![Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು](https://www.udayavani.com/wp-content/uploads/2025/02/baby-1-415x250.jpg)
![Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು](https://www.udayavani.com/wp-content/uploads/2025/02/baby-1-415x250.jpg)
Team Udayavani, Jan 29, 2025, 6:24 AM IST
ಹೊಸದಿಲ್ಲಿ,: ಟೀಮ್ ಇಂಡಿಯಾದ ತಾರಾ ಆಟಗಾರ ವಿರಾಟ್ ಕೊಹ್ಲಿ 13 ವರ್ಷಗಳ ಬಳಿಕ ದಿಲ್ಲಿ ಪರ ರಣಜಿ ಪಂದ್ಯ ಆಡಲಿಳಿಯಲಿದ್ದಾರೆ. ಗುರುವಾರ ರೈಲ್ವೇಸ್ ವಿರುದ್ಧ ತವರಿನಂಗಳದಲ್ಲಿ ಆರಂಭವಾಗುವ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಆಯುಷ್ ಬದೋನಿ ದಿಲ್ಲಿ ತಂಡದ ನಾಯಕ.
ಈ ಸಂದರ್ಭದಲ್ಲಿ ಕುತೂಹಲಕ್ಕೆಂದು ವಿರಾಟ್ ಕೊಹ್ಲಿ ಅವರ ಕೊನೆಯ ರಣಜಿ ಪಂದ್ಯದತ್ತ ಹಿನ್ನೋಟ ಹರಿಸ ಲಾಗಿದೆ. ಕೊಹ್ಲಿ ಕೊನೆಯ ಪಂದ್ಯ ಆಡಿದ್ದು 2012ರಲ್ಲಿ. ಎದುರಾಳಿ ಉತ್ತರಪ್ರದೇಶ, ಸ್ಥಳ ಗಾಜಿಯಾಬಾದ್. ಅಂದಿನ ಪಂದ್ಯದಲ್ಲಿ ಕೊಹ್ಲಿ 14 ಮತ್ತು 43 ರನ್ ಮಾಡಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದ್ದರು. ದಿಲ್ಲಿ 4 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು.
ಟೀಮ್ ಇಂಡಿಯಾದ ಈಗಿನ ಕೋಚ್ ಗೌತಮ್ ಗಂಭೀರ್ ಕೂಡ ಅಂದಿನ ದಿಲ್ಲಿ ತಂಡದಲ್ಲಿದ್ದರು. ನಾಯಕರಾಗಿದ್ದವರು ವೀರೇಂದ್ರ ಸೆಹವಾಗ್. ಜತೆಗೆ ಆಶಿಷ್ ನೆಹ್ರಾ, ಇಶಾಂತ್ ಶರ್ಮ, ಉನ್ಮುಕ್ತ್ ಚಂದ್ ಕೂಡ ಅಂದಿನ ತಂಡದ ಸದಸ್ಯರಾಗಿದ್ದರು.
2006ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ದಿಲ್ಲಿ ಪರ 41 ಪಂದ್ಯಗಳಿಂದ 2,891 ರನ್ ಗಳಿಸಿದ್ದಾರೆ. ಸರಾಸರಿ 51.62. ಸರ್ವಾಧಿಕ ಗಳಿಕೆ 197 ರನ್.
“ಕಮ್ ಬ್ಯಾಕ್’ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನ ಹೇಗಿರ ಲಿದೆ ಎಂಬುದನ್ನು ಕಾಣಲು ಅಭಿಮಾನಿಗಳು ಕಾದಿದ್ದಾರೆ.
WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ
Women’s FIH Pro League: ಭಾರತಕ್ಕೆ ಇಂಗ್ಲೆಂಡ್ ವಿರುದ್ಧ 3-2ರಿಂದ ಜಯ
ICC Event: ಚಾಂಪಿಯನ್ಸ್ ಟ್ರೋಫಿಯೇ ರೋಹಿತ್, ಕೊಹ್ಲಿ, ಜಡೇಜಗೆ ಕೊನೆಯ ಐಸಿಸಿ ಕೂಟ?
Freestyle Chess Grand Slam: ಗುಕೇಶ್‌ಗೆ ಕೊನೆಯ ಸ್ಥಾನ…
Jannik Sinner: ಉದ್ದೀಪನ… ಟೆನಿಸಿಗ ಜಾನಿಕ್ ಸಿನ್ನರ್‌ಗೆ 3 ತಿಂಗಳು ನಿಷೇಧ
You seem to have an Ad Blocker on.
To continue reading, please turn it off or whitelist Udayavani.