ಸೋಮೆಯಂಡ, ಪಡೀಯಂಡಕ್ಕೆ ಗೆಲುವು
Team Udayavani, May 11, 2018, 7:40 AM IST
ಮಡಿಕೇರಿ:ನಾಪೋಕ್ಲುವಿನ ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಕೊಡವ ಕಪ್ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಸೋಮೆಯಂಡ, ಪಡೀಯಂಡ ತಂಡಗಳು ಗೆಲುವು ಸಾಧಿಸಿ ಮುನ್ನಡೆ ಪಡೆದುಕೊಂಡಿವೆ.
ಗುರುವಾರ ನಡೆದ ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಮೆಯಂಡ ತಂಡವು 4-2 ಗೋಲುಗಳಿಂದ ಕುಮ್ಮಂಡ ತಂಡವನ್ನು ಭರ್ಜರಿಯಾಗಿ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಸೋಮೆಯಂಡ ಪರ ಅಪ್ಪಚ್ಚು 3 ಗೋಲು ಹೊಡೆದರೆ ಸುಜು 1 ಗೋಲು ಹೊಡೆದರು. ಕುಮ್ಮಂಡ ಪರ ಚಂಗಪ್ಪ 1, ನಾಗೇಶ್ ನಂಜಪ್ಪ 1, ಗೋಲು ಹೊಡೆದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ನಂತರದ ಪಂದ್ಯವು ಬಾಳೆಯಡ ಮತ್ತು ಚೆರುಮಂದಂಡ ತಂಡದ ನಡುವೆ ನಡೆದು ಉಭಯ ತಂಡಗಳು ನಿಗದಿತ ಅವಧಿಯಲ್ಲಿ 1-1 ಗೋಲುಗಳ ಸಮಬಲದಲ್ಲಿ ಅಂತ್ಯವಾಯಿತು.
ಬಾಳೆಯಡ ಪರ ರತನ್ ಗೋಲು ಹೊಡೆದರೆ, ಚೆರುಮಂದಂಡ ಪರ ಕವನ್ ಕಾರ್ಯಪ್ಪ ಗೋಲುಗಳಿಸಿದರು. ನಂತರ ಟೈಬ್ರೆಕರ್ ವೆÂವಸ್ಥೆಯನ್ನು ಅಳವಡಿಸಲಾಗಿ ಬಾಳೆಯಡ ತಂಡವು 4-2 ರಲ್ಲಿ ಚೆರುಮಂದಂಡವನ್ನು ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು.
ಮೂರನೇ ಪಂದ್ಯದಲ್ಲಿ ಕುಪ್ಪಂಡ ( ಕೈಕೇರಿ) ತಂಡವು ಬಲ್ಲಚಂಡ ತಂಡವನ್ನು 1-0 ಗೋಲುಗಳಿಂದ ಪರಾಭವಗೊಳಿಸಿತು. ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಿದರು ಕೊನೆಗೆ ಕುಪ್ಪಂಡ
ಸೋಮಯ್ಯನವರು ಹೊಡೆದ ಒಂದು ಗೋಲಿನಿಂದ ತಂಡವು ಜಯ ಸಾಧಿಸಿತು.
ನಾಲ್ಕನೇ ಪಂದ್ಯದಲ್ಲಿ ಚೇಂದಂಡ ತಂಡವು ಚೌರೀರ (ಚೌರೀರ)ತಂಡವನ್ನು 3-1 ಗೋಲುಗಳಿಂದ ಮಣಿಸಿತು ಚೇಂದಂಡ ಪರ ಜಗತ್, ಮೂಕೇಶ್, ಬೋಪಣ್ಣ,ಗೋಲುಗಳಿಸಿದರು, ಚೌರೀರ ಪರ ಮಂದಣ್ಣ ಗೋಲುಗಳಿಸಿ ಅಂತರವನ್ನು ತಗ್ಗಿಸಿಕೊಂಡರು.
ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಡೇಯಂಡ ತಂಡವು ಕುಂಡೊಳಂಡ ತಂಡವನ್ನು 1-0
ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು, ಪಾಡೇಯಂಡ ತಂಡದ ಪರ ಲನ್ ಸುಬ್ಬಯ್ಯ ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ನಂತರದ ಪಂದ್ಯದಲ್ಲಿ ಬೊವ್ವೆàರಿಯಂಡ ತಂಡವು ಅಪ್ಪಚ್ಚೀರ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೆಶವನ್ನು ಪಡೆದು ಕೊಂಡಿತು. ಬಹಳ ಕುತೂಹಲದಿಂದ ಕೂಡಿದ ಪಂದ್ಯದಲ್ಲಿ ಬೊವ್ವೆàರಿಯಂಡ ಜಿತನ್ ಕಾಳಪ್ಪ ಒಂದು ಗೋಲು ಹೊಡೆದು ತಂಡದ ಗೆಲುಗೆ ಕಾರಣರಾದರು.
ಮೂರನೇ ಪಂದ್ಯಾಟವು ಪಟ್ಟಡ ಮತ್ತು ಕನ್ನಂಡ ತಂಡಗಳ ನಡುವೆ ನಡೆುತು. ಎರಡು ತಂಡಗಳು ಗೆಲುಗಾಗಿ ಹೋರಾಟ ನಡೆಸಿದರು ನಿಗದಿತ ಅವಧಿಯಲ್ಲಿ ಯಾವೂದೆ ಗೋಲುಗಳಿಸುವಲ್ಲಿ ಎರಡು ತಂಡಗಳು ವಿಫಲವಾದ
ನ್ನಲೇಯಲ್ಲಿ ಟೈಬ್ರೇಕರ್ ಅಳವಡಿಸಲಾಗಿ ಟೈಬ್ರೇಕರ್‌ನಲ್ಲಿ ಪಟ್ಟಡ ತಂಡವು 4-3 ಗೋಲುಗಳಿಂದ ಜಯ ಸಾಧಿಸಿ ಮುಂದಿನ ಹಂತಕ್ಕೆ ಹೋಯಿತು.
ನಂತರದ ಪಂದ್ಯದಲ್ಲಿ ಚಾಂಪಿಯನ್ ನೆಲ್ಲಮಕ್ಕಡ ತಂಡವು ಅರಮಾಣಮಡ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತವನ್ನು ಪ್ರವೇಶಿಸಿತು, ನೆಲ್ಲಮಕ್ಕಡ ಪರ ಪೋವಣ್ಣ1, ಕಾರ್ಯಪ್ಪ1, ಸೋಮಯ್ಯ1,ರಾಹುಲ್ 1 ಗೋಲುಗಳಿಸಿದರೆ, ಅರಮಣಮಡ ಚೇರ್ಮಾಣ 1 ಗೋಲುಗಳಿಸಿ ಅಂತರವನ್ನು ತಗ್ಗಿಸಿ ಕೊಂಡರು.
– ಎಸ್,ಕೆ.ಲಕ್ಷ್ಮೀಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.