ಕೀನ್ಯಾದ ರೋನೆಕ್ಸ್ ಕಿಪ್ರುಟೊ 10 ಕಿ.ಮೀ. ರಸ್ತೆ ಓಟದಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ರವಿವಾರ ಇಲ್ಲಿ ನಡೆದ ಸ್ಪರ್ಧೆಯನ್ನು ಅವರು 26 ನಿಮಿಷ, 24 ಸೆಕೆಂಡ್‌ಗಳಲ್ಲಿ ಮುಗಿಸಿದರು.
ಹಿಂದಿನ ವಿಶ್ವದಾಖಲೆ ಉಗಾಂಡದ ಜೋಶುವ ಚೆಪ್ಟೆಗಿ ಹೆಸರಲ್ಲಿತ್ತು. ಕಳೆದ ತಿಂಗಳಲ್ಲಷ್ಟೇ ಅವರು ವೆಲೆನ್ಸಿಯಾದಲ್ಲೇ ದಾಖಲೆ ನಿರ್ಮಿಸಿದ್ದರು. ಇದನ್ನು ಕಿಪ್ರುಟೊ 14 ಸೆಕೆಂಡ್‌ಗಳಿಂದ ಉತ್ತಮಗೊಳಿಸಿದರು. ಕೀನ್ಯಾದವರೇ ಆದ ಬರ್ನಾರ್ಡ್ ಕಿಮೆಲಿ ದ್ವಿತೀಯ (27:12), ಸ್ವಿಜರ್‌ಲ್ಯಾಂಡಿನ ಜೂಲಿಯನ್ ವಾಂಡರ್ ತೃತೀಯ ಸ್ಥಾನ ಪಡೆದರು (27:13).
5 ಕೀ.ಮೀ. ದೂರವನ್ನೂ ಅತೀ ಕಡಿಮೆ ಅವಧಿಯಲ್ಲಿ ಪೂರ್ತಿಗೊಳಿಸುವ ಮೂಲಕವೂ ರೋನೆಕ್ಸ್ ಕಿಪ್ರುಟೊ ವಿಶ್ವ ವಿಕ್ರಮಗೈದರು. ಇದಕ್ಕೆ ತಗುಲಿದ ಅವಧಿ 13 ನಿಮಿಷ, 18 ಸೆಕೆಂಡ್‌ಗಳು.
ಇದಕ್ಕೂ ಮುನ್ನ 2018ರ ಪರಗ್ವೆ ಕೂಟದಲ್ಲಿ ಕಿಪ್ರುಟೊ 10 ಕಿ.ಮೀ. ಓಟದಲ್ಲಿ ವಿಶ್ವದಾಖಲೆಯನ್ನು ಸಮೀಪಿಸಿದ್ದರು. ಅಂದು ಈ ದೂರವನ್ನು 26 ನಿಮಿಷ, 44 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.