ಪಂಜಾಬ್ ಜಯಕ್ಕೆ ರಾಹುಲ್ ಆಸರೆ
Team Udayavani, May 7, 2018, 6:05 AM IST
ಇಂದೋರ್: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರವಿವಾರದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.
ಮುಜೀಬ್ ಉರ್ ರೆಹಮಾನ್ ಅವರ ನಿಖರ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡವು 9 ವಿಕೆಟಿಗೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಪಂಜಾಬ್ ತಂಡ ಕುಸಿತಕ್ಕೆ ಒಳಗಾದರೂ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರ ಅಜೇಯ ಅರ್ಧಶತಕದಿಂದಾಗಿ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 155 ರನ್ ಪೇರಿಸಿ ಜಯಭೇರಿ ಬಾರಿಸಿತು. ಈ ಗೆಲುವಿನಿಂದ ಪಂಜಾಬ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.
ಒಂದು ಹಂತದಲ್ಲಿ 87 ರನ್ನಿಗೆ ನಾಲ್ಕು ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಬಿದ್ದಿದ್ದ ಪಂಜಾಬ್ ತಂಡವನ್ನು ರಾಹುಲ್ ಆಧರಿಸಿದರು. ಅವರು ಮುರಿಯದ ಐದನೇ ವಿಕೆಟಿಗೆ ಮಾರ್ಕಸ್ ಸ್ಟಾಯಿನಿಸ್ ಜತೆಗೆ 68 ರನ್ ಪೇರಿಸಿ ತಂಡದ ಗೆಲುವು ಸಾರಿದರು. ಭರ್ಜರಿ ಆಟದ ಪ್ರದರ್ಶನ ನೀಡಿದ ರಾಹುಲ್ 54 ಎಸೆತ ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರಂಭಕಾರ ಜಾಸ್ ಬಟ್ಲರ್ ಎಂದಿನಂತೆ ಬಿರುಸಿನ ಆಟಕ್ಕೆ ಮುಂದಾದರೂ ಇನ್ನೊಂದು ತುದಿಯಲ್ಲಿ ವಿಕೆಟ್ ಉರುಳುತ್ತಲೇ ಹೋದದ್ದು ರಾಜಸ್ಥಾನ್‌ಗೆ ಕಂಟಕವಾಗಿ ಪರಿಣಮಿಸಿತು. 13ನೇ ಓವರ್ ತನಕ ಕ್ರೀಸಿನಲ್ಲಿದ್ದ ಬಟ್ಲರ್ 39 ಎಸೆತ ಎದುರಿಸಿ 51 ರನ್ ಬಾರಿಸಿದರು. ಇದರಲ್ಲಿ 7 ಬೌಂಡರಿ ಒಳಗೊಂಡಿತ್ತು. ಬಟ್ಲರ್-ಸಂಜು ಸ್ಯಾಮ್ಸನ್ 3ನೇ ವಿಕೆಟಿಗೆ 49 ರನ್ ಪೇರಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ರಾಜಸ್ಥಾನ್ ಕುಸಿತ ತೀವ್ರಗೊಂಡಿತು.ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಸತತ ಎಸೆತಗಳಲ್ಲಿ ಬಟ್ಲರ್, ಆರ್ಚರ್ ವಿಕೆಟ್ ಉಡಾಯಿಸಿ ಘಾತಕವಾಗಿ ಪರಿ ಣಮಿಸಿದರು. ಮುಜೀಬ್ ಸಾಧನೆ 27ಕ್ಕೆ 3 ವಿಕೆಟ್.
ಸ್ಕೋರ್‌ಪಟ್ಟಿ
ರಾಜಸ್ಥಾನ್ ರಾಯಲ್ಸ್
ಜಾಸ್ ಬಟ್ಲರ್ ಸಿ ರಾಹುಲ್ ಮುಜೀಬ್ 51
ಡಿ’ಆರ್ಸಿ ಶಾರ್ಟ್ ಸಿ ಟೈ ಬಿ ಅಶ್ವಿನ್ 2
ಅಜಿಂಕ್ಯ ರಹಾನೆ ಸಿ ಗೇಲ್ ಬಿ ಪಟೇಲ್ 5
ಸಂಜು ಸ್ಯಾಮ್ಸನ್ ಸಿ ನಾಯರ್ ಬಿ ಟೈ 28
ಬೆನ್ ಸ್ಟೋಕ್ಸ್ ಸಿ ತಿವಾರಿ ಬಿ ಮುಜೀಬ್ 12
ರಾಹುಲ್ ತ್ರಿಪಾಠಿ ಸಿ ಅಶ್ವಿನ್ ಬಿ ಟೈ 11
ಜೋಫÅ ಆರ್ಚರ್ ಬಿ ಮುಜೀಬ್ 0
ಕೆ. ಗೌತಮ್ ಸಿ ಸ್ಟೊಯಿನಿಸ್ ಬಿ ರಜಪೂತ್ 5
ಶ್ರೇಯಸ್ ಗೋಪಾಲ್ ರನೌಟ್ 24
ಜೈದೇವ್ ಉನಾದ್ಕತ್ ಔಟಾಗದೆ 6
ಇತರ 8
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 152
ವಿಕೆಟ್ ಪತನ: 1-3, 2-35, 3-84, 4-100, 5-106, 6-106, 7-114, 8-129, 9-152.
ಬೌಲಿಂಗ್: ಆರ್. ಅಶ್ವಿನ್ 4-0-30-1
ಅಂಕಿತ್ ರಜಪೂತ್ 3-0-37-1
ಮುಜೀಬ್ ಉರ್ ರೆಹಮಾನ್ 4-0-27-3
ಅಕ್ಷರ್ ಪಟೇಲ್ 4-0-21-1
ಆ್ಯಂಡ್ರೂé ಟೈ 4-0-24-2
ಮಾರ್ಕಸ್ ಸ್ಟೊಯಿನಿಸ್ 1-0-6-0
ಕಿಂಗ್ಸ್ ಇಲೆವೆನ್ ಪಂಜಾಬ್
ಕೆಎಲ್ ರಾಹುಲ್ ಔಟಾಗದೆ 84
ಕ್ರಿಸ್ ಗೇಲ್ ಸಿ ಸ್ಯಾಮ್ಸನ್ ಬಿ ಆರ್ಚರ್ 8
ಮಯಾಂಕ್ ಅಗರ್ವಾಲ್ ಸಿ ತ್ರಿಪಾಠಿ ಬಿ ಸ್ಟೋಕ್ಸ್ 2
ಕರುಣ್ ನಾಯರ್ ಬಿ ಅನುರೀತ್ ಸಿಂಗ್ 31
ಅಕ್ಷರ್ ಪಟೇಲ್ ಸಿ ಶಾರ್ಟ್ ಬಿ ಗೌತಮ್ 4
ಮಾರ್ಕಸ್ ಸ್ಟಾಯಿನಿಸ್ ಔಟಾಗದೆ 23
ಇತರ: 3
ಒಟ್ಟು (18.4 ಓವರ್‌ಗಳಲ್ಲಿ 4 ವಿಕೆಟಿಗೆ) 155
ವಿಕೆಟ್ ಪತನ: 1-23, 2-29, 3-79, 4-87
ಬೌಲಿಂಗ್: ಕೃಷ್ಣಪ್ಪ ಗೌತಮ್ 3-0-18-1
ಜೋಫ್ರಾ ಆರ್ಚರ್ 3.4-0-43-1
ಬೆನ್ ಸ್ಟೋಕ್ಸ್ 3-0-22-1
ಜೈದೇವ್ ಉನಾದ್ಕತ್ 4-0-26-0
ಶ್ರೇಯಸ್ ಗೋಪಾಲ್ 3-0-26-0
ಅನುರೀತ್ ಸಿಂಗ್ 2-0-20-0
ಪಂದ್ಯಶ್ರೇಷ್ಠ: ಮುಜೀಬ್ ಉರ್ ರೆಹಮಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.