ಕಿಂಗ್ಸ್‌ಮೀಡ್‌ನ‌ಲ್ಲಿ ಕೊಹ್ಲಿಯೇ ಕಿಂಗ್‌ !


Team Udayavani, Feb 3, 2018, 1:04 PM IST

30-39.jpg

ಡರ್ಬನ್‌: ಅಮೋಘ 33ನೇ ಶತಕದೊಂದಿಗೆ ಭಾರತದ ಜಯಭೇರಿಗೆ ಕಾರಣರಾದ ವಿರಾಟ್‌ ಕೊಹ್ಲಿ ಗುರುವಾರ ರಾತ್ರಿ ಡರ್ಬನ್‌ನ “ಕಿಂಗ್ಸ್‌ಮೀಡ್‌’ ಸ್ಟೇಡಿಯಂನಲ್ಲಿ ಅಕ್ಷರಶಃ ಕಿಂಗ್‌ ಆಗಿ ಮೆರೆದರು. ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್‌ಗಳಿಂದ ಮಣಿಸಿದ್ದು ಟೀಮ್‌ ಇಂಡಿಯಾದ ಐತಿಹಾಸಿಕ ಸಾಧನೆಯಾಗಿ ದಾಖಲಾಯಿತು. ಏಕೆಂದರೆ, ಇದು ಡರ್ಬನ್‌ನಲ್ಲಿ ಆತಿಥೇಯರ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಭಾರತದ ಸಾಧಿಸಿದ ಪ್ರಥಮ ಗೆಲುವು!

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್‌ ಅವರ ಶತಕದ ನೆರವಿನಿಂದ 8ಕ್ಕೆ 269 ರನ್‌ ಮಾಡಿದರೆ, ಭಾರತ ಕೊಹ್ಲಿ ಸೆಂಚುರಿ ಸಾಹಸದಿಂದ 45.3 ಓವರ್‌ಗಳಲ್ಲಿ 4 ವಿಕೆಟಿಗೆ 270 ರನ್‌ ಪೇರಿಸಿ ಗೆಲುವು ಸಾಧಿಸಿತು. ಕೊಹ್ಲಿ 119 ಎಸೆತಗಳಿಂದ 112 ರನ್‌ (10 ಬೌಂಡರಿ) ಬಾರಿಸಿ ಹರಿಣಗಳ ಮೇಲೆರಗಿ ಹೋದರು. ಅಜಿಂಕ್ಯ ರಹಾನೆ 79 ರನ್‌ ಕೊಡುಗೆ ಸಲ್ಲಿಸಿದರು (86 ಎಸೆತ, 5 ಬೌಂಡರಿ). ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 189 ರನ್‌ ಒಟ್ಟುಗೂಡಿತು. 

ಟಾಪ್‌ ಕ್ಲಾಸ್‌ ರಹಾನೆ!
ಈ ಸಂದರ್ಭದಲ್ಲಿ ತನ್ನ ಶತಕ ಪರಾಕ್ರಮದ ಬಗ್ಗೆ ಹೆಚ್ಚೇನೂ ಹೇಳದ ವಿರಾಟ್‌ ಕೊಹ್ಲಿ, ಇದು ತಂಡ ಸಾಧನೆಗೆ ಒಲಿದ ಜಯ ಎಂದಿದ್ದಾರೆ. ಮುಖ್ಯವಾಗಿ ರಹಾನೆ ಅವರ ಜವಾಬ್ದಾರಿಯುತ ಆಟಕ್ಕೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ. “ಜಿಂಕ್ಸ್‌ (ರಹಾನೆ) ಓರ್ವ ಟಾಪ್‌ ಕ್ಲಾಸ್‌ ಆಟಗಾರ. ಈ ಸರಣಿಯಲ್ಲಿ ವೇಗದ ಬೌಲಿಂಗ್‌ ಪಾತ್ರವೇ ನಿರ್ಣಾಯಕ. ಆದರೆ ರಹಾನೆ ಅಮೋಘ ರೀತಿಯಲ್ಲಿ ವೇಗದ ಬೌಲಿಂಗ್‌ ದಾಳಿಯನ್ನು ನಿಭಾಯಿಸಿದರು’ ಎಂದು ಕೊಹ್ಲಿ ಹೇಳಿದರು.

“ಸರಣಿಯ ಮೊದಲ ಪಂದ್ಯ ಯಾವತ್ತೂ ಮುಖ್ಯವಾದುದು. 3ನೇ ಟೆಸ್ಟ್‌ ಪಂದ್ಯದಲ್ಲಿ ಕಂಡು ಕೊಂಡ ಲಯವನ್ನು ಇಲ್ಲಿಯೂ ಮುಂದುವರಿಸುವಲ್ಲಿ ಯಶಸ್ವಿಯಾದವು. ಬ್ಯಾಟಿಂಗ್‌ ಯೋಗ್ಯ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 269ಕ್ಕೆ ನಿಯಂತ್ರಿಸಿದ್ದು ದೊಡ್ಡ ಸಾಧನೆ ಆಗಿದೆ’ ಎಂದರು.

“ಭುವಿ ಮತ್ತು ಬುಮ್ರಾ ಅವರನ್ನು ನಾವು ಹೆಚ್ಚು ಅವಲಂಬಿಸಿದ್ದೆವು. ಮೊದಲ 10 ಓವರ್‌ಗಳಲ್ಲಿ ಒಂದೆರಡು ವಿಕೆಟ್‌ ಉರುಳಿಸುವುದು ನಮ್ಮ ಯೋಜನೆಯಾಗಿತ್ತು. ರಿಸ್ಟ್‌ ಸ್ಪಿನ್ನರ್‌ಗಳಾದ ಕುಲದೀಪ್‌ ಮತ್ತು ಚಾಹಲ್‌ ಅಮೋಘ ಹಾಗೂ ಘಾತಕ ದಾಳಿ ಸಂಘಟಿಸಿದರು. ಇಬ್ಬರೂ ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿರುವುದು ಇದೇ ಮೊದಲು. ಧೈರ್ಯದಿಂದ ಸವಾಲನ್ನು ಎದುರಿಸಿ ಯಶಸ್ವಿಯಾದರು. ನಾಯಕನಾದವನಿಗೆ ಇದು ಹೆಚ್ಚು ಸಂತಸ ತರುವ ಸಂಗತಿ’ ಎಂದರು.

ರೋಹಿತ್‌-ಧವನ್‌ ಭಾರತಕ್ಕೆ ಉತ್ತಮ ಆರಂಭವನ್ನೇ ನೀಡಿದ್ದರು. ರೋಹಿತ್‌ ಸಿಡಿದರೂ ಬೇಗ ನಿರ್ಗಮಿಸಿದರು. ಕೊಹ್ಲಿ ಯಿಂದಾಗಿಯೇ ಧವನ್‌ ರನೌಟಾಗಬೇಕಾಯಿತು. ಆದರೆ ಶತಕ ಬಾರಿಸಿ, ತಂಡವನ್ನು ಗೆಲ್ಲಿಸುವ ಮೂಲಕ ಕೊಹ್ಲಿ ಆ ರನೌಟನ್ನು ಮರೆಯುವಂತೆ ಮಾಡಿದ್ದಾರೆ!

300 ರನ್‌ ಅಗತ್ಯವಿತ್ತು: ಡು ಪ್ಲೆಸಿಸ್‌
“ನಮ್ಮ ಬೌಲರ್‌ಗಳನ್ನು ದೂರುವುದು ಸರಿಯಲ್ಲ. ನಮ್ಮ ಸ್ಕೋರ್‌ಬೋರ್ಡ್‌ನಲ್ಲಿ 300 ರನ್‌ ಇರಬೇಕಿತ್ತು’ ಎಂಬುದು ಆಫ್ರಿಕಾ ತಂಡದ ನಾಯಕ ಫಾ ಡು ಪ್ಲೆಸಿಸ್‌ ಅಭಿಪ್ರಾಯ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಷ್ಟೇನೂ ಯಶಸ್ಸು ಕಾಣದಿದ್ದಾಗ ಏಕಾಂಗಿಯಾಗಿ ಹೋರಾಡಿದ ಡು ಪ್ಲೆಸಿಸ್‌ 120 ರನ್‌ ಬಾರಿಸಿದ್ದರು.

“ನಮ್ಮ ಬೌಲಿಂಗ್‌ ನಿರೀಕ್ಷಿತ ಮಟ್ಟ ದಲ್ಲಿರ‌ಲ್ಲ. 2ನೇ ಅತ್ಯಧಿಕ ಮೊತ್ತ 30-40 ರನ್‌ ಆಗಿದ್ದನ್ನು ಕಂಡಾಗ ನಾವು ಉತ್ತಮ ಜತೆಯಾಟ ನಡೆಸಲಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ. ಜತೆಗೆ ಸ್ಪಿನ್ನರ್‌ಗಳಾದ ಚಾಹಲ್‌, ಕುಲದೀಪ್‌ ಯಾದವ್‌ ಅವರನ್ನು ನಾವು ಹೆಚ್ಚು ಎಚ್ಚರಿಕೆಯಿಂದ ಎದುರಿಸಬೇಕಿದೆ’ ಎಂದರು.

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ        8 ವಿಕೆಟಿಗೆ 269
ಭಾರತ

ರೋಹಿತ್‌ ಶರ್ಮ    ಸಿ ಡಿ ಕಾಕ್‌ ಬಿ ಮಾರ್ಕೆಲ್‌    20
ಶಿಖರ್‌ ಧವನ್‌    ರನೌಟ್‌    35
ವಿರಾಟ್‌ ಕೊಹ್ಲಿ    ಸಿ ರಬಾಡ ಬಿ ಫೆಲುಕ್ವಾಯೊ    112
ಅಜಿಂಕ್ಯ ರಹಾನೆ    ಸಿ ತಾಹಿರ್‌ ಬಿ ಫೆಲುಕ್ವಾಯೊ    79
ಹಾರ್ದಿಕ್‌ ಪಾಂಡ್ಯ    ಔಟಾಗದೆ    3
ಎಂ.ಎಸ್‌. ಧೋನಿ    ಔಟಾಗದೆ    4

ಇತರ        17
ಒಟ್ಟು  (45.3 ಓವರ್‌ಗಳಲ್ಲಿ 4 ವಿಕೆಟಿಗೆ)    270
ವಿಕೆಟ್‌ ಪತನ: 1-33, 2-67, 3-256, 4-262.

ಬೌಲಿಂಗ್‌:
ಮಾರ್ನೆ ಮಾರ್ಕೆಲ್‌        7-0-35-1
ಕಾಗಿಸೊ ರಬಾಡ        9.3-0-48-0
ಕ್ರಿಸ್‌ ಮಾರಿಸ್‌        7-0-52-0
ಇಮ್ರಾನ್‌ ತಾಹಿರ್‌        10-0-51-0
ಆ್ಯಂಡಿಲ್‌ ಫೆಲುಕ್ವಾಯೊ    8-0-42-2
ಜೆಪಿ ಡ್ಯುಮಿನಿ        2-0-16-0
ಐಡನ್‌ ಮಾರ್ಕ್‌ಮ್‌        2-0-20-0

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ
2ನೇ ಪಂದ್ಯ: ಸೆಂಚುರಿಯನ್‌ (ಫೆ. 4)

ಎಕ್ಸ್‌ಟ್ರಾ ಇನ್ನಿಂಗ್ಸ್‌: ಭಾರತ-ದ.ಆಫ್ರಿಕಾ ಡರ್ಬನ್‌ ಏಕದಿನ
* ದಕ್ಷಿಣ ಆಫ್ರಿಕಾ ತವರಿನಲ್ಲಿ ಸತತ 17 ಪಂದ್ಯಗಳನ್ನು ಗೆದ್ದು ದಾಖಲೆ ಸ್ಥಾಪಿಸಿದ ಬಳಿಕ ಮೊದಲ ಸೋಲನುಭವಿಸಿತು. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ದಕ್ಷಿಣ ಆಫ್ರಿಕಾ ಗೆಲುವಿನ ಓಟ ಆರಂಭಿಸಿತ್ತು.

* ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ 2ನೇ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತು (270 ರನ್‌). ಇದಕ್ಕೂ ಮುನ್ನ 2003ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಸೆಂಚುರಿಯನ್‌ನಲ್ಲಿ 274 ರನ್‌ ಬೆನ್ನಟ್ಟಿ ಗೆದ್ದದ್ದು ದಾಖಲೆ. 

* ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ಭಾರತ ಮೊದಲ ಜಯ ದಾಖ ಲಿಸಿತು. ಈ ಅಂಗಳದಲ್ಲಿ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದ  ಪ್ರವಾಸಿ ತಂಡವೆಂಬ ದಾಖಲೆಯನ್ನೂ ನಿರ್ಮಿಸಿತು. 2002ರಲ್ಲಿ ಆಸ್ಟ್ರೇಲಿಯ 268 ರನ್‌ ಬಾರಿಸಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು.

* ಕೊಹ್ಲಿ 33ನೇ ಶತಕ ಬಾರಿಸಿದರು. ಇದು ದಕ್ಷಿಣ ಆಫ್ರಿಕಾದಲ್ಲಿ ಅವರು ಹೊಡೆದ ಮೊದಲ ಶತಕ. ಇದರೊಂದಿಗೆ ಕೊಹ್ಲಿ ಒಟ್ಟು 9 ರಾಷ್ಟ್ರಗಳಲ್ಲಿ ಏಕದಿನ ಶತಕ ದಾಖಲಿಸಿದಂತಾಯಿತು. ಅವರು ಪಾಕಿಸ್ಥಾನದಲ್ಲಿ ಈವರೆಗೆ ಆಡಿಲ್ಲ.

* ಅಜಿಂಕ್ಯ ರಹಾನೆ ಸತತ 5 ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ಹೊಡೆದರು. ಅವರು ಈ ಸಾಧನೆಗೈದ ಭಾರತದ 3ನೇ ಬ್ಯಾಟ್ಸ್‌ಮನ್‌. ಉಳಿದಿಬ್ಬರೆಂದರೆ ಸಚಿನ್‌ ತೆಂಡುಲ್ಕರ್‌ ಮತ್ತು ವಿರಾಟ್‌ ಕೊಹ್ಲಿ. 

* ಕೊಹ್ಲಿ-ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ವಿಕೆಟಿಗೆ ಅತ್ಯಧಿಕ ರನ್‌ ಒಟ್ಟುಗೂಡಿಸಿದ ಭಾರತೀಯ ಜೋಡಿ ಎನಿಸಿತು (189 ರನ್‌). 2007ರ ಬೆಲ್‌ಫಾಸ್ಟ್‌ ಪಂದ್ಯದಲ್ಲಿ ತೆಂಡುಲ್ಕರ್‌-ದ್ರಾವಿಡ್‌ ಪೇರಿಸಿದ 158 ರನ್‌ ದಾಖಲೆ ಪತನಗೊಂಡಿತು.

* ಕೊಹ್ಲಿ-ರಹಾನೆ ಡರ್ಬನ್‌ನಲ್ಲಿ 3ನೇ ವಿಕೆಟಿಗೆ ಅತ್ಯಧಿಕ ರನ್‌ ಒಟ್ಟು ಗೂಡಿಸಿದ ದಾಖಲೆ ಬರೆದರು. 1994ರಲ್ಲಿ ಪಾಕಿಸ್ಥಾನದ ಇಜಾಜ್‌ ಅಹ್ಮದ್‌-ಸಲೀಂ ಮಲಿಕ್‌ 136 ರನ್‌ ಪೇರಿಸಿದ ದಾಖಲೆ ಪತನಗೊಂಡಿತು.

* ಕೊಹ್ಲಿ-ರಹಾನೆ 3ನೇ ವಿಕೆಟಿಗೆ ಸತತ 3ನೇ ಶತಕದ ಜತೆಯಾಟ ನಡೆಸಿದರು. ಇದಕ್ಕೂ ಮುನ್ನ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈಯಲ್ಲಿ 104 ರನ್‌, 2016ರಲ್ಲಿ ಆಸ್ಟ್ರೇಲಿಯ ವಿರುದ್ಧ ಮೆಲ್ಬರ್ನ್ನಲ್ಲಿ 109 ರನ್‌ ಪೇರಿಸಿದ್ದರು.

* ಫಾ ಡು ಪ್ಲೆಸಿಸ್‌ ತವರಿನಲ್ಲಿ ಭಾರತದ ವಿರುದ್ಧ ಅತ್ಯಧಿಕ ರನ್‌ ಹೊಡೆದ ದಕ್ಷಿಣ ಆಫ್ರಿಕಾ ನಾಯಕನೆನಿಸಿದರು (120 ರನ್‌). 2013ರ ಸೆಂಚುರಿಯನ್‌ ಪಂದ್ಯದಲ್ಲಿ ಎಬಿಡಿ 109 ರನ್‌ ಗಳಿಸಿದ್ದು ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

Vinoo Mankad Trophy: ರಾಜ್ಯ ತಂಡಕ್ಕೆ ಬ್ರಹ್ಮಾವರದ ರೋಹಿತ್‌

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.