ಕಿವೀಸ್ ಕ್ಲೀನ್‌ಸ್ವೀಪ್ ಸಾಹಸ
Team Udayavani, Jan 20, 2018, 3:55 PM IST
ವೆಲ್ಲಿಂಗ್ಟನ್: ಪ್ರವಾಸಿ ಪಾಕಿಸ್ಥಾನವನ್ನು ಏಕದಿನ ಸರಣಿಯ ಐದೂ ಪಂದ್ಯಗಳಲ್ಲಿ ಬಗ್ಗು ಬಡಿದ ನ್ಯೂಜಿಲ್ಯಾಂಡ್ ಕ್ಲೀನ್‌ಸ್ವೀಪ್ ಸಾಧನೆಗೈದಿದೆ. ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ 5ನೇ ಹಾಗೂ ಅಂತಿಮ ಮುಖಾಮುಖೀಯನ್ನು 15 ರನ್ನುಗಳಿಂದ ಗೆಲ್ಲುವ ಮೂಲಕ ಕಿವೀಸ್ 5-0 ಪರಾಕ್ರಮ ಮೆರೆಯಿತು.
ಆರಂಭಕಾರ ಮಾರ್ಟಿನ್ ಗಪ್ಟಿಲ್ ಅವರ 13ನೇ ಶತಕ ಹಾಗೂ ವೇಗಿ ಮ್ಯಾಟ್ ಹೆನ್ರಿ ಅವರ ಘಾತಕ ಆರಂಭಿಕ ಸ್ಪೆಲ್‌ಗೆ ತತ್ತರಿಸಿದ ಪಾಕಿಸ್ಥಾನ ಸತತ 5ನೇ ಸೋಲಿಗೆ ಗುರಿಯಾಯಿತು. ಗಪ್ಟಿಲ್ 126 ಎಸೆತಗಳಿಂದ ಭರ್ತಿ 100 ರನ್ ಬಾರಿಸಿದರೆ (10 ಬೌಂಡರಿ, 1 ಸಿಕ್ಸರ್), ಹೆನ್ರಿ 53 ರನ್ ವೆಚ್ಚದಲ್ಲಿ 4 ವಿಕೆಟ್ ಉರುಳಿಸಿದರು. ಮಿಚೆಲ್ ಸ್ಯಾಂಟ್ನರ್ 3, ಲಾಕೀ ಫರ್ಗ್ಯುಸನ್ 2 ವಿಕೆಟ್ ಹಾರಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 7 ವಿಕೆಟಿಗೆ 271 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಪಾಕಿಸ್ಥಾನ ಆರಂಭಿಕ ಆಘಾತದಿಂದ ಚೇತರಿಸಿಕೊಂಡು 49 ಓವರ್‌ಗಳಲ್ಲಿ 256 ರನ್ ಮಾಡಿ ಸರ್ವಪತನ ಕಂಡಿತು. ಒಂದು ಹಂತದಲ್ಲಿ ಪಾಕ್ 57 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡಿತ್ತು. ಆದರೆ ಹ್ಯಾರಿಸ್ ಸೊಹೈಲ್ (63), ಶಾದಾಬ್ ಖಾನ್ (54) 105 ರನ್ ಜತೆಯಾಟ ನಡೆಸಿ ತಂಡವನ್ನು ಹಳಿಗೆ ತಂದರು. ಕೆಳ ಕ್ರಮಾಂಕದ ಆಟಗಾರರಾದ ಆಮಿರ್ ಯಾಮಿನ್ (32), ಫಾಹಿಂ ಅಶ್ರಫ್ (23) ಮತ್ತು ಮೊಹಮ್ಮದ್ ನವಾಜ್ (23) ಪ್ರಯತ್ನ ನಡೆಸಿದರಾದರೂ ಗೆಲುವು ದೂರವೇ ಉಳಿಯಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-7 ವಿಕೆಟಿಗೆ 271 (ಗಪ್ಟಿಲ್ 100, ಟಯ್ಲರ್ 59, ಮುನ್ರೊ 34, ರಯೀಸ್ 67ಕ್ಕೆ 3, ಅಶ್ರಫ್ 49ಕ್ಕೆ 2). ಪಾಕಿಸ್ಥಾನ-49 ಓವರ್‌ಗಳಲ್ಲಿ 256 (ಸೊಹೈಲ್ 63, ಶಾದಾಬ್ 54, ಯಾಮಿನ್ 32, ಹೆನ್ರಿ 53ಕ್ಕೆ 4, ಸ್ಯಾಂಟ್ನರ್ 40ಕ್ಕೆ 3, ಫರ್ಗ್ಯುಸನ್ 64ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮಾರ್ಟಿನ್ ಗಪ್ಟಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.