ಕೊರಿಯಾ ಓಪನ್: ಕ್ವಾರ್ಟರ್ ಫೈನಲ್‌ಗೆ ಸಿಂಧು
Team Udayavani, Apr 8, 2022, 6:45 AM IST
ಹೊಸದಿಲ್ಲಿ: ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ “ಕೊರಿಯಾ ಓಪನ್ ಸೂಪರ್ 500′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಲಕ್ಷ್ಯ ಸೇನ್ ದ್ವಿತೀಯ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.
ವಿಶ್ವದ 7ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ಪಿ.ವಿ. ಸಿಂಧು ಜಪಾನ್‌ನ 26ನೇ ರ್‍ಯಾಂಕಿಂಗ್‌ನ ಅಯಾ ಒಹೊರಿ ವಿರುದ್ಧ 21-15, 21-10 ಅಂತರದ ಸುಲಭ ಜಯ ಸಾಧಿಸಿದರು. ಇದರೊಂದಿಗೆ ಒಹೊರಿ ವಿರುದ್ಧ ಆಡಿದ ಎಲ್ಲ 12 ಪಂದ್ಯಗಳಲ್ಲೂ ಸಿಂಧು ಗೆದ್ದು ಬಂದಂತಾಯಿತು. ಮುಂದಿನ ಎದುರಾಳಿ ಥಾಯ್ಲೆಂಡ್‌ನ ಬುಸಾನನ್ ಒನ್ಗಬಮ್ರುಂಗಫಾನ್. ಈಕೆಯ ವಿರುದ್ಧ ಸಿಂಧು 16-1 ಅಂತರದ ಅಮೋಘ ಗೆಲುವಿನ ದಾಖಲೆ ಹೊಂದಿದ್ದಾರೆ.
ಕೆ. ಶ್ರೀಕಾಂತ್ 21-18, 21-6 ಅಂತರದಿಂದ ಇಸ್ರೇಲ್‌ನ ಮಿಶಾ ಜಿರ್ಲ್ಮನ್ ಅವರನ್ನು ಮಣಿಸಿದರು. ಕೊರಿಯಾದ ಸನ್ ವಾನ್ ಹೊ ಭಾರತೀಯನ ಮುಂದಿನ ಎದುರಾಳಿ. ಆದರೆ ಲಕ್ಷ್ಯ ಸೇನ್ 20-22, 9-21 ಅಂತರದಿಂದ ಶೆಸರ್ ಹಿರೆನ್ ರುಸ್ತಾವಿಟೊ ವಿರುದ್ಧ ಪರಾಭವಗೊಂಡರು. ವನಿತಾ ಸಿಂಗಲ್ಸ್ ನಲ್ಲಿ ಮಾಳವಿಕಾ ಬನ್ಸೋಡ್ ಕೂಡ ಸೋಲು ಕಂಡಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಸಿಂಗಾಪುರದ ಹೀ ಯಂಗ್ ಕೈ ಟೆರ್ರಿ-ಲೋಹ್ ಕೀನ್ ಜೀನ್ ಅವರನ್ನು 21-15, 21-19 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.