IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
ನಾಲ್ವರಿಂದ ಅರ್ಧಶತಕ ; ಆಸ್ಟ್ರೇಲಿಯ ಆರು ವಿಕೆಟಿಗೆ 311; ಬುಮ್ರಾ 75ಕ್ಕೆ 3
Team Udayavani, Dec 26, 2024, 11:30 PM IST
ಮೆಲ್ಬರ್ನ್: ಅಗ್ರ ಕ್ರಮಾಂಕದ ಆಟಗಾರರ ಅಮೋಘ ಆಟದಿಂದಾಗಿ ಆತಿಥೇಯ ಆಸ್ಟ್ರೇಲಿಯ ತಂಡವು ಭಾರತ ತಂಡದೆದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ ಆರು ವಿಕೆಟಿಗೆ 311 ರನ್ನುಗಳ ಉತ್ತಮ ಮೊತ್ತ ಪೇರಿಸಿದೆ. ಜಸ್‌ಪ್ರೀತ್ ಬುಮ್ರಾ ಅವರ ಬಿಗು ದಾಳಿಯ ಹೊರ ತಾಗಿಯೂ ಆಸ್ಟ್ರೇಲಿಯ ಬ್ಯಾಟಿಂಗ್‌ನಲ್ಲಿ ಮೇಲುಗೈ ಸಾಧಿಸಿದೆ.
ದಾಖಲೆ ಪ್ರೇಕ್ಷಕರ ಸಮ್ಮುಖ ನಡೆದ ಈ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆಗೈದ 19ರ ಹರೆಯದ ಸ್ಯಾಮ್ ಕೋನ್‌ಸ್ಟಾಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದರು. ಆಕರ್ಷಕ ಹೊಡೆತಗಳಿಂದ ರಂಜಿಸಿದ ಅವರು 65 ಎಸೆತಗಳಿಂದ 60 ರನ್ ಹೊಡೆದರು. ಕೋನ್‌ಸ್ಟಾಸ್ ಸಹಿತ ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಅರ್ಧಶತಕ ಹೊಡೆದಿರುವುದು ಈ ಪಂದ್ಯದ ವಿಶೇಷವಾಗಿತ್ತು.
ಸತತ ಎರಡು ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ್ದ ಅಪಾಯಕಾರಿ ಆಟ ಗಾರ ಟ್ರ್ಯಾವಿಸ್ ಹೆಡ್ ಅವರು ಬುಮ್ರಾ ಅವರ ನಿಖರ ಎಸೆತವನ್ನು ಅಂದಾಜಿಸಲು ಸಾಧ್ಯವಾಗದೇ ಕ್ಲೀನ್‌ಬೌಲ್ಡ್ ಆಗಿರುವುದು ಆಸ್ಟ್ರೇಲಿಯಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಮುಂದಿನ ಓವರಿನಲ್ಲಿ ಮಿಚೆಲ್ ಮಾರ್ಷ್ ವಿಕೆಟ್ ಹಾರಿಸಿದ ಬುಮ್ರಾ ತನ್ನ ನಿಖರ ದಾಳಿಯಲ್ಲಿ 75 ರನ್ನಿಗೆ 3 ವಿಕೆಟ್ ಕಿತ್ತು ಗಮನ ಸೆಳೆದರು. ಈ ಸರಣಿಯಲ್ಲಿ ಇಷ್ಟರವರೆಗೆ 24 ವಿಕೆಟ್ ಪಡೆದಿರುವ ಬುಮ್ರಾ ಅವರಿಗೆ ಇತರ ಬೌಲರ್‌ಗಳಿಂದ ಸಮರ್ಥ ಬೆಂಬಲ ಸಿಕ್ಕಿಲ್ಲ. ಸಿರಾಜ್ 15 ಓವರ್ ಎಸೆದಿದ್ದರೂ ಯಾವುದೇ ವಿಕೆಟ್ ಪಡೆ ಯಲಿಲ್ಲ. ಸ್ನಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು.
ನಾಲ್ವರಿಂದ ಅರ್ಧಶತಕ
ಇನ್ನಿಂಗ್ಸ್ ಆರಂಭಿಸಿದ ಕೋನ್‌ಸ್ಟಾಸ್ ಮತ್ತು ಉಸ್ಮಾನ್ ಖ್ವಾಜಾ ಅವರು ಎಚ್ಚರಿಕೆಯ ಆಟವಾಡಿ ಮೊದಲ ವಿಕೆಟಿಗೆ 89 ರನ್ನುಗಳ ಜತೆಯಾಟ ನಡೆಸಿದರು. ಬಿರುಸಿನ ಆಟವಾಡಿದ ಕೋನ್‌ಸ್ಟಾಸ್ ಮೊದಲಿಗರಾಗಿ ಪೆವಿಲಿಯನ್ ಸೇರಿದರು. ಆಬಳಿಕ ಖ್ವಾಜಾ ಅವರನ್ನು ಸೇರಿಕೊಂಡ ಮಾರ್ನಸ್ ಲಬುಶೇನ್ ದ್ವಿತೀಯ ವಿಕೆಟಿಗೆ 65 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. 57 ರನ್ ಗಳಿಸಿದ ಖ್ವಾಜಾ ಅವರು ಬುಮ್ರಾ ಎಸೆತದಲ್ಲಿ ಔಟಾದರು. ಆಬಳಿಕ ಲಬುಶೇನ್ ಮತ್ತು ಸ್ಮಿತ್ ಕೂಡ ಅರ್ಧಶತಕ ದಾಖಲಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.
ಲಬುಶೇನ್ ಅನುಭವಿ ಸ್ಮಿತ್ ಜತೆಗೂಡಿ ಮೂರನೇ ವಿಕೆಟಿಗೆ ಮತ್ತೆ 83 ರನ್ ಪೇರಿದರು. 72 ರನ್ ಗಳಿಸಿದ ಲಬುಶೇನ್ ಮೂರನೆಯವಾಗಿ ಔಟಾದರು. ದಿನದಾಟದ ಅಂತ್ಯಕ್ಕೆ ಸ್ಟೀವ್ ಸ್ಮಿತ್ 68 ರನ್ ಗಳಿಸಿ ಆಡುತ್ತಿದ್ದಾರೆ. ಪಂದ್ಯದ ಮೊದಲ ಎರಡು ಅವಧಿಯಲ್ಲಿ ಆತಿಥೇಯ ಆಟಗಾರರು ಮೇಲುಗೈ ಸಾಧಿಸಿದ್ದರೆ ಅಂತಿಮ ಅವಧಿಯಲ್ಲಿ ಬುಮ್ರಾ ಬಿಗು ದಾಳಿ ಸಂಘಟಿಸಿ ಆಸ್ಟ್ರೇಲಿಯದ ರನ್ ಓಟಕ್ಕೆ ಬ್ರೇಕ್ ನೀಡವಲ್ಲಿ ಯಶಸ್ವಿಯಾಗಿದ್ದಾರೆ.
ಲಬುಶೇನ್ ಮರ್ಮಾಂಗಕ್ಕೆ ಬಡಿದ ಚೆಂಡು
33ನೇ ಓವರ್‌ನಲ್ಲಿ ಲಬುಶೇನ್ ಮರ್ಮಾಂಗಕ್ಕೆ ಎರಡೆರಡು ಬಾರಿ ಚೆಂಡು ಬಡಿದ ಘಟನೆ ನಡೆಯಿತು. ವೇಗಿ ಮೊಹಮ್ಮದ್ ಸಿರಾಜ್ ಅವರ ಓವರ್ ವೇಳೆ ಸತತ 2 ಬಾರಿ ನಡುಭಾಗಕ್ಕೆ ಹೊಡೆತ ತಿಂದ ಲಬುಶೇನ್ ತಬ್ಬಿಬ್ಟಾದರು. ಸತತ ಏಟಿನಿಂದಾಗಿ ನೋವು ಸಹಿಸಲಾಗದೆ ಕ್ಷಣಕಾಲ ಕುಸಿದ ಲಬುಶೇನ್, ಬಳಿಕ ಸುಧಾರಿಸಿಕೊಂಡು ಬ್ಯಾಟಿಂಗ್ ಮುಂದುವರೆಸಿದ್ದು ಕಂಡುಬಂತು.
ಲಬುಶೇನ್‌ಗೆ ರೋಹಿತ್ ಎಚ್ಚರಿಕೆ
ದಿನದಾಟದಲ್ಲಿ ಆಗಾಗ ಪಿಚ್ ಮೇಲೆ ಓಡುತ್ತಿದ್ದ ಲಬುಶೇನ್‌ಗೆ ರೋಹಿತ್ ಶರ್ಮ ಎಚ್ಚರಿಕೆ ನೀಡಿದರು. ನಿಯಮಗಳನ್ನುಲ್ಲಂ ಸಿ ಅವರು ಓಡುತ್ತಿದ್ದದ್ದು ಅಂಪಾ ಯರ್ ಗಮನಿಸಿದ್ದರು. ಅವರು ಸುಮ್ಮನಿದ್ದದ್ದು ನೋಡಿ ತಾಳ್ಮೆ ಕಳೆದುಕೊಂಡ ರೋಹಿತ್ ನೇರವಾಗಿ ಲಬುಶೇನ್‌ಗೆ ನಿಯಮ ಅನುಸರಿಸಿ ಎಂದು ತಾಕೀತು ಮಾಡಿದರು.
ದಾಖಲೆ 87,242 ಮಂದಿ ಪ್ರೇಕ್ಷಕರು
ಮೆಲ್ಬರ್ನ್: ಪ್ರವಾಸಿ ಭಾರತ ಮತ್ತು ಆಸ್ಟ್ರೇಲಿಯ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟವನ್ನು ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಾಖಲೆ 87,242 ಮಂದಿ ಪ್ರೇಕ್ಷಕರು ವೀಕ್ಷಿಸಿದ್ದಾರೆ. ಐದು ದಿನಗಳ ಟೆಸ್ಟ್ ಪಂದ್ಯವೊಂದರ ಒಂದು ದಿನ ಇಷ್ಟು ಮಂದಿ ಪ್ರೇಕ್ಷಕರು ಹಾಜರಾಗಿರುವುದು ಗರಿಷ್ಠ ಎನ್ನಲಾಗಿದೆ.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್
ಸ್ಯಾಮ್ ಕೋನ್‌ಸ್ಟಾಸ್ ಎಲ್‌ಬಿಡಬ್ಲ್ಯು ಬಿ ಜಡೇಜ 60
ಉಸ್ಮಾನ್ ಖ್ವಾಜಾ ಸಿ ರಾಹುಲ್ ಬಿ ಬುಮ್ರಾ 57
ಮಾರ್ನಸ್ ಲಬುಶೇನ್ ಸಿ ಕೊಹ್ಲಿ ಬಿ ಸುಂದರ್ 72
ಸ್ಟೀವನ್ ಸ್ಮಿತ್ ಬ್ಯಾಟಿಂಗ್ 68
ಟ್ರ್ಯಾವಿಸ್ ಹೆಡ್ ಬಿ ಬುಮ್ರಾ 0
ಮಿಚೆಲ್ ಮಾರ್ಷ್ ಸಿ ಪಂತ್ ಬಿ ಬುಮ್ರಾ 4
ಅಲೆಕ್ಸ್ ಕ್ಯಾರಿ ಸಿ ಪಂತ್ ಬಿ ಆಕಾಶ್‌ದೀಪ್ 31
ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ 8
ಇತರ: 11
ಒಟ್ಟು (ಆರು ವಿಕೆಟಿಗೆ) 311
ವಿಕೆಟ್ ಪತನ: 1-89, 2-154, 3-237, 4-240, 5-246, 6-299
ಬೌಲಿಂಗ್: ಜಸ್‌ಪ್ರೀತ್ ಬುಮ್ರಾ 21-7-75-3
ಮೊಹಮ್ಮದ್ ಸಿರಾಜ್ 15-2-69-0
ಆಕಾಶ್‌ದೀಪ್ 19-5-59-1
ರವೀಂದ್ರ ಜಡೇಜ 14-2-54-1
ನಿತೀಶ್ ಕುಮಾರ್ ರೆಡ್ಡಿ 5-0-10-0
ವಾಷಿಂಗ್ಟನ್ ಸುಂದರ್ 12-2-37-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.