ಐತಿಹಾಸಿಕ ಪಿಂಕ್‌ ಟೆಸ್ಟ್‌ ಗೆ ಕೋಲ್ಕತಾ ಸಜ್ಜು

ಅಮಿತ್‌ ಶಾ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ಮಮತಾ ಬ್ಯಾನರ್ಜಿ ಉಪಸ್ಥಿತಿ

Team Udayavani, Nov 21, 2019, 5:22 AM IST

PTI11_19_2019_000220B

ಕೋಲ್ಕತಾ: ನ. 22ರಿಂದ 26ರ ವರೆಗೆ ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಐತಿಹಾಸಿಕ ಟೆಸ್ಟ್‌ ಪಂದ್ಯವನ್ನು ನೋಡಲು ಕೇಂದ್ರದ ಗೃಹಮಂತ್ರಿ ಅಮಿತ್‌ ಶಾ, ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಭಾಗವಹಿಸುತ್ತಿಲ್ಲ. ಒಂದು ಟೆಸ್ಟ್‌ ಪಂದ್ಯಕ್ಕಾಗಿ ಇಷ್ಟೆಲ್ಲ ಪ್ರಮುಖರು ಬರುತ್ತಿರುವುದು ಯಾಕೆ ಎನ್ನುವ ಪ್ರಶ್ನೆಯೇ? ಇಲ್ಲಿದೆ ಉತ್ತರ. ಇದು ಸಾಮಾನ್ಯ ಪಂದ್ಯವಲ್ಲ. ಭಾರತದಲ್ಲಿ ನಡೆಯಲಿರುವ ಚೊಚ್ಚಲ ಹಗಲುರಾತ್ರಿಯ ಟೆಸ್ಟ್‌ ಪಂದ್ಯ. ಇಲ್ಲಿ ಭಾರತ ಮತ್ತು ಬಾಂಗ್ಲಾ ಸೆಣಸಾಡಲಿವೆ.

2015ರಲ್ಲಿ ಮೊದಲ ಹಗಲುರಾತ್ರಿ ಟೆಸ್ಟ್‌
ಏಕದಿನ, ಟಿ20 ಪಂದ್ಯಗಳೆಲ್ಲ ಇತ್ತೀಚೆಗೆ ನಡೆ ಯುತ್ತಿರುವುದು ಹಗಲುರಾತ್ರಿ ಮಾದರಿಯಲ್ಲೇ. ಆದರೆ ಟೆಸ್ಟ್‌ ಪಂದ್ಯಗಳು ಹಿಂದಿನಂತೆಯೇ ಬೆಳಗ್ಗೆ ಶುರುವಾಗಿ ಸಂಜೆ ಮುಗಿಯುತ್ತಿದ್ದವು. ಇದರ ಬದಲು ಹಗಲುರಾತ್ರಿ ಮಾದರಿಗೆ ಟೆಸ್ಟನ್ನೂ ಬದಲಿಸಿದರೆ, ಜನರನ್ನು ಆಕರ್ಷಿಸಲು ಸಾಧ್ಯ ಎಂದು ಆಸ್ಟ್ರೇಲಿಯ ಮಂಡಳಿ ಚಿಂತಿಸಿ, ಅದನ್ನು ಜಾರಿ ಮಾಡಿತು. 2015, ನ.27ರಂದು ಆಸ್ಟ್ರೇಲಿಯದ ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ನಡುವೆ ಮೊದಲ ಹಗಲುರಾತ್ರಿ ಟೆಸ್ಟ್‌ ಪಂದ್ಯ ನಡೆಯಿತು. ಅದಾದ ಮೇಲೆ ಆಸ್ಟ್ರೇಲಿಯ ವರ್ಷಕ್ಕೊಂದು ಹಗಲುರಾತ್ರಿ ಪಂದ್ಯವನ್ನು ಕಡ್ಡಾಯವಾಗಿ ಆಡಿಸಲು ತೀರ್ಮಾನಿಸಿದೆ. ಆದರೆ ಇದುವರೆಗೆ ನಡೆದಿರುವ ಪಂದ್ಯಗಳು ಬೆರಳೆಣಿಕೆ ಮಾತ್ರ. ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಪಂದ್ಯವನ್ನೂ ನೋಡಲು ಜನರು ನುಗ್ಗಿ ಬರುವುದರಿಂದ, ಹಗಲು ಪಂದ್ಯಕ್ಕೂ ಹಗಲುರಾತ್ರಿ ಪಂದ್ಯಕ್ಕೂ ಏನು ವ್ಯತ್ಯಾಸ ಎಂದು ಗುರುತಿಸಲು ಕಷ್ಟ. ಅದನ್ನು ಭಾರತದಂತಹ ರಾಷ್ಟ್ರಗಳಲ್ಲಿ ಆಡಿಸಿದರೆ ಮಾತ್ರ ಆ ವ್ಯತ್ಯಾಸ ಗೊತ್ತಾಗುತ್ತದೆ.

ಭಾರತದಲ್ಲಿ ಪರಿಣಾಮವೇನಾಗಬಹುದು?
ಭಾರತದಲ್ಲಿ ಟೆಸ್ಟ್‌ ಪಂದ್ಯಗಳಿಗೆ ಜನರು ಬರುವುದೇ ಅಪರೂಪ. ಬೆಂಗಳೂರು, ಮುಂಬಯಿ, ಕೋಲ್ಕತಾ, ದಿಲ್ಲಿ, ಚೆನ್ನೈನಂತಹ ಸ್ಥಳಗಳಲ್ಲಿ ಪ್ರೇಕ್ಷಕರೇ ಇರುವುದಿಲ್ಲ. ಆದ್ದರಿಂದ ಉಚಿತ ಟಿಕೆಟ್‌ ನೀಡುವುದು, ಕಡಿಮೆ ಬೆಲೆಯಲ್ಲಿ ಟಿಕೆಟ್‌ ಮುದ್ರಿಸುವುದು, ಶಾಲಾ ಮಕ್ಕಳಿಗೆ ಪ್ರವೇಶ ನೀಡುವುದು, ಇಂತಹ ಪ್ರಯೋಗಗಳೆಲ್ಲ ನಡೆದಿವೆ. ಅದಕ್ಕಾಗಿಯೇ ಎರಡನೇ ಹಂತದ ನಗರಗಳ ಮೇಲೆ ಕಣ್ಣಿಟ್ಟು ಪಂದ್ಯಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಹಾಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಳೆದ ಒಂದೆರಡು ವರ್ಷಗಳಿಂದ ಟೆಸ್ಟ್‌ ನಡೆಯುತ್ತಿದೆ. ಇಲ್ಲಿ ಒಂದು ಹಂತಕ್ಕೆ ಜನರು ಸೇರುತ್ತಿದ್ದಾರೆ. ಕಾಲಕ್ರಮೇಣ ಈ ಕೇಂದ್ರಗಳಲ್ಲೂ ಜನರು ಬರುವುದು ನಿಂತುಹೋಗಬಹುದು. ಅದಕ್ಕೆ ಟೆಸ್ಟ್‌ ಕ್ರಿಕೆಟನ್ನು ಆಕರ್ಷಕ ಮಾಡಲು ಹಗಲುರಾತ್ರಿ ಟೆಸ್ಟ್‌ ಪಂದ್ಯ ನಿಗದಿಯಾಗಿದೆ. ಮೊದಲ ಪಂದ್ಯವಾಗಿರುವುದರಿಂದ ಜನರ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಟಿಕೆಟ್‌ ಮಾರಾಟವಾಗಿವೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕು.

ಪಿಂಕ್‌ ಚೆಂಡಿನಲ್ಲಿ ಆಟ
ಇಲ್ಲಿ ಪಂದ್ಯಗಳನ್ನು ಮಾಮೂ ಲಿಯಂತೆ ಕೆಂಪು ಚೆಂಡಿನಲ್ಲಿ ಆಡಿಸು ವುದಿಲ್ಲ. ಅಥವಾ ಏಕದಿನ ಪಂದ್ಯ ಹಗಲುರಾತ್ರಿಯಲ್ಲಿ ನಡೆದಾಗ ಬಳಸಲ್ಪಡುವ ಬಿಳಿ ಚೆಂಡನ್ನು ಬಳಸುವುದಿಲ್ಲ. ಟೆಸ್ಟ್‌ ಹಗಲುರಾತ್ರಿ ಪಂದ್ಯಕ್ಕೆ ವಿಶೇಷವಾಗಿ ಪಿಂಕ್‌ ಚೆಂಡನ್ನು ಸಿದ್ಧಪಡಿಸಲಾಗಿದೆ. ರಾತ್ರಿ ವೇಳೆ ಆಟಗಾರರ ಕಣ್ಣಿಗೆ ಒಗ್ಗಿಕೊಳ್ಳಲಿ ಎಂದು ಈ ಬಣ್ಣವನ್ನು ಆಯ್ದುಕೊಳ್ಳಲಾಗಿದೆ. ಆದರೆ ಚೆಂಡಿನ ಬಣ್ಣ ಬಹಳ ಹೊತ್ತು ಉಳಿಯುವುದಿಲ್ಲ, ಬಹಳ ಬೇಗ ಚೆಂಡಿನ ತಾಕತ್ತೂ ಇಳಿದುಹೋಗುತ್ತದೆ. ಇದಕ್ಕೆ ಏನು ಪರಿಹಾರ ಎಂದು ಇನ್ನೂ ಗೊತ್ತಾಗಿಲ್ಲ.

ಸೌರವ್‌ ಗಂಗೂಲಿ ಹೋರಾಟಕ್ಕೆ ಸಿಕ್ಕ ಜಯ
ಬಿಸಿಸಿಐ ನೂತನ ಅಧ್ಯಕ್ಷರಾಗಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಆಯ್ಕೆಯಾಗಿದ್ದಾರೆ. ಅವರು ಮೊದಲಿಂದಲೂ ಹಗಲುರಾತ್ರಿ ಪಂದ್ಯಗಳ ಪರವಾಗಿದ್ದರು. ಇದೀಗ ಅಧ್ಯಕ್ಷರಾದ ಮೊದಲ ತಿಂಗಳಲ್ಲೇ ದಿಢೀರನೇ ಹಗಲುರಾತ್ರಿ ಪಂದ್ಯದ ನಿರ್ಧಾರ ಮಾಡಿದರು. ಅಷ್ಟು ಮಾತ್ರವಲ್ಲ, ಎದುರಾಳಿ ಬಾಂಗ್ಲಾ ತಂಡವನ್ನು ಒಪ್ಪಿಸಿದರು. ಅದಕ್ಕೂ ಹೆಚ್ಚಾಗಿ ದಿಗ್ಗಜರನ್ನು ಪಂದ್ಯ ನೋಡಲು ಬರುವಂತೆ ಮಾಡಲು ಯಶಸ್ವಿಯಾಗಿದ್ದಾರೆ. ಗಂಗೂಲಿಯ ಮನವಿಗೆ ಎರಡೂ ದೇಶಗಳ ಪ್ರಮುಖ ನಾಯಕರು ಸ್ಪಂದಿಸಿರುವುದನ್ನು ಇಲ್ಲಿ ಗಮನಿಸಬೇಕು.

ಟಾಪ್ ನ್ಯೂಸ್

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Christmas: ಸಿಲಿಕಾನ್‌ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

Christmas: ಸಿಲಿಕಾನ್‌ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.