Kiran Pahal: ವನಿತೆಯರ 400 ಮೀ.; ಕಿರಣ್ ಪಹಲ್ ಒಲಿಂಪಿಕ್ಸ್ ಗೆ ಅರ್ಹತೆ
Team Udayavani, Jun 27, 2024, 10:47 PM IST
ಪಂಚಕುಲ: ಹರಿಯಾಣದ ಕಿರಣ್ ಪಹಲ್ ಅವರು ಇಲ್ಲಿ ಸಾಗುತ್ತಿರುವ ರಾಷ್ಟ್ರೀಯ ಅಂತಾರಾಜ್ಯ ಆ್ಯತ್ಲೆಟಿಕ್ ಕೂಟದ ವನಿತೆಯರ 400 ಮೀ. ಸೆಮಿಫೈನಲ್ ಹೋರಾಟದಲ್ಲಿ 50.92 ಸೆ.ನಲ್ಲಿ ಗುರಿ ತಲುಪಿದ ಸಾಧನೆ ಮಾಡಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿಕೊಂಡರು.
ವನಿತೆಯರ 400 ಮೀ. ಸ್ಪರ್ಧೆಗೆ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಸ್ಪರ್ಧಿಗಳು 50.95 ಸೆ.ನಲ್ಲಿ ಗುರಿ ತಲುಪಿದ ಸಾಧನೆ ಮಾಡಬೇಕಿತ್ತು. ಕಿರಣ್ ಈ ಗುರಿಗಿಂತ ಮೊದಲೇ ತಲುಪಿದ್ದರಿಂದ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದರು. ಇದು ಈ ಋತುವಿನಲ್ಲಿ ಅವರ ಶ್ರೇಷ್ಠ ನಿರ್ವಹಣೆಯೂ ಆಗಿದೆ. ಅವರು 51 ಸೆ.ನೊಳಗೆ ಸ್ಪರ್ಧೆ ಮುಗಿಸಿದ ಭಾರತದ ಎರಡನೇ ವನಿತೆಯಾಗಿದ್ದಾರೆ.
53.44 ಸೆ.ನಲ್ಲಿ ಗುರಿ ತಲುಪಿದ ಗುಜರಾತ್ನ ದೇವಿ ಅನಿಬಾ ಜಲಾ ಬೆಳ್ಳಿ ಮತ್ತು ಕೇರಳದ ಸ್ನೇಹಾ ಕೆ. ಕಂಚು (53.51 ಸೆ.) ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ
T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
World Cup ಅಂತೂ ದ್ರಾವಿಡ್ಗೆ ಸಿಕ್ತು: ಆಟಗಾರನಾಗಿ, ನಾಯಕನಾಗಿ ವಿಫಲ, ಕೋಚ್ ಆಗಿ ವಿಜಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.