ಬ್ರಾಡ್ಮನ್ ದಾಖಲೆ ಮುರಿಯಲು ಕೊಹ್ಲಿಗಿನ್ನು ಕೇವಲ 104 ರನ್ ಬೇಕು
Team Udayavani, Feb 20, 2018, 4:07 PM IST
ಹೊಸದಿಲ್ಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವಾಸವೊಂದರಲ್ಲಿ 974 ರನ್ ಬಾರಿಸಿ ಯಾರೂ ಈ ತನಕ ಮುರಿಯದಿರುವ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಈಗ ಮುಗಿತಾಯದ ಹಂತಕ್ಕೆ ಬಂದಿರುವ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಮುರಿಯುವರೇ ?
ಬ್ರಾಡ್ಮನ್ ಅವರ ಈ ಅತ್ಯಪರೂಪದ ಮತ್ತು ನಂಬಲು ಕಷ್ಟವೆನಿಸಿರುವ 974 ರನ್ ಗಳಿಕೆಯ ಸಾಧನೆಯನ್ನು ಮುರಿಯಲು ಕೊಹ್ಲಿಗೆ ಈಗಿನ್ನು ಬೇಕಿರುವುದು ಕೇವಲ 104 ರನ್ ಮಾತ್ರ. 29ರ ಹರೆಯದ ಕೊಹ್ಲಿ ಅವರು ಹಾಲಿ ಪ್ರವಾಸದಲ್ಲಿ ಈ ತನಕದ 13 ಇನ್ನಿಂಗ್ಸ್‌ಗಳಲ್ಲಿ ಒಟ್ಟು 870 ರನ್ ಬಾರಿಸಿದ್ದಾರೆ.
ಸರ್ ಬ್ರಾಡ್ಮನ್ ಅವರು 1930ರಲ್ಲಿ ಇಂಗ್ಲಂಡ್ ವಿರುದ್ಧದ ಸರಣಿಯಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 974 ರನ್ ಬಾರಿಸಿದ್ದರು.
ಹಾಲಿ ಪ್ರವಾಸದಲ್ಲಿ ಈಗಿನ್ನು ಕೇವಲ ಎರಡು ಟಿ-20 ಪಂದ್ಯಗಳಿದ್ದು ಅವೆರಡರಲ್ಲಿ ಕೊಹ್ಲಿ ಅವರಿಗೆ ಒಟ್ಟು 104 ರನ ಬಾರಿಸುವ ಅವಕಾಶ ಪ್ರಾಪ್ತವಾದೀತೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ದಕ್ಷಿಣ ಆಫ್ರಿಕ ವಿರುದ್ಧದ ಕೊನೇ ಎರಡು ಟಿ-20 ಪಂದ್ಯಗಳು ಇದೇ ಫೆ.21 ಮತ್ತು ಫೆ.24ರಂದು ನಡೆಯಲಿವೆ. ಮೊದಲನೇ ಪಂದ್ಯವನ್ನು ಗೆದ್ದಿರುವ ಭಾರತ ಈ ಕಿರು ಕ್ರಿಕೆಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಹೊಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.