‘ಕಿಂಗ್ ಈಸ್ ಬ್ಯಾಕ್..’ ಹಳೇಯ ಖದರ್ ಗೆ ಮರಳಿದ ಮಾಹಿ, ಸಂತಸದಲ್ಲಿ ತೇಲಾಡಿದ ವಿರಾಟ್
Team Udayavani, Oct 11, 2021, 11:07 AM IST
ದುಬೈ: 14ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಫೈನಲ್ ತಲುಪಿದೆ. ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ತಮ್ಮ ಹಳೇಯ ಖದರ್ ತೋರಿಸಿದ್ದು, ಪಂದ್ಯ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು.
ಧೋನಿ ಅವರು ಮತ್ತೆ ಫಿನಿಶರ್ ಜವಾಬ್ದಾರಿ ವಹಿಸಿದ್ದಾರೆ. ಕೇವಲ ಆರು ಎಸೆತಗಳಲ್ಲಿ ಅಜೇಯ 18 ರನ್ ಬಾರಿಸಿದರು. ಮಾಹಿಯ ಬ್ಯಾಟಿಂಗ್ ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಫಿದಾ ಆಗಿದ್ದು, ಸಂತಸದಲ್ಲಿ ಟ್ವೀಟ್ ಮಾಡಿದ್ದಾರೆ.
“ಕಿಂಗ್ ಈಸ್ ಬ್ಯಾಕ್, ಶ್ರೇಷ್ಠ ಫಿನಿಶರ್. ಧೋನಿ ಇಂದು ಮತ್ತೊಮ್ಮೆ ಸಂತಸದಲ್ಲಿ ನನಗೆ ಸೀಟ್ ನಿಂದ ಹೊರಗೆ ಜಿಗಿಯುವಂತೆ ಮಾಡಿದರು” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಆನ್‌ಲೈನ್ ಜೂಜು ನಿಷೇಧ ಸ್ವಾಗತಾರ್ಹ
ಪಂಜಾಬ್ ಕಿಂಗ್ಸ್ ತಂಡದ ಮಾಲಕಿ, ನಟಿ ಪ್ರೀತಿ ಜಿಂಟಾ ಕೂಡಾ ಟ್ವೀಟ್ ಮಾಡಿದ್ದಾರೆ. ‘ವಾಹ್, ಎಂತಹ ಪಂದ್ಯವಿದು, ಡೆಲ್ಲಿ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಶುಭವಾಗಲಿ. ಇಂದಿನ ರಾತ್ರಿ ಸಿಎಸ್ ಕೆ ತಂಡದ್ದು. ಫಿನಿಶರ್ ಧೋನಿ ತಂಡದನ್ನು ಎದುರು ನಿಂತು ಮುನ್ನಡೆಸುತ್ತಿದ್ದಾರೆ. ಪ್ರತಿ ಬಾರಿ ಕೂಲ್ ಆಗಿದ್ದು ತಂಡದ ಸದಸ್ಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ.
Anddddd the king is back ❤️the greatest finisher ever in the game. Made me jump Outta my seat once again tonight.@msdhoni
— Virat Kohli (@imVkohli) October 10, 2021
ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 173 ರನ್ ಗಳಿಸಿದರೆ, ಸಿಎಸ್ ಕೆ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಸಿಎಸ್ ಕೆ ಒಂಬತ್ತನೇ ಬಾರಿ ಐಪಿಎಲ್ ಫೈನಲ್ ತಲುಪಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.