ಗೆಲುವಿನಲ್ಲೂ ದಾಖಲೆ ಬರೆದ ಕಿಂಗ್ ಕೊಹ್ಲಿ
Team Udayavani, Aug 26, 2019, 11:28 AM IST
ಆಂಟಿಗುವಾ: ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ದದ ಟೆಸ್ಟ್ ಗೆಲುವಿನ ನಂತರ ಹೊಸ ದಾಖಲೆ ಬರೆದಿದ್ದಾರೆ. ಆದರೆ ಈ ಬಾರಿ ರನ್, ಶತಕಗಳಲ್ಲಿ ಮಾತ್ರ ವಿರಾಟ್ ದಾಖಲೆ ಬರೆದಿಲ್ಲ, ನಾಯಕನಾಗಿ ವಿರಾಟ್ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ.
ಹೌದು, ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿದೇಶದಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಭಾರತೀಯ ನಾಯಕ ಎಂಬ ಖ್ಯಾತಿಗೆ ಕೊಹ್ಲಿ ಸೇರಿದ್ದಾರೆ. ಕೊಹ್ಲಿ ವಿದೇಶದಲ್ಲಿ 26 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಅದರಲ್ಲಿ 12 ಪಂದ್ಯವನ್ನು ಭಾರತ ಗೆದ್ದಿದೆ. ಸೌರವ್ ಗಂಗೂಲಿ 11 ಪಂದ್ಯವನ್ನು ವಿದೇಶದಲ್ಲಿ ಗೆದ್ದುಕೊಂಡಿದ್ದು, ಒಟ್ಟು 28 ಪಂದ್ಯಗಳಲ್ಲಿ ವಿದೇಶದಲ್ಲಿ ಭಾರತವನ್ನು ದಾದ ಮುನ್ನೆಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ 6 ಪಂದ್ಯ ಮತ್ತು ದ್ರಾವಿಡ್ ಐದು ಟೆಸ್ಟ್ ಪಂದ್ಯಗಳನ್ನು ವಿದೇಶದಲ್ಲಿ ಗೆದ್ದುಕೊಂಡಿದ್ದರು.
ಇದಲ್ಲದೆ ಕೊಹ್ಲಿ ಮತ್ತೊಂದು ದಾಖಲೆಯಲ್ಲಿ ಧೋನಿಯ ಜೊತೆಗೆ ಕಾಣಿಸಿ ಕೊಂಡಿದ್ದಾರೆ. ಒಟ್ಟಾರೆಯಾಗಿ ಅತೀ ಹೆಚ್ಚು ಟೆಸ್ಟ್ ಗೆದ್ದ ನಾಯಕ ಎಂಬ ದಾಖಲೆಯನ್ನು ಧೋನಿ ಜೊತೆ ಹಂಚಿಕೊಂಡಿದ್ದಾರೆ. ಉಭಯ ನಾಯಕರು ತಲಾ 27 ಟೆಸ್ಟ್ ಪಂದ್ಯ ಗೆದ್ದಿದ್ದಾರೆ. ಆದರೆ ಕೊಹ್ಲಿ 47 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಧೋನಿ ಇದಕ್ಕಾಗಿ 60 ಟೆಸ್ಟ್ ಗಳನ್ನು ತೆಗೆದುಕೊಂಡಿದ್ದರು.
ಆಂಟಿಗುವಾ ಟೆಸ್ಟ್ ಪಂದ್ಯವನ್ನು ಭಾರತ 318 ರನ್ ಗಳ ಬೃಹತ್ ಅಂತರದಿಂದ ಗೆದ್ದು ಬೀಗಿದೆ. ಇದು ವಿದೇಶದಲ್ಲಿ ಭಾರತದ ಅತೀ ದೊಡ್ಡ ಅಂತರದ ಗೆಲುವು. 2017ರಲ್ಲಿ ಲಂಕಾ ವಿರುದ್ಧ ಗಾಲೆ ಟೆಸ್ಟ್ ಪಂದ್ಯದಲ್ಲಿ 304 ರನ್ ಅಂತರದ ಜಯ ಗಳಿಸಿದ್ದೇ ಇದುವರೆಗಿನ ವಿದೇಶಿ ಅತೀ ದೊಡ್ಡ ಗೆಲುವಾಗಿತ್ತು. ಇದರಿಂದೊಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಶುಭಾರಂಭ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.