ಬಾಂಗ್ಲಾ ಎದುರು ಸೋಲು ; ಗರಿಷ್ಠ ರನ್ ಮಾಡಿಯೂ ಆಕ್ರೋಶಕ್ಕೆ ಗುರಿಯಾದ ರಾಹುಲ್
ಪಂದ್ಯದ ಸೋಲಿಗೆ ಪ್ರಮುಖ ಕಾರಣ ಎಂದು ಸಿಕ್ಕಾಪಟ್ಟೆ ಟ್ರೋಲ್ ...!
Team Udayavani, Dec 4, 2022, 10:02 PM IST
ಢಾಕಾ : ಇಲ್ಲಿ ಭಾನುವಾರ ನಡೆದ ಆತಿಥೇಯ ಬಾಂಗ್ಲಾದೇಶದ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮೈದಾನದಲ್ಲಿ ಸಾಕಷ್ಟು ಕಳಪೆಯಾಗಿತ್ತು. ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೆ.ಎಲ್. ರಾಹುಲ್ ಅವರ ಕ್ಯಾಚ್ ಡ್ರಾಪ್ ಎಲ್ಲರ ಗಮನವನ್ನು ಸೆಳೆಯಿತು. ರಾಹುಲ್ ಭಾರತದ ಪರ ಗರಿಷ್ಠ ಸ್ಕೋರ್ ಮಾಡಿದರೂ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಭಾರತ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಯಾದರೆ ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಬಾಂಗ್ಲಾದೇಶವು ಗೆಲುವಿನಿಂದ 41 ರನ್‌ಗಳ ಅಂತರದಲ್ಲಿತ್ತು. ಭಾರತಕ್ಕೆ ಬೇಕಾಗಿದ್ದುದು ಉತ್ತಮ ಚೆಂಡು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಾಹುಲ್ ಕೈಗೆ ಬಂದ ಮೆಹಿದಿ ಹಸನ್ ಮಿರಾಜ್ ಅವರ ನಿರ್ಣಾಯಕ ಕ್ಯಾಚ್ ಅನ್ನು ಕೈಬಿಟ್ಟರು. ಕೊನೆಯ ವಿಕೆಟ್ ಗೆ ಹೋರಾಟ ನೀಡಿದ ಮೆಹಿದಿ ಹಸನ್ ಮಿರಾಜ್ ಏಕಾಂಗಿಯಾಗಿ ಬಾಂಗ್ಲಾದೇಶವನ್ನು ಗೆಲ್ಲಿಸಿದರು.
ಇಂದು ಕೆಎಲ್ ರಾಹುಲ್, ಇತರ ಬ್ಯಾಟ್ಸ್‌ಮನ್‌ಗಳು ಕಷ್ಟಪಡುತ್ತಿರುವಾಗ ಟೀಮ್ ಇಂಡಿಯಾಕ್ಕೆ ಹೆಚ್ಚು ಅಗತ್ಯವಿದ್ದ ರನ್‌ಗಳನ್ನು ಗಳಿಸಿದರು.
ತದನಂತರ ಅತ್ಯಂತ ಪ್ರಮುಖ ಮ್ಯಾಚ್ ವಿನ್ನಿಂಗ್ ಕ್ಯಾಚ್ ಅನ್ನು ಕೈಬಿಟ್ಟರು. ನಾವು ಅಲ್ಲಿ ಸೋತಿದ್ದೇವೆ.ಅವರು ಹೀರೋ ಅಥವಾ ವಿಲನ್.. ಎಂಬ ಗೊಂದಲ ಉಂಟಾಗುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಟೀಕೆಗಳ ಪ್ರವಾಹವನ್ನೇ ಹರಿಸಿದ್ದಾರೆ.
ಬಾಂಗ್ಲಾದೇಶ ಕೇವಲ 1 ವಿಕೆಟಿನಿಂದ ಜಯ ಸಾಧಿಸಿತು. ಏಳು ವರ್ಷಗಳ ನಂತರ ಬಾಂಗ್ಲಾದೇಶದ ವಿರುದ್ಧ ಭಾರತ ತನ್ನ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿತು.2015 ರಲ್ಲಿ ಸೋತಿತ್ತು.
ಮೆಹಿದಿ ಹಸನ್ ಮಿರಾಜ್ 39 ಎಸೆತಗಳಲ್ಲಿ 38 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡ ಸಂಕಷ್ಟದಲ್ಲಿದ್ದ ವೇಳೆ ನೇರವಾದ ಮುಸ್ತಾಫಿಜುರ್ ರೆಹಮಾನ್ ಔಟಾಗದೆ 10 ರನ್ ಕೊಡುಗೆ ನೀಡಿ ಗೆಲುವಿನ ಸಂಭ್ರಮಕ್ಕೆ ಕಾರಣರಾದರು.136 ಕ್ಕೆ 9 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದರೂ ತಂಡಕ್ಕೆ ನೆರವಾದ ಮೆಹಿದಿ ಹಸನ್ ಮತ್ತು ಮುಸ್ತಾಫಿಜುರ್ ಬಾಲದಲ್ಲಿ ಬಲವಿದೆ ಎಂದು ತೋರಿಸಿ ಭಾರತದ ಗೆಲ್ಲುವ ಆಸೆಗೆ ತಣ್ಣೀರೆರೆಚಿದರು.
ಬ್ಯಾಟಿಂಗ್ ನಲ್ಲಿ ಉಪನಾಯಕ ಕೆ.ಎಲ್. ರಾಹುಲ್ ಸಮಯೋಚಿತ ಆಟದ ಕಾರಣ ಭಾರತ ತಂಡ ಗೌರವಯುತ ಮೊತ್ತ ಗಳಿಸಲು ಸಾಧ್ಯವಾಗಿತ್ತು. 70 ಎಸೆತಗಳಲ್ಲಿ 73 ರನ್ ಗರಿಷ್ಠ ಕೊಡುಗೆ ನೀಡಿದರು. ಭಾರತ ತಂಡ 41.2 ಓವರ್ ಗಳಲ್ಲಿ 186 ರನ್ ಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ, 9 ವಿಕೆಟ್ ನಷ್ಟಕ್ಕೆ 46 ಓವರ್ ಗಳಲ್ಲಿ 187 ರನ್ ಗಳಿಸಿ ಜಯ ಸಾಧಿಸಿತು.
We are 1.4 billion in population. Still @BCCI wants to play with a par-time mediocre keeper rather than giving chance to Samson or Kishan. Peak mediocrity supporting cricket board. #INDvsBangladesh #INDvsBAN pic.twitter.com/QOtcLzCnc6
— Gully Cricketer (@cricketcoast) December 4, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.