ಫೈನಲ್ ಪ್ರವೇಶಿಸಿದ ಕೋಲ್ಕತಾ ನೈಟ್‌ರೈಡರ್
Team Udayavani, Oct 13, 2021, 11:28 PM IST
ಶಾರ್ಜಾ: ಕಳೆದ ಸಲದ ಫೈನಲಿಸ್ಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿ 3 ವಿಕೆಟ್ ಗೆಲುವು ಸಾಧಿಸಿದ ಕೋಲ್ಕತಾ ನೈಟ್‌ರೈಡರ್ 2021ನೇ ಐಪಿಎಲ್ ಕೂಟದ ಫೈನಲ್‌ಗೆಓಟ ಬೆಳೆಸಿದೆ. ಶುಕ್ರವಾರದ ಪ್ರಶಸ್ತಿ ಕಾಳಗದಲ್ಲಿ ಚೆನ್ನೈ ವಿರುದ್ಧ ಸೆಣಸಲಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ತೀವ್ರ ಪರದಾಟದ ಬಳಿಕ 5 ವಿಕೆಟಿಗೆ 135 ರನ್ ಗಳಿಸಿದರೆ, ಕೋಲ್ಕತಾ 19.5 ಓವರ್‌ಗಳಲ್ಲಿ 7 ವಿಕೆಟಿಗೆ 136 ರನ್ ಬಾರಿಸಿತು. ಕೊನೆಯಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ ತಂಡವನ್ನು ರಾಹುಲ್ ತ್ರಿಪಾಠಿ ರಕ್ಷಿಸಿದರು. ಹ್ಯಾಟ್ರಿಕ್ ಹಾದಿಯಲ್ಲಿದ್ದ ಅಶ್ವಿನ್ ಎಸೆತವನ್ನು ಸಿಕ್ಸರ್‌ಗೆ ರವಾನಿಸಿ ತಂಡದ ಗೆಲುವನ್ನು ಸಾರಿದರು.
ಇದು ಕೆಕೆಆರ್ ಕಾಣುತ್ತಿರುವ 3ನೇ ಐಪಿಎಲ್ ಫೈನಲ್. ಹಿಂದಿನೆರಡೂ ಸಲ ಅದು ಚಾಂಪಿಯನ್ ಆಗಿ ಮೂಡಿಬಂದಿತ್ತು (2012 ಮತ್ತು 2014). ಮೊದಲ ಸಲ ಚೆನ್ನೈಯನ್ನು, ಬಳಿಕ ಪಂಜಾಬ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿತ್ತು. ಎರಡೂ ಸಲ ಗೌತಮ್ ಗಂಭೀರ್ ಕೆಕೆಆರ್ ಸಾರಥಿಯಾಗಿದ್ದರು.
ಅಯ್ಯರ್ ಆಕ್ರಮಣಕಾರಿ ಆಟ
ಕೆಕೆಆರ್ ಚೇಸಿಂಗ್ ವೇಳೆ ವೆಂಕಟೇಶ್ ಅಯ್ಯರ್ ಆಕ್ರಮಣಕಾರಿ ಆಟದ ಮೂಲಕ ಡೆಲ್ಲಿ ಬೌಲರ್‌ಗಳ ಮೇಲೆರಗಿದರು. ಶುಭಮನ್ ಗಿಲ್ ಜತೆ ಮೊದಲ ವಿಕೆಟಿಗೆ 12.2 ಓವರ್‌ಗಳಿಂದ 96 ರನ್ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಅಯ್ಯರ್ ಕೊಡುಗೆ 41 ಎಸೆತಗಳಿಂದ 55 ರನ್. 4 ಬೌಂಡರಿ, 3 ಸಿಕ್ಸರ್ ಬಾರಿಸಿ ಡೆಲ್ಲಿ ಬೌಲಿಂಗ್ ದಾಳಿಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದರು. ಗಿಲ್ 46 ಎಸೆತಗಳಿಂದ 46 ರನ್ ಹೊಡೆದರು.
ಡೆಲ್ಲಿ ಬ್ಯಾಟಿಂಗ್ ಪರದಾಟ
ಮಾವಿ, ಫರ್ಗ್ಯುಸನ್, ಚಕ್ರವರ್ತಿ ಡೆಲ್ಲಿಗೆ ಕಗ್ಗಂಟಾಗಿ ಪರಿಣಮಿಸಿದರು. ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರಿಂದ ಮಾತ್ರ 30ರ ಗಡಿ ತಲುಪಲು ಸಾಧ್ಯವಾಯಿತು.
ಕೆಕೆಆರ್ ವಿರುದ್ಧ ಆಡಿದ ಹಿಂದಿನ 5 ಪಂದ್ಯಗಳಲ್ಲಿ 4 ಅರ್ಧ ಶತಕ ಬಾರಿಸಿ ಮೆರೆದಿದ್ದ ಪೃಥ್ವಿ ಶಾ ಮೇಲೆ ಡೆಲ್ಲಿ ವಿಶೇಷ ನಂಬಿಕೆ ಇರಿಸಿತ್ತು. ಅವರು ಆರಂಭದಲ್ಲೇ ಫರ್ಗ್ಯುಸನ್ ಮತ್ತು ಶಕಿಬ್‌ಗ ಬೌಂಡರಿ, ಸಿಕ್ಸರ್ ರುಚಿ ತೋರಿಸತೊಡಗಿದರು. ಆದರೆ ಇನ್ನಿಂಗ್ಸ್ ಬೆಳೆಸಲು ಸಾಧ್ಯವಾಗಲಿಲ್ಲ. 5ನೇ ಓವರ್ ಎಸೆಯಲು ಬಂದ ಚಕ್ರವರ್ತಿ ತಮ್ಮ ಮೊದಲ ಎಸೆತದಲ್ಲೇ ಶಾ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಶಾ ಗಳಿಕೆ 12 ಎಸೆತಗಳಿಂದ 18 ರನ್ (2 ಬೌಂಡರಿ, 1 ಸಿಕ್ಸರ್).
ಇದನ್ನೂ ಓದಿ:ಬೆಂಗಳೂರಿನಲ್ಲಿ ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ
ಶಿಖರ್ ಧವನ್ ಮಿಸ್ಟರಿ ಸ್ಪಿನ್ನರ್ ನಾರಾಯಣ್ ಅವರನ್ನು ಟಾರ್ಗೆಟ್ ಮಾಡಿದರು. ಅವರ ಮೊದಲ ಓವರ್‌ನಲ್ಲೇ ಬೆನ್ನು ಬೆನ್ನಿಗೆ ಸಿಕ್ಸರ್ ಬಾರಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ ಒಂದು ವಿಕೆಟಿಗೆ 38 ರನ್ ಗಳಿಸಿತು. ಇಲ್ಲಿಂದ ಮುಂದೆ ಧವನ್‌ಗೆ ಕಡಿವಾಣ ಹಾಕಲು ಕೆಕೆಆರ್ ಯಶಸ್ವಿಯಾಯಿತು. 10 ಓವರ್ ಮುಕ್ತಾಯದ ವೇಳೆ ಡೆಲ್ಲಿ ಒಂದು ವಿಕೆಟಿಗೆ ಕೇವಲ 65 ರನ್ ಮಾಡಿತ್ತು. ಸ್ಟೋಯಿನಿಸ್ ಮುನ್ನುಗ್ಗಿ ಬಾರಿಸಲು ಸಂಪೂರ್ಣ ವಿಫಲರಾದರು. 18 ರನ್ನಿಗೆ 23 ಎಸೆತ ತೆಗೆದುಕೊಂಡರು. ಇದರಲ್ಲಿದ್ದದ್ದು ಒಂದೇ ಬೌಂಡರಿ.
ಧವನ್-ಶ್ರೇಯಸ್ ಜತೆಗೂಡಿದ ಬಳಿಕವೂ ಡೆಲ್ಲಿ ರನ್‌ಗತಿಯಲ್ಲಿ ಪ್ರಗತಿ ಕಂಡುಬರಲಿಲ್ಲ. ಕೆಕೆಆರ್ ಬೌಲರ್ ಶಾರ್ಜಾ ಪಿಚ್‌ನ ಸಂಪೂರ್ಣ ಲಾಭವೆತ್ತಿದರು. ಸೆಕೆಂಡ್ ಸ್ಪೆಲ್‌ನ ಮೊದಲ ಎಸೆತದಲ್ಲೇ ಚಕ್ರವರ್ತಿ ಧವನ್‌ಗೆ ಪೆವಿಲಿಯನ್ ಹಾದಿ ತೋರಿದರು. 39 ಎಸೆತ ನಿಭಾಯಿಸಿದ ಧವನ್‌ಗೆ 36 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾರಾಯಣ್ ಓವರ್‌ನಲ್ಲಿ ಬಾರಿಸಿದ ಆ 2 ಸಿಕ್ಸರ್ ಹೊರತುಪಡಿಸಿದರೆ ಒಂದು ಬೌಂಡರಿಯನ್ನಷ್ಟೇ ಇದು ಒಳಗೊಂಡಿತ್ತು.
ನಾಯಕ ರಿಷಭ್ ಪಂತ್ 2ನೇ ಎಸೆತದಲ್ಲೇ ಚೆಂಡನ್ನು ಸೀಮಾರೇಖೆ ದಾಟಿಸಿ ಬೌಂಡರಿ ಬರಗಾಲ ನೀಗಿಸಿದರು. ಸರಿಯಾಗಿ 5 ಓವರ್ ಬಳಿಕ ಡೆಲ್ಲಿ ಮೊದಲ ಬೌಂಡರಿ ಬಾರಿಸಿತ್ತು.
ಸ್ಕೋರ್ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಎಲ್‌ಬಿಡಬ್ಲ್ಯು ಬಿ ಚಕ್ರವರ್ತಿ 18
ಶಿಖರ್ ಧವನ್ ಸಿ ಶಕಿಬ್ ಬಿ ಚಕ್ರವರ್ತಿ 36
ಮಾರ್ಕಸ್ ಸ್ಟೋಯಿನಿಸ್ ಬಿ ಮಾವಿ 18
ಶ್ರೇಯಸ್ ಅಯ್ಯರ್ ಔಟಾಗದೆ 30
ರಿಷಭ್ ಪಂತ್ ಸಿ ತ್ರಿಪಾಠಿ ಬಿ ಪರ್ಗ್ಯುಸನ್ 6
ಹೆಟ್‌ಮೈರ್ ರನೌಟ್ 17
ಅಕ್ಷರ್ ಪಟೇಲ್ ಔಟಾಗದೆ 4
ಇತರ 6
ಒಟ್ಟು (5 ವಿಕೆಟಿಗೆ) 135
ವಿಕೆಟ್ ಪತನ:1-32, 2-71, 3-83, 4-90, 5-117.
ಬೌಲಿಂಗ್;ಶಕಿಬ್ ಅಲ್ ಹಸನ್ 4-0-28-0
ಲಾಕಿ ಫರ್ಗ್ಯುಸನ್ 4-0-26-1
ಸುನೀಲ್ ನಾರಾಯಣ್ 4-0-27-0
ವರುಣ್ ಚಕ್ರವರ್ತಿ 4-0-26-2
ಶಿವಂ ಮಾವಿ 4-0-27-1
ಕೋಲ್ಕತಾ ನೈಟ್‌ರೈಡರ್
ಶುಭಮನ್ ಸಿ ಪಂತ್ ಬಿ ಆವೇಶ್ 46
ವಿ. ಅಯ್ಯರ್ ಸಿ ಸ್ಮಿತ್ ಬಿ ರಬಾಡ 55
ರಾಣಾ ಸಿ ಹೆಟ್‌ಮೇರ್ ಬಿ ನೋರ್ಜೆ 13
ರಾಹುಲ್ ತ್ರಿಪಾಠಿ ಔಟಾಗದೆ 12
ದಿನೇಶ್ ಕಾರ್ತಿಕ್ ಬಿ ರಬಾಡ 0
ಇಯಾನ್ ಮಾರ್ಗನ್ ಬಿ ನೋರ್ಜೆ 0
ಶಕಿಬ್ ಎಲ್‌ಬಿಡಬ್ಲ್ಯು ಬಿ ಅಶ್ವಿನ್ 0
ನಾರಾಯಣ್ ಸಿ ಅಕ್ಷರ್ ಬಿ ಅಶ್ವಿನ್ 0
ಲಾಕಿ ಪರ್ಗ್ಯುಸನ್ ಔಟಾಗದೆ 0
ಇತರ 10
ಒಟ್ಟು (19.5 ಓವರ್‌ಗಳಲ್ಲಿ 7 ವಿಕೆಟಿಗೆ) 136
ವಿಕೆಟ್ ಪತನ: 1-96, 2-123, 3-125, 4-126, 5-129, 6-130, 7-130
ಬೌಲಿಂಗ್;ಅನ್ರಿಚ್ ನೋರ್ಜೆ 4-0-31-2
ಆರ್. ಅಶ್ವಿನ್ 3.5-0-27-2
ಆವೇಶ್ ಖಾನ್ 4-0-22-1
ಅಕ್ಷರ್ ಪಟೇಲ್ 4-0-32-0
ಕಾಗಿಸೊ ರಬಾಡ 4-0-23-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.