![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 13, 2018, 12:47 PM IST
ಕುಂದಾಪುರ: ಅಂಧತ್ವವನ್ನು ಮೆಟ್ಟಿ ನಿಂತು ಚೆಸ್ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸ್ಥಾಪಿಸುತ್ತಿರುವ ಕನ್ನಡದ ಕ್ರೀಡಾ ಪ್ರತಿಭೆ ಕಿಶನ್ ಗಂಗೊಳ್ಳಿ. 26ರ ಹರೆಯದ ಪ್ರತಿಭಾವಂತ ಕಿಶನ್ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇಕನಾಮಿಕ್ಸ್ ಎಂ.ಎ.ಯಲ್ಲಿ ಎರಡನೇ ರ್‍ಯಾಂಕ್ ಪಡೆದವರು. ಕಲಿಕೆಗಾಗಲೀ, ಚೆಸ್‌ಗಾಗಲೀ ಅವರಿಗೆ ಜನ್ಮತಃ ಅಂಧತ್ವ ಹಿನ್ನಡೆಯಾಗಿಲ್ಲ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕಲೈಕಾರ್‌ನವರಾಗಿದ್ದು, ಶಿವಮೊಗ್ಗದ ವಿನೋಬಾ ನಗರದ ಬ್ಯೂಟಿಶಿಯನ್ ಗೀತಾ ಗಂಗೊಳ್ಳಿ ಅವರ ಏಕೈಕ ಪುತ್ರ. ಅಕ್ಷಯಕಲ್ಪ ಆರ್ಗಾನಿಕ್ ಸಂಸ್ಥೆಯಲ್ಲಿ ಕಸ್ಟಮರ್ ಕೇರ್‌ಗೆ ಮನೆಯಿಂದಲೇ ಉದ್ಯೋಗಿ.
6ನೇ ತರಗತಿಯಿಂದಲೇ ಆರಂಭ
ಕಿಶನ್ ಆರನೇ ತರಗತಿಯಲ್ಲಿದ್ದಾಗ ಚೆಸ್ ಆಟವನ್ನು ಗಂಭೀರವಾಗಿ ಆಡತೊಡಗಿದರು. ಇದಕ್ಕೆ ಅವರ ಸೋದರಮಾವನ ಪ್ರೇರಣೆಯೇ ಕಾರಣವಾಗಿತ್ತು. ಆರಂಭದಲ್ಲಿ ಎಲ್ಲರ ಜತೆಗೆ ಆಟವಾಡುತ್ತ 2011ರಲ್ಲಿ ಅಂಧರ ಚೆಸ್‌ನಲ್ಲಿ ಸ್ಪರ್ಧೆ ಆರಂಭಿಸಿದರು. ಅಂದಿನಿಂದ ಚೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತ ಬಂದರು. 2012ರಲ್ಲಿ ಚೆನ್ನೈಯಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ವೈಯಕ್ತಿಕ ಚಿನ್ನದ ಪದಕ ಗೆದ್ದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಸಂಪಾದಿಸಿದರು. ಇದರಲ್ಲಿ ಭಾರತ ತಂಡ ವಿಶ್ವದಲ್ಲಿ 5ನೇ ಸ್ಥಾನ ಪಡೆದಿತ್ತು.
6ನೇ ತರಗತಿಯಿಂದ ಶಿವಮೊಗ್ಗದ ಮತ್ತೂಬ್ಬ ಅಂಧ ಚೆಸ್ ಆಟಗಾರ ಕೃಷ್ಣ ಉಡುಪರ ಬಳಿ ಚೆಸ್ ತರಬೇತಿ ಪಡೆದರು. ಬಳಿಕ ಸ್ವಯಂ ಚೆಸ್ ಕಲಿತು ಕಂಪ್ಯೂಟರ್ ಮೂಲಕವೂ ಅಭ್ಯಸಿಸಿದರು. ತನ್ನ ಅಂಗವೈಕಲ್ಯವನ್ನು ಎಲ್ಲೂ ಪ್ರಕಟಿಸದೆ, ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಕಿಶನ್ 2013-2017ರ ವರೆಗೆ ಸತತ 4 ಬಾರಿ ಅಂಧರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ದೇವರ ಎದುರು ಕುಳಿತೆ
ನಿನ್ನೆಯಿಂದ ಊಟ, ನಿದ್ದೆ ಬಿಟ್ಟು ಸತತ 3 ಮ್ಯಾಚ್ ಆಟವಾಡುತ್ತಿದ್ದ ಕಾರಣ ನನಗೆ ಟೆನ್ಶನ್ ಆಗಿ ದೇವರ ಎದುರು ಕೂತುಬಿಟ್ಟೆ. ನೀನೇ ಏನಾದರೂ ಮಾಡೆಂದು ಪ್ರಾರ್ಥಿಸಿದೆ. ಫಲ ಸಿಕ್ಕಿದೆ
ಗೀತಾ ಗಂಗೊಳ್ಳಿ, ತಾಯಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.