ಉಪ ನಾಯಕತ್ವ ಪಟ್ಟವನ್ನೂ ಕಳೆದುಕೊಂಡ ಕೆಎಲ್ ರಾಹುಲ್..ಮುಂದೇನು?
Team Udayavani, Dec 28, 2022, 11:04 AM IST
ಮುಂಬೈ: ಇತ್ತೀಚೆಗೆಷ್ಟೇ ಮುಗಿದ ಬಾಂಗ್ಲಾದೇಶ ವಿರುದ್ದದ ಕೊನೆಯ ಎರಡು ಏಕದಿನ ಪಂದ್ಯದಲ್ಲಿ ನಾಯಕತ್ವ, ಟೆಸ್ಟ್ ಸರಣಿಯ ನಾಯಕತ್ವ. ಇದಾಗಿ ಎರಡೇ ದಿನಕ್ಕೆ ನೇಮಕವಾದ ಲಂಕಾ ವಿರುದ್ಧದ ಏಕದಿನ ಸರಣಿಗೆ ಕನಿಷ್ಟ ಉಪ ನಾಯಕನ ಪಟ್ಟವೂ ಇಲ್ಲ. ಇದು ಕೆ.ಎಲ್ ರಾಹುಲ್ ಪರಿಸ್ಥಿತಿ.
ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ನೇಮಕ ಮಾಡಲಾಗಿದೆ. ನಿರೀಕ್ಷೆಯಂತೆ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ.
ಗಮನಾರ್ಹ ಸಂಗತಿಯೆಂದರೆ ಟಿ20 ಸರಣಿಗೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸ್ಥಾನ ಪಡೆದಿಲ್ಲ. ರೋಹಿತ್‌ಗೆ ಗಾಯವಾಗಿದೆ, ರಾಹುಲ್‌ಗೆ ಅದೇ ಸಂದರ್ಭದಲ್ಲಿ ಮದುವೆಯಿರುವುದರಿಂದ ಇದು ನಿರೀಕ್ಷಿತ ಬೆಳವಣಿಗೆ.
ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೊಂದಿದೆ. ಮೂರು ಮಾದರಿಯ ತಂಡಗಳಿಗೆ ರಾಹುಲ್ ಉಪನಾಯಕನಾಗಿದ್ದರು. ಅರ್ಥಾತ್ ಅವರೇ ಭವಿಷ್ಯದ ನಾಯಕ ಎಂದು ಬಿಂಬಿಸಲ್ಪಟ್ಟಿದ್ದರು. ಭಾರತ ತಂಡದ ಟಿ20 ವಿಶ್ವಕಪ್ ವೈಫಲ್ಯದ ನಂತರ ಈ ವಿಚಾರವೇ ಉಲ್ಟಾ ಆಗಿದೆ. ಟಿ20ಗೆ ಹಾರ್ದಿಕ್ ಅವರೇ ಮುಂದಿನ ನಾಯಕ ಎನ್ನುವುದು ಖಚಿತವಾಗಿದೆ. ಇಲ್ಲಿ ರಾಹುಲ್ ಅವರು ಸ್ಥಾನ ಉಳಿಸಿಕೊಳ್ಳುವುದೇ ಕಷ್ಟ ಎನಿಸಿಕೊಂಡಿದೆ. ಇನ್ನು ಶ್ರೀಲಂಕಾ ಪ್ರವಾಸದಲ್ಲೇ ರಾಹುಲ್ ಏಕದಿನ ತಂಡದ ಉಪನಾಯಕ ಪಟ್ಟವನ್ನು ಕಳೆದುಕೊಂಡಿದ್ದಾರೆ. ಹಾರ್ದಿಕ್ ಆ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಏಕದಿನ, ಟಿ20ಗೆ ಹಾರ್ದಿಕ್ ಮುಂದಿನ ನಾಯಕ ಎಂಬ ಸುಳಿವನ್ನು ಬಿಸಿಸಿಐ ನೀಡಿದೆ.
#TeamIndia squad for three-match ODI series against Sri Lanka.#INDvSL @mastercardindia pic.twitter.com/XlilZYQWX2
— BCCI (@BCCI) December 27, 2022
ಮುಂದಿನ ಪ್ರವಾಸಕ್ಕೆ ಬಿಸಿಸಿಐ ತಂಡ ಆಯ್ಕೆ ಮಾಡುವಾಗ ರೋಹಿತ್ ಶರ್ಮ ನಾಯಕತ್ವದ ಉಳಿವಿನ ಬಗ್ಗೆ ನಿರ್ಣಯವಾಗಲಿದೆ. ಈ ಹಿಂದೆ ವಿರಾಟ್ ಕೊಹ್ಲಿ ಜಾಗದಲ್ಲಿ ರೋಹಿತ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡುವಾಗ ಬಿಸಿಸಿಐಗೆ ಭಾರೀ ನಿರೀಕ್ಷೆಗಳಿದ್ದವು. ಆದರೆ ಅದರ ಲೆಕ್ಕಾಚಾರಕ್ಕೆ ತಕ್ಕಂತೆ ಯಾವುದೂ ನಡೆದಿಲ್ಲ. ಹಾಗೆಯೇ ಕೆ.ಎಲ್.ರಾಹುಲ್ ಅವರು ಸತತವಾಗಿ ಲಯ ಕಳೆದುಕೊಂಡು ಬ್ಯಾಟಿಂಗ್‌ನಲ್ಲಿ ಒದ್ದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಟೆಸ್ಟ್ ತಂಡದಿಂದಲೂ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಏಕದಿನಕ್ಕೆ ರಾಹುಲ್ ಕೀಪರ್: ರಾಹುಲ್ ಏಕದಿನ ತಂಡದ ಉಪ ನಾಯಕ ಸ್ಥಾನ ಕಳೆದುಕೊಂಡಿರುವುದು ಮಾತ್ರವಲ್ಲ, ವಿಕೆಟ್ ಕೀಪರ್ ಆಗಿ ನೇಮಿಸಲ್ಪಟ್ಟಿದ್ದಾರೆ! ಇವರಿಗೆ ಸಹಕಾರಿಯಾಗಿ ಇಶಾನ್ ಕಿಶನ್ ಇದ್ದಾರೆ. ಸದಾ ಅಸ್ಥಿರ ಪ್ರದರ್ಶನ ನೀಡುವ ರಿಷಭ್ ಪಂತ್ ಕೂಡ ಜಾಗ ಕಳೆದುಕೊಂಡಿದ್ದಾರೆ. ಇದು ರಿಷಭ್ ಭವಿಷ್ಯದ ಪ್ರಶ್ನೆಯೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.