ನೈಟ್ ಶತಕ; ಇಂಗ್ಲೆಂಡಿಗೆ ದಾಖಲೆ ಗೆಲುವು
Team Udayavani, Feb 27, 2020, 6:00 AM IST
ಕ್ಯಾನ್‌ಬೆರಾ: ನಾಯಕಿ ಹೀತರ್ ನೈಟ್ ಅವರ ಅಜೇಯ 108 ರನ್ ಪರಾಕ್ರಮದಿಂದ ಬುಧವಾರದ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಮೇಲೆ ಸವಾರಿ ಮಾಡಿದ ಇಂಗ್ಲೆಂಡ್ 98 ರನ್ನುಗಳ ಜಯಭೇರಿ ಮೊಳಗಿಸಿದೆ. ಇದು ಟಿ20 ವಿಶ್ವಕಪ್‌ನಲ್ಲಿ ದಾಖಲಾದ ರನ್ ಅಂತರದ ಅತೀ ದೊಡ್ಡ ಗೆಲುವು.
ಇಂಗ್ಲೆಂಡ್ 2 ವಿಕೆಟಿಗೆ 176 ರನ್ ಪೇರಿಸಿತು. ಇದು ಇಂಗ್ಲೆಂಡಿನ ಸರ್ವಾಧಿಕ ಟಿ20 ಗಳಿಕೆ. ಥಾಯ್ಲೆಂಡ್ 7 ವಿಕೆಟಿಗೆ 78 ರನ್ ಮಾಡಿ ಶರಣಾಯಿತು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಆರಂಭಿಕರಿಬ್ಬರನ್ನೂ ಶೂನ್ಯಕ್ಕೆ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆದರೆ ನಥಾಲಿ ಶೀವರ್ ಮತ್ತು ಹೀತರ್ ನೈಟ್ ಮುರಿಯದ 3ನೇ ವಿಕೆಟಿಗೆ 169 ಪೇರಿಸಿದರು. ಇದು ವನಿತಾ ಟಿ20 ವಿಶ್ವಕಪ್ ಚರಿತ್ರೆಯಲ್ಲಿ ಎಲ್ಲ ವಿಕೆಟ್‌ಗಳಿಗೆ ಅನ್ವಯವಾಗುವಂತೆ ದಾಖಲಾದ ಅತ್ಯಧಿಕ ಮೊತ್ತ.
ನೈಟ್ ಅವರ ಅಜೇಯ 108 ರನ್ 66 ಎಸೆತಗಳಿಂದ ಹರಿದು ಬಂತು. ಸಿಡಿಸಿದ್ದು 13 ಬೌಂಡರಿ, 4 ಸಿಕ್ಸರ್. ಶೀವರ್ 52 ಎಸೆತ ಎದುರಿಸಿ 58 ರನ್ ಹೊಡೆದರು (8 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-2 ವಿಕೆಟಿಗೆ 176 (ನೈಟ್ ಅಜೇಯ 108, ಶೀವರ್ ಅಜೇಯ 58). ಥಾಯ್ಲೆಂಡ್-7 ವಿಕೆಟಿಗೆ 78 (ಚಾಂಟಮ್ 32, ಚೈವೈ ಅಜೇಯ 19, ಶ್ರಬೊÕàಲ್ 21ಕ್ಕೆ 3, ಶೀವರ್ 5ಕ್ಕೆ 2).
ಪಂದ್ಯಶ್ರೇಷ್ಠ: ಹೀತರ್ ನೈಟ್.
ಹೀತರ್ ನೈಟ್ ದಾಖಲೆಗಳು
– ಹೀತರ್ ನೈಟ್ ಮೂರೂ ಪ್ರಕಾರಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ್ತಿ. ಅವರು ಆಸ್ಟ್ರೇಲಿಯ ವಿರುದ್ಧದ 2013ರ ಟೆಸ್ಟ್‌ನಲ್ಲಿ 157 ರನ್ ಹಾಗೂ 2017ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ 106 ರನ್ ಬಾರಿಸಿದ್ದರು.
– ನೈಟ್ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ಆಟಗಾರ್ತಿ. ಬಾಂಗ್ಲಾದೇಶ ವಿರುದ್ಧದ 2014ರ ಪಂದ್ಯದಲ್ಲಿ ಚಾರ್ಲೋಟ್ ಎಡ್ವರ್ಡ್ಸ್ 80 ರನ್ ಹೊಡೆದದ್ದು ಹಿಂದಿನ ದಾಖಲೆ.
– ನೈಟ್ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ವಿಶ್ವದ 4ನೇ ಆಟಗಾರ್ತಿ. ಮೆಗ್ ಲ್ಯಾನಿಂಗ್, ಡಿಯಾಂಡ್ರ ಡಾಟಿನ್ ಮತ್ತು ಹರ್ಮನ್‌ಪ್ರೀತ್ ಕೌರ್ ಉಳಿದ ಮೂವರು.
– ನೈಟ್ ಏಕದಿನ ಹಾಗೂ ಟಿ20 ವಿಶ್ವಕಪ್‌ಗ್ಳೆರಡರಲ್ಲೂ ಸೆಂಚುರಿ ಹೊಡೆದ ವಿಶ್ವದ 2ನೇ ಆಟಗಾರ್ತಿ. ಮೆಗ್ ಲ್ಯಾನಿಂಗ್ ಮೊದಲ ಸಾಧಕಿ.
– ಟಿ20 ಕ್ರಿಕೆಟ್‌ನಲ್ಲಿ ನೈಟ್ 4ನೇ ಸಲ 50 ಪ್ಲಸ್ ರನ್ ಬಾರಿಸಿದರು. ಇವೆಲ್ಲವೂ ಕ್ಯಾನ್‌ಬೆರಾದ “ಮನುಕ ಓವಲ್’ನಲ್ಲೇ ದಾಖಲಾದದ್ದು ವಿಶೇಷ.
– ನೈಟ್ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ನಾಯಕಿ. 2014ರ ಆಸ್ಟ್ರೇಲಿಯ ಎದುರಿನ ಪಂದ್ಯದಲ್ಲಿ ಚಾರ್ಲೋಟ್ ಎಡ್ವರ್ಡ್ಸ್ ಅಜೇಯ 92 ರನ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
– ಹೀತರ್ ನೈಟ್ ಟಿ20 ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಇಂಗ್ಲೆಂಡಿನ 7ನೇ ಆಟಗಾರ್ತಿ ಎನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.