ಆರ್‌ಸಿಬಿ ತಂಡಕ್ಕೆ ಕೊಹ್ಲಿಯೇ ಕಪ್ತಾನ: ಹೆಸನ್
Team Udayavani, Sep 20, 2019, 5:53 AM IST
ಬೆಂಗಳೂರು: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕತ್ವದಲ್ಲಿ ಯಾವುದೇ ಬದಲಾ ವಣೆಗಳಿಲ್ಲ. ಮುಂದಿನ ಋತುವಿನಲ್ಲೂ ಕೊಹ್ಲಿಯೇ ಮುಂದುವರಿಯಲಿದ್ದಾರೆ ಎಂದು ತಂಡದ ನಿರ್ದೇಶಕ ಮೈಕ್ ಹೆಸನ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್. ಕ್ರಿಸ್ ಗೇಲ್ ಅವರಂತಹ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿ ಒಮ್ಮೆಯೂ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಕೊಹ್ಲಿ 7 ಸೀಸನ್‌ನಲ್ಲಿ ನಾಯಕತ್ವ ವಹಿಸಿದರೂ ತಂಡ ಚಾಂಪಿಯನ್ ಆಗಿಲ್ಲ. ಹೀಗಾಗಿ ಅವರನ್ನು ನಾಯತ್ವದಿಂದ ಕೆಳಗಿಳಿಸುವುದೇ ಸೂಕ್ತ ಎನ್ನುವ ಕೂಗು ಅಲ್ಲಲ್ಲಿ ಕೇಳಿಬಂದಿತ್ತು. ಆದರೆ ಇದಕ್ಕೀಗ ಹೆಸನ್ ತೆರೆ ಎಳೆದಿದ್ದಾರೆ.
“ಕಳೆದು ಹೋದ ದಿನಗಳ ಬಗ್ಗೆ ನಾವು ಚಿಂತಿಸಿ ಪ್ರಯೋಜನವಿಲ್ಲ. ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಕ್ರಿಕೆಟಿಗ. ಅವರ ಆಟದ ಬಗ್ಗೆ ಎರಡು ಮಾತಿಲ್ಲ. ಐಪಿಎಲ್ ಸೋಲಿಗೆ ಕೇವಲ ಕೊಹ್ಲಿಯನ್ನು ಬೆಟ್ಟು ಮಾಡುವುದು ಸರಿಯಲ್ಲ’ ಎಂದು ಹೆಸನ್ ಹೇಳಿದರು.
ತಂಡದ ಆಯ್ಕೆ ಹಾಗೂ ಇತರ ನಿರ್ಧಾರಗಳಲ್ಲಿ ನಡೆದಂತಹ ತಪ್ಪುಗಳು ಯಾವುದೇ ಕಾರಣಕ್ಕೂ ಪುನರಾವರ್ತನೆಯಾಗದು ಎಂದೂ ಅವರು ಭರವಸೆಯಿತ್ತರು.
ಆಟಗಾರರಿಗೆ ಮನವರಿಕೆ
“ಕಳೆದ ಬಾರಿ ನಾವು ಯಾವ ಕಾರಣದಿಂದ ಸೋತೆವು, ನಮ್ಮ ದೌರ್ಬಲ್ಯ ಏನು ಎನ್ನುವುದನ್ನು ಆಟಗಾರರಿಗೆ ಮೊದಲೇ ಮನರಿಕೆ ಮಾಡಬೇಕಿದೆ. ಒತ್ತಡದ ಪರಿಸ್ಥಿತಿಯಲ್ಲೂ ಹಿಂಜರಿಯದೆ ತಮ್ಮ ಆಟವನ್ನು ಯಾವ ರೀತಿ ಆಡಬೇಕು ಎನ್ನುವುದನ್ನು ಮನದಟ್ಟು ಮಾಡಬೇಕಿದೆ. ಈ ಮೂಲಕ ಪ್ರತಿಯೊಬ್ಬ ಆಟಗಾರನಲ್ಲೂ ಆತ್ಮಸ್ಥೈರ್ಯ ತುಂಬುವ ಮೂಲಕ ಹೊಸ ಋತುವಿಗೆ ತಂಡವನ್ನು ಸರ್ವರೀತಿಯಲ್ಲಿ ಸಜ್ಜಾಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದು ಹೆಸನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.