ಕನ್ನಡದಲ್ಲಿ ಕೊಹ್ಲಿ ಟ್ವೀಟ್: ಏನಂದ್ರು RCB Captain?
Team Udayavani, May 5, 2019, 8:50 PM IST
12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ “ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಹೋರಾಟ ಶನಿವಾರ ಅಂತ್ಯವಾಗಿದ್ದು, ಅಂತಿಮ ಪಂದ್ಯದಲ್ಲಿ “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧ ಗೆಲುವು ಸಾಧಿಸೋ ಮೂಲಕ ಟೂರ್ನಿಗೆ ವಿದಾಯ ಹೇಳಿತು. ಅಲ್ಲದೇ ಆರ್ಸಿಬಿ ಸತತ ಸೋಲುಗಳಿಂದ ತೀವ್ರ ಮುಖಭಂಗ ಅನುಭವಿಸಿದರೂ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡವನ್ನು ಕೈಬಿಡದೇ ಮುಂದಿನ ಭಾರಿ ಕಪ್ ನಮ್ದೇ ಎಂದಿದ್ದಾರೆ.
ಇದೀಗ ಟೂರ್ನಿಯುದ್ದಕ್ಕೂ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಹೌದು! “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧದ ಗೆಲುವಿನ ಬಳಿಕ ಕೊಹ್ಲಿ ತಂಡವನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳು, ತಂಡದ ಸದಸ್ಯರು, ಗ್ರೌಂಡ್ ಸ್ಟಾಫ್, ಸಪೂರ್ಟ್ ಸ್ಟಾಫ್ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ಮುಂದಿನ ವರ್ಷ ಬಲಿಷ್ಠವಾಗಿ ಮತ್ತೆ ಬರುತ್ತೇವೆ ಎಂದು ಇಂಗ್ಲೀಷ್‍ನಲ್ಲಿ ಟ್ವೀಟ್ ಮಾಡಿದ ಕೊಹ್ಲಿ, “ನೀವು ಇಲ್ಲಾಂದ್ರೆ, ನಾವು ಏನೂ ಅಲ್ಲಾ’ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
Thank you guys for all the love & support – the entire team including the fans, the ground staff & the support staff! Promise to come back stronger next year. ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ ?? @RCBTweets #RCB #RCBBoldArmy #PlayBold pic.twitter.com/Elyhdd9daG
— Virat Kohli (@imVkohli) May 5, 2019
ಇನ್ನು ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ತರಹೇವಾರಿ ಕಮೆಂಟ್‍ಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ಸೋಲು – ಗೆಲುವಿನಲ್ಲಿ ತಂಡದ ಜೊತೆಗಿದ್ದ ಅಭಿಮಾನಿಗಳ ಫೋಟೋವನ್ನು ಕೂಡ ಟ್ವೀಟ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.