KKR; ಪ್ಲೇ ಆಫ್‌ಗೆ ಒಂದೇ ಮೆಟ್ಟಿಲು: ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯ
Team Udayavani, May 11, 2024, 6:45 AM IST
ಕೋಲ್ಕತಾ: ಎರಡು ತಂಡಗಳು ಹೊರಬಿದ್ದರೂ ಇನ್ನೂ ಯಾವುದೇ ತಂಡದ ಪ್ಲೇ ಆಫ್ ಸ್ಥಾನ ಅಧಿಕೃತಗೊಳ್ಳದಿದ್ದುದು 2024ರ ಐಪಿಎಲ್‌ನ ವಿಶೇಷ ಎನ್ನಲಡ್ಡಿಯಿಲ್ಲ. ಕೆಕೆಆರ್ ಮತ್ತು ರಾಜಸ್ಥಾನ್ ತಲಾ 16 ಅಂಕಗಳೊಂದಿಗೆ ಒಂದು ಕಾಲನ್ನು ಮುಂದಿನ ಸುತ್ತಿನಲ್ಲಿ ಇರಿಸಿವೆಯಾದರೂ ಇದು ಅಧಿಕೃತಗೊಳ್ಳಬೇಕಷ್ಟೇ. ಬಹುಶಃ ಶನಿವಾರ ರಾತ್ರಿ ತವರಿನ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಯೊಂದು ದಟ್ಟವಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್.
ಈ ಪಂದ್ಯದಿಂದ ಮುಂಬೈಗೆ ಆಗಬೇಕಾದ್ದೇನೂ ಇಲ್ಲ. ಅದು ಈಗಾಗಲೇ ಕೂಟದಿಂದ ಹೊರ ಬಿದ್ದಾಗಿದೆ. ಹೆಚ್ಚೆಂದರೆ ಕೆಕೆಆರ್ ಮುನ್ನಡೆಗೊಂದು ಅಲ್ಪವಿರಾಮ ಹಾಕಬಹುದು, ಅಷ್ಟೇ.
ಕೆಕೆಆರ್ ರೆಡ್-ಹಾಟ್ ಫಾರ್ಮ್ ನಲ್ಲಿರುವ ತಂಡ. 2 ಬಾರಿಯ ಮಾಜಿ ಚಾಂಪಿಯನ್ ಆಗಿ ರುವ ಅದು 3 ವರ್ಷಗಳಲ್ಲಿ ಮೊದಲ ಸಲ ಪ್ಲೇ ಆಫ್ ಪ್ರವೇಶದ ಹೊಸ್ತಿಲಲ್ಲಿದೆ. 11ರಲ್ಲಿ ಎಂಟನ್ನು ಗೆದ್ದು ಅಂಕಪಟ್ಟಿಯ ಅಗ್ರಸ್ಥಾನ ಅಲಂಕರಿಸುವ ಶ್ರೇಯಸ್ ಅಯ್ಯರ್ ಪಡೆ, ತವರಲ್ಲೇ ಮುಂದಿನ ಸುತ್ತಿನ ಸಂಭ್ರಮ ಆಚರಿಸುವ ಯೋಜನೆ ಹಾಕಿಕೊಂಡಿರುವುದು ಸ್ಪಷ್ಟ.
ಕೋಲ್ಕತಾ ನೈಟ್‌ರೈಡರ್ ಸಾಲು ಸಾಲು ಬಿಗ್ ಹಿಟ್ಟರ್‌ಗಳನ್ನು ಹೊಂದಿರುವ ತಂಡ. 8 ಸಲ ಮೊದಲು ಬ್ಯಾಟಿಂಗ್ ನಡೆಸಿದ್ದು, 6 ಸಲ 200 ಪ್ಲಸ್ ರನ್ ಪೇರಿಸಿದೆ. ಸುನೀಲ್ ನಾರಾಯಣ್-ಫಿಲ್ ಸಾಲ್ಟ್ ಅವರದು ಸಾಲಿಡ್ ಓಪನಿಂಗ್ ಜೋಡಿ. ವೆಸ್ಟ್ ಇಂಡೀಸ್ ಸವ್ಯ ಸಾಚಿ ಸುನೀಲ್ ನಾರಾಯಣ್ ಕೆಕೆಆರ್ ಪರ ಸರ್ವಾಧಿಕ 461 ರನ್ ಬಾರಿಸಿ ದ್ದಾರೆ. ಒಂದು ಶತಕ, 3 ಅರ್ಧ ಶತಕ ಸೇರಿದೆ. ಸಿಕ್ಸರ್ ಸಾಧಕರ ಯಾದಿಯಲ್ಲಿ ಇವರಿಗೆ 2ನೇ ಸ್ಥಾನ (32). ಸಾಲ್ಟ್ 429 ರನ್ ರಾಶಿ ಹಾಕಿದ್ದಾರೆ. ಇವರಿಬ್ಬರನ್ನು ಬೇಗನೇ ಔಟ್ ಮಾಡಿದರೂ ಲಾಭವಿಲ್ಲ ಎಂಬುದು ಈಗಾಗಲೇ ಸಾಬೀ ತಾಗಿದೆ. ರಘುವಂಶಿ, ರಸೆಲ್, ರಿಂಕು, ಅಯ್ಯರ್‌ದ್ವಯರು, ರಮಣ್ ದೀಪ್ ಅವರೆಲ್ಲ ಕೆಕೆಆರ್ ಬ್ಯಾಟಿಂಗ್ ಸರದಿಯನ್ನು ಬೆಳೆಸಬಲ್ಲರು. ಕೆಕೆಆರ್ ಬೌಲಿಂಗ್ ಕೂಡ ವೈವಿಧ್ಯ ಮಯ. ಇಲ್ಲಿ ಸ್ಪಿನ್ನರ್‌ಗಳೇ ಪ್ರಬಲ ಅಸ್ತ್ರವಾಗಿದ್ದಾರೆ. ಮಿಚೆಲ್ ಸ್ಟಾರ್ಕ್ ಘಾತಕವಾಗಿ ಪರಿ ಣಮಿ ಸಿದರೆ ಕೋಲ್ಕತಾ ದಾಳಿ ಯನ್ನು ಎದುರಿಸುವುದು ಕಷ್ಟವಾಗಬಹುದು.
ಪಾತಾಳ ಕಂಡ ಮುಂಬೈ
ಮುಂಬೈ ಇಂಡಿಯನ್ಸ್ ನಾಯ ಕತ್ವದ ವಿವಾದ, ಗುಂಪುಗಾರಿಕೆ, ಒಳ ರಾಜಕೀಯದಿಂದಲೇ ಪಾತಾಳ ಮುಟ್ಟಿದ್ದು ಸ್ಪಷ್ಟ. ಇನ್ನುಳಿದಿರುವು ದೆಂದರೆ, ತಂಡದಲ್ಲಿರುವ ಟಿ20 ವಿಶ್ವಕಪ್ ಆಟಗಾರರು ಶಿಸ್ತಿ ನಿಂದ ಆಡಿ ತಮ್ಮ ಫಾರ್ಮ್ ಪ್ರದರ್ಶಿಸು ವುದು. ರೋಹಿತ್ ಶರ್ಮ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಇವರಲ್ಲಿ ಪ್ರಮುಖರು.
ಸೂರ್ಯ ಅವರೇನೋ ಶತಕ ಬಾರಿಸಿ ಫಾರ್ಮ್ ತೋರ್ಪಡಿಸಿದ್ದಾರೆ. ಆದರೆ ಕಳೆದ 5 ಪಂದ್ಯಗಳಲ್ಲಿ ಗರಿಷ್ಠ 11 ರನ್ ಬಾರಿಸಿದ ರೋಹಿತ್ ಪ್ರದರ್ಶನ ಏನೂ ಸಾಲದು. ಉಳಿದ ನಾಲ್ಕರಲ್ಲಿ ಇವರದು ಸಿಂಗಲ್ ಡಿಜಿಟ್ ಸಾಧನೆ. ಈ ಸೀಸನ್‌ನಲ್ಲಿ ಪಾಂಡ್ಯ ಅವರ ಗರಿಷ್ಠ ಗಳಿಕೆ 46 ರನ್!
ಮೊದಲ ಸುತ್ತಿನಲ್ಲಿ…
ಕೇವಲ ಒಂದು ವಾರದ ಹಿಂದಷ್ಟೇ ಮುಂಬೈ-ಕೆಕೆಆರ್ ನಡುವೆ ವಾಂಖೇಡೆಯಲ್ಲಿ ಮೊದಲ ಸುತ್ತಿನ ಪಂದ್ಯ ನಡೆದಿತ್ತು. ಇದನ್ನು ಕೋಲ್ಕತಾ 24 ರನ್ನುಗಳಿಂದ ಜಯಿಸಿತ್ತು. ಕೆಕೆಆರ್ 19.5 ಓವರ್‌ಗಳಲ್ಲಿ 169ಕ್ಕೆ ಆಲೌಟಾದರೆ, ಮುಂಬೈ 18.5 ಓವರ್‌ಗಳಲ್ಲಿ 145ಕ್ಕೆ ಸರ್ವಪತನ ಕಂಡಿತ್ತು. ಮುಂಬೈ ಇದಕ್ಕೆ ಸೇಡು ತೀರಿಸಿಕೊಂಡರೆ, ಕೆಕೆಆರ್‌ನ ಪ್ಲೇ ಆಫ್ ಪ್ರವೇಶ ತುಸು ಮುಂದೂಡಲ್ಪಡಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.