ಮೂರೂ ಮಾದರಿಯಲ್ಲೂ ಅಗ್ರ: ಐತಿಹಾಸಿಕ ಸಾಧನೆಗೆ ಕೊಹ್ಲಿ ಸನಿಹ
Team Udayavani, Dec 9, 2017, 11:42 AM IST
ನವದೆಹಲಿ: ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಪ್ರತಿ ಪಂದ್ಯದಲ್ಲಿಯೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತಿವೆ. ಇದೀಗ ಕೊಹ್ಲಿ ದಕ್ಷಿಣ ಆಫ್ರಿಕಾ ಸರಣಿಯ ಸಂದರ್ಭದಲ್ಲಿ ಕ್ರಿಕೆಟ್ ಮೂರೂ ಮಾದರಿಯಲ್ಲೂ ಅಗ್ರ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕ್ಕಿ ಪಾಂಟಿಂಗ್ ಮತ್ತು ಮ್ಯಾಥ್ಯೂ ಹೇಡನ್ ದಾಖಲೆಯನ್ನು ಸರಿಗಟ್ಟುವ ಸಾಧ್ಯತೆ ಇದೆ.
ಈಗಾಗಲೇ ಕೊಹ್ಲಿ ಏಕದಿನ ಮತ್ತು ಟಿ20 ಮಾದರಿಯಲ್ಲಿ ನಂ.1ನೇ ಸ್ಥಾನದಲ್ಲಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಂ.2ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ನಂ.1ನೇ ಸ್ಥಾನಕ್ಕೇರಲಿದ್ದಾರೆ.
ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಒಟ್ಟು 938 ಅಂಕ ಸಂಪಾಧಿಸಿ ನಂ.1ನೇ ಸ್ಥಾನದಲ್ಲಿದ್ದರೆ, ಕೊಹ್ಲಿ 893 ಅಂಕ ಸಂಪಾದಿಸಿ ನಂ.2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಸ್ಮಿತ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲು 45 ಅಂಕಗಳ ಅಗತ್ಯವಿದೆ.
ಬನ್ನಿ ಅಡಿಲೇಡಲ್ಲಿ ಮದುವೆ ಆಗಿ: ಕೊಹ್ಲಿಗೆ ಆಹ್ವಾನ
ಅಡಿಲೇಡ್: ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮ ಇಟಲಿಯ ಮಿಲಾನ್‌ನಲ್ಲಿ ವಿವಾಹವಾಗಲು
ಹೊರಟಿದ್ದಾರೆಂದು ವರದಿಯಾಗಿದೆ. ಇಂತಹ ವರದಿಗಳ ನಡುವೆಯೇ ಕೊಹ್ಲಿಗೆ ಅಡಿಲೇಡ್ ಕ್ರಿಕೆಟ್ ಮೈದಾನದ ಸಿಇಒ ಆಮಿಷ ಒಡ್ಡಿದ್ದಾರೆ. ಕೊಹ್ಲಿ ಅಡಿಲೇಡ್‌ನಲ್ಲಿ ಅದ್ಭುತ ಆಟವಾಡಿದ್ದಾರೆ. ಅಂತಹ ಅಡಿಲೇಡ್‌ನಲ್ಲಿ ಕೊಹ್ಲಿ-ಅನುಷ್ಕಾ ವಿವಾಹವಾದರೆ ಅದು ಸ್ಮರಣೀಯ ನೆನಪಾಗುಳಿಯಲಿದೆ. ನಾವು ಅವರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲು ಸಿದ್ಧ. ಅವರಿಬ್ಬರು ಇಲ್ಲಿ ಮದುವೆಯಾಗುತ್ತಾರೆಂದರೆ ನಮಗೂ ಅದು ರೋಮಾಂಚಕ ಸಂಗತಿ ಎಂದು ಆ್ಯಂಡ್ರೂ ಡೇನಿಯೆಲ್ ಹೇಳಿದ್ದಾರೆ. 2012ರಲ್ಲಿ ಇಲ್ಲಿ ಕೊಹ್ಲಿ ಆಡಿದ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ್ದರು. 2014ರಲ್ಲಿ ಇನ್ನೊಂದು ಶತಕ ಬಾರಿಸಿದ್ದರು. 2016ರಲ್ಲಿ ಟಿ20 ಪಂದ್ಯದಲ್ಲಿ ಅದ್ಭುತ 90 ರನ್ ಬಾರಿಸಿದ್ದರು. ದೂರದ ಇಟಲಿಗಿಂತ ಕೊಹ್ಲಿಗೆ ಅಡಿಲೇಡ್ ವಾಸಿ ಎನ್ನುವುದು ಡೇನಿಯೆಲ್ ಅಭಿಪ್ರಾಯ. ಆದರೆ
ಬಹುಶಃ ಕೊಹ್ಲಿ ಇದನ್ನು ಕೇಳುವ ಸ್ಥಿತಿಯಲ್ಲಿರುವುದು ಅನುಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.