“ವಿಸ್ಡನ್’ ದಶಕದ ಟಿ20 ತಂಡದಲ್ಲಿ ಕೊಹ್ಲಿ, ಬುಮ್ರಾ
ಧೋನಿಗೆ ಜಾಗವಿಲ್ಲ; ಬಟ್ಲರ್ ವಿಕೆಟ್ ಕೀಪರ್
Team Udayavani, Dec 30, 2019, 11:21 PM IST
ಲಂಡನ್: ಇಂಗ್ಲೆಂಡಿನ ಖ್ಯಾತ ಕ್ರಿಕೆಟ್ ಪತ್ರಿಕೆ “ವಿಸ್ಡನ್’ ದಶಕದ ಶ್ರೇಷ್ಠ ಟಿ20 ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಸ್ಥಾನ ಸಂಪಾದಿಸಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿಗೆ ಜಾಗ ಲಭಿಸಿಲ್ಲ.
ವಿಕೆಟ್ ಕೀಪರ್ ರೇಸ್‌ನಲ್ಲಿ ಧೋನಿ ಮತ್ತು ಜಾಸ್ ಬಟ್ಲರ್ ಇದ್ದರು. ಈ ಸಂದರ್ಭದಲ್ಲಿ ವಿಸ್ಡನ್ ಆಯ್ಕೆಗಾರರು ಇಬ್ಬರ ಸ್ಟ್ರೈಕ್ ರೇಟನ್ನು ಮಾನದಂಡವಾಗಿ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಟ್ಲರ್ ಅವರೇ ಮುಂದಿದ್ದರು (172). ಧೋನಿ 132ರ ಸ್ಟ್ರೈಕ್‌ರೇಟ್ ಹೊಂದಿದ್ದರು.
ಆರನ್ ಫಿಂಚ್ ನಾಯಕ
ಆರಂಭಕಾರ ಆರನ್ ಫಿಂಚ್ ನಾಯಕತ್ವದ ಈ ತಂಡದಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ (84 ವಿಕೆಟ್) ಮತ್ತು ಮೊಹಮ್ಮದ್ ನಬಿ (1,316 ರನ್ ಮತ್ತು 69 ವಿಕೆಟ್) ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡಿನ ವೇಗಿ ಡೇವಿಡ್ ವಿಲ್ಲಿ (34 ವಿಕೆಟ್) ಅವರನ್ನು ಪವರ್ ಪ್ಲೇ ಸ್ಪೆಷಲಿಸ್ಟ್ ಎಂಬ ಕಾರಣಕ್ಕಾಗಿ ಆರಿಸಲಾಗಿದೆ. ಡೆತ್ ಬೌಲಿಂಗ್‌ನಲ್ಲಿ ಘಾತಕವಾಗಿ ಎರಗುವ ಸಾಮರ್ಥ್ಯ ಹೊಂದಿರುವ ಕಾರಣ ಬುಮ್ರಾ ಮತ್ತು ಮಾಲಿಂಗ ಆಯ್ಕೆಯಾಗಿದ್ದಾರೆ.
ಫಿಂಚ್ ಜತೆಗಾರನಾಗಿ ಕಾಣಿಸಿಕೊಂಡಿರುವ ಆರಂಭಕಾರ ಕಾಲಿನ್ ಮುನ್ರೊ. ವನ್‌ಡೌನ್ ಸ್ಥಾನ ಕೊಹ್ಲಿಗೆ ಮೀಸಲಾಗಿದೆ. ತಂಡದ ಏಕೈಕ ನಿವೃತ್ತ ಕ್ರಿಕೆಟಿಗನಾಗಿರುವ ಆಲ್‌ರೌಂಡರ್ ಶೇನ್ ವಾಟ್ಸನ್ 4ನೇ, ಹಾರ್ಡ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ 5ನೇ ಕ್ರಮಾಂಕದಲ್ಲಿದ್ದಾರೆ.
ಈ ತಂಡದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದ ಯಾವುದೇ ಕ್ರಿಕೆಟಿಗರಿಲ್ಲ ಎಂಬುದನ್ನು ಗಮನಿಸಬೇಕು.
ವಿಸ್ಡನ್ ದಶಕದ ಟಿ20 ತಂಡ
ಆರನ್ ಫಿಂಚ್ (ನಾಯಕ), ಕಾಲಿನ್ ಮುನ್ರೊ, ವಿರಾಟ್ ಕೊಹ್ಲಿ, ಶೇನ್ ವಾಟ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಜಾಸ್ ಬಟ್ಲರ್ (ವಿ.ಕೀ.), ಮೊಹಮ್ಮದ್ ನಬಿ, ಡೇವಿಡ್ ವಿಲ್ಲಿ, ರಶೀದ್ ಖಾನ್, ಜಸ್‌ಪ್ರೀತ್ ಬುಮ್ರಾ, ಲಸಿತ ಮಾಲಿಂಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.