ಕೊರಿಯ ಓಪನ್: ಸಿಂಧು, ಸಮೀರ್ ಕ್ವಾರ್ಟರ್ಫೈನಲಿಗೆ
Team Udayavani, Sep 15, 2017, 8:10 AM IST
ಸೋಲ್: ಭಾರತದ ಪಿವಿ ಸಿಂಧು ಮತ್ತು ಸಮೀರ್ ವರ್ಮ ಅವರು ನೇರ ಗೇಮ್ಗಳ ಗೆಲುವಿನೊಂದಿಗೆ ಕೊರಿಯ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್ಫೈನಲ್ ತಲುಪಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಮತ್ತು ಎಸ್. ಪ್ರಣೀತ್ ದ್ವಿತೀಯ ಸುತ್ತಿನ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ.
ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು ಥಾಲಂಡಿನ ನಿಚಾವೋನ್ ಜಿಂದಾಪಾಲ್ ಅವರನ್ನು 22-20, 21-17 ಗೇಮ್ಗಳಿಂದ ಉರುಳಿಸಿ ಕ್ವಾರ್ಟರ್ಫೈನಲಿಗೇರಿದರು. ಅವರಲ್ಲಿ ಜಪಾನಿನ ಮಿನಾಟ್ಸು ಮಿಟಾನಿ ಅವರ ಸವಾಲನ್ನು ಎದುರಿಸಲಿದ್ದಾರೆ. 2014ರ ವಿಶ್ವ ಚಾಂಪಿಯನ್ಶಿಪ್ನ ಕಂಚು ವಿಜೇತೆ ಮಿಟಾನಿ 2012ರ ಫ್ರೆಂಚ್ ಓಪನ್ ಕೂಟದಲ್ಲಿ ಸೈನಾ ನೆಹ್ವಾಲ್ ಅವರನ್ನು ಕೆಡಹಿ ಪ್ರಶಸ್ತಿ ಜಯಿಸಿದ್ದರು.
ಹಾಂಕಾಂಗ್ ಸೂಪರ್ ಸೀರೀಸ್ ಫೈನಲಿಸ್ಟ್ ಮತ್ತು ಸಯ್ಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ವಿಜೇತ ಸಮೀರ್ ವರ್ಮ ಅವರು ಹಾಂಕಾಂಗ್ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು 41 ನಿಮಿಷಗಳ ಹೋರಾಟದಲ್ಲಿ 21-19, 21-13 ಗೇಮ್ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಸ್ಥಳೀಯ ಫೇವರಿಟ್ ಸನ್ ವಾನ್ ಹೊ ಅವರ ಸವಾಲಿಗೆ ಉತ್ತರಿಸಲಿದ್ದಾರೆ. ಸನ್ ವಾನ್ ದ್ವಿತೀಯ ಸುತ್ತಿನಲ್ಲಿ ಕಶ್ಯಪ್ ಅವರನ್ನು ಕೆಡಹಲು ಕಠಿನ ಪ್ರಯತ್ನ ನಡೆಸಿದರು. ಒಂದು ತಾಸು ಮತ್ತು 16 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ವಾನ್ ಅವರು 21-16, 17-21, 21-16 ಗೇಮ್ಗಳಿಂದ ಕಶ್ಯಪ್ಗೆ ಸೋಲುಣಿಸಿದರು.
ಚಿರಾಗ್-ಸಾತ್ವಿಕ್ ಮುನ್ನಡೆ
ಭಾರತೀಯ ಯುವ ಡಬಲ್ಸ್ ತಾರೆಯರಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯ್ರಾಜ್ ಅವರು ಚೈನೀಸ್ ತೈಪೆಯ ಲೀ ಝೀ ಹುಯಿ ಮತ್ತು ಯಿ ಲಾಂಗ್ ಅವರನ್ನು 23-21, 16-21, 21-8 ಗೇಮ್ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೇರಿದರು. ಅವರಿಬ್ಬರು ಸೂಪರ್ ಸೀರೀಸ್ ಕೂಟದಲ್ಲಿ ಕ್ವಾರ್ಟರ್ಫೈನಲಿಗೇರಿರುವುದು ಇದೇ ಮೊದಲ ಸಲವಾಗಿದೆ. ಅರ್ಹತಾ ಸುತ್ತಿನಲ್ಲಿ ಮೊದಲ ಬಾರಿ ಆಡಿದ್ದ ಚಿರಾಗ್ ಮತ್ತು ಸಾತ್ವಿಕ್ ಅವರು ಮೊದಲ ಸುತ್ತಿನಲ್ಲಿ ಲೀ ಶೆಂಗ್ ಮು ಮತ್ತು ಲಿನ್ ಚಿಯಾ ಯು ಅವರನ್ನು 21-9, 22-24, 21-12 ಗೇಮ್ಗಳಿಂದ ಕೆಡಹಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.