ಐಸಿಸಿ ಏಕದಿನ ಶ್ರೇಯಾಂಕ: ವಿರಾಟ್ ಕೊಹ್ಲಿ ವಿಶ್ವ ನಂ.1
Team Udayavani, Aug 19, 2017, 1:08 PM IST
ದುಬೈ: ನೂತನವಾಗಿ ಪ್ರಕಟವಾಗಿರುವ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರೆ ತಮ್ಮ ಅಂಕಗಳನ್ನು ಇನ್ನಷ್ಟು ಹೆಚ್ಚಿಸಿಕೊಂಡು 2ನೇ ಸ್ಥಾನದಲ್ಲಿರುವ ಆಸೀಸ್ ಉಪನಾಯಕ ಡೇವಿಡ್ ವಾರ್ನರ್‌ಗಿಂತ ಬಹಳ ಮುಂದೆ ಸಾಗುವ ಅವಕಾಶವಿದೆ. ಮತ್ತೂಂದು ಕಡೆ ಭಾರತ, ತಂಡ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದೆ. ಒಂದು ವೇಳೆ ಲಂಕಾ ವಿರುದ್ಧ 5 ಏಕದಿನ ಪಂದ್ಯಗಳ ಸರಣಿಯನ್ನು ಭಾರತ 4-1ರಿಂದ ಗೆದ್ದರೆ ಯಥಾ ಸ್ಥಾನವನ್ನು ಉಳಿಸಿಕೊಳ್ಳಲಿದೆ. 3-2ರಿಂದ ಗೆದ್ದರೆ 4ನೇ ಸ್ಥಾನಕ್ಕೆ ಕುಸಿಯಲಿದೆ. ಮತ್ತೂಂದು ಕಡೆ ಶ್ರೀಲಂಕಾ 2019ರ ಏಕದಿನ ವಿಶ್ವಕಪ್‌ಗೆ ನೇರಪ್ರವೇಶ ಗಿಟ್ಟಿಸಿಕೊಳ್ಳುವ ಯತ್ನದಲ್ಲಿದೆ.
ಸೆ.30 ವಿಶ್ವಕಪ್‌ಗೆ ನೇರಪ್ರವೇಶ ಪಡೆದುಕೊಳ್ಳಲು ಕಡೆಯ ಅವಕಾಶ. ಆ ಸಂದರ್ಭದಲ್ಲಿ ಸದ್ಯ 8ನೇ ಸ್ಥಾನದಲ್ಲಿರುವ ಲಂಕಾ ಅದನ್ನು ಉಳಿಸಿಕೊಂಡರೆ ನೇರಪ್ರವೇಶ ಪಡೆಯಲಿದೆ. ಇಲ್ಲವಾದರೆ ಅರ್ಹತಾ ಸುತ್ತಿನಲ್ಲಿ ಆಡಿ ಮೇಲೇರಬೇಕಾದ ಮುಜುಗ ರಕ್ಕೊಳಗಾಗಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.