ಬೆಳಗಾವಿ ಪ್ಯಾಂಥರ್ ಜಯಭೇರಿ
Team Udayavani, Sep 13, 2017, 6:35 AM IST
ಮೈಸೂರು: ಸ್ಟಾಲಿನ್ ಹೂವರ್ ದಾಖಲಿಸಿದ ಅರ್ಧಶತಕ, ಕೆ.ಗೌತಮ್ ಬಿಗು ಬೌಲಿಂಗ್ ದಾಳಿಯ ನೆರವಿನಿಂದ ಬೆಳಗಾವಿ ಪ್ಯಾಂಥರ್ ಕೆಪಿಎಲ್‌ನಲ್ಲಿ ಬಳ್ಳಾರಿ ಟಸ್ಕರ್ ವಿರುದ್ಧ 25 ರನ್ ಜಯ ಸಾಧಿಸಿದೆ.
ಇಲ್ಲಿನ ಮಾನಸಗಂಗೋತ್ರಿಯ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 6ನೇ ಆವೃತ್ತಿಯ ಮೈಸೂರು ಚರಣದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ 19.4 ಓವರ್‌ಗೆ 154 ರನ್ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಬಳ್ಳಾರಿ ಟಸ್ಕರ್ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 129 ರನ್ ಬಾರಿಸಿ ಸೋಲುಂಡಿತು.
ಬಳ್ಳಾರಿ ಪರ ಕೆ.ಬಿ.ಪವನ್(64) ಅರ್ಧಶತಕ ದಾಖಲಿಸಿದರು. ಆದರೂ ಅವರ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ಉಳಿದಂತೆ ಅಭಿನವ್ ಮನೋಹರ್ (21) ಅಲ್ಪ ಕಾಣಿಕೆ ನೀಡಿದರು. ಉಳಿದಂತೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಎದುರಿಸಿದ್ದು, ಬಳ್ಳಾರಿ ಸೋಲಿಗೆ ಪ್ರಮುಖ ಕಾರಣವಾಯಿತು. ಬೆಳಗಾವಿ ಪರ ಕೆ.ಗೌತಮ್ 23ಕ್ಕೆ 4 ವಿಕೆಟ್ ಪಡೆದು ಮಿಂಚಿದರು.
ಬೆಳಗಾವಿಗೆ ಹೂವರ್ ಆಸರೆ:
ಆರಂಭಿಕರಾಗಿ ಕಣಕ್ಕೆ ಇಳಿದ ಬಿ.ಆರ್.ಶರತ್ ಮತ್ತು ಸ್ಟಾಲಿನ್ ಹೂವರ್ ಮೊದಲ ವಿಕೆಟ್‌ಗೆ 6.6 ಓವರ್‌ಗೆ 52 ರನ್ ಜತೆಯಾಟ ನೀಡಿದರು. ಈ ಸಂದರ್ಭದಲ್ಲಿ ಶರತ್ (17) ಭವೇಶ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ಕೆ.ಗೌತಮ್(5) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.
ಹೂವರ್, ಪಾಂಡೆ ಸ್ಫೋಟ:
3ನೇ ವಿಕೆಟ್‌ಗೆ ಜತೆಯಾದ ಹೂವರ್ ಮತ್ತು ಮನೀಶ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದರಿಂದಾಗಿ ಬೆಳಗಾವಿ ತಂಡ ಮೊತ್ತ ಏರುತ್ತಾ ಸಾಗಿತ್ತು. ಈ ಜೋಡಿ 12.3 ಓವರ್‌ಗೆ ತಂಡದ ಮೊತ್ತವನ್ನು 110 ರನ್‌ಗೆ ತೆಗುದೊಂಡು ಹೋದರು. ಈ ಹಂತದಲ್ಲಿ ಬೆಳಗಾವಿ ದೊಡ್ಡ ಮೊತ್ತ ದಾಖಲಿಸುವ ಸೂಚನೆ ನೀಡಿತ್ತು. ಆದರೆ ಆಗಿದ್ದೆ ಬೇರೆ. ಪಾಂಡೆ ಮತ್ತು ಹೂವರ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಇದು ಬೆಳಗಾವಿಗೆ ಆಘಾತವಾಯಿತು. ಪಾಂಡೆ 12 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿದಂತೆ 24 ರನ್ ಬಾರಿಸಿದರು. ಹೂವರ್ 43 ಎಸೆತದಲ್ಲಿ 62 ರನ್ ಬಾರಿಸಿದರು. ಅವರ ಆಟದಲ್ಲಿ 4 ಬೌಂಡರಿ, 4 ಸಿಕ್ಸರ್ ಸೇರಿತ್ತು.
ಕೊನೆಯಲ್ಲಿ ಮಾರಕವಾದ ಪ್ರತೀಕ್ ಜೈನ್:
ಪಾಂಡೆ ಮತ್ತು ಹೂವರ್ ವಿಕೆಟ್ ಕಳೆದುಕೊಂಡ ಮೇಲೆ ಬಳ್ಳಾರಿ ತಂಡದ ಪ್ರತೀಕ್ ಜೈನ್ ಮಾರಕವಾದರು. ಒಬ್ಬರ ನಂತರ ಒಬ್ಬರ ವಿಕೆಟ್ ಕಬಳಿಸಿದರು. ಇದರಿಂದಾಗಿ ಬೆಳಗಾವಿ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಆಲೌಟ್‌ಗೆ ತುತ್ತಾಯಿತು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಕೆಟ್ ಕಾಯ್ದುಕೊಳ್ಳವಲ್ಲಿ ಮತ್ತು ರನ್ ಏರಿಸುವಲ್ಲಿ ವಿಫಲರಾದರು. ಬಳ್ಳಾರಿ ಪರ ಪ್ರತೀಕ್ ಜೈನ್ 29ಕ್ಕೆ 3 ವಿಕೆಟ್ ಪಡೆದರೆ, ಅಮಿತ್ ವರ್ಮ, ಭವೇಶ್ ಮತ್ತು ಅನಿಲ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ 19.4 ಓವರ್‌ಗೆ 154/10(ಸ್ಟಾಲಿನ್ ಹೂವರ್ 62, ಮನೀಶ್ ಪಾಂಡೆ 24, ಪ್ರತೀಕ್ ಜೈನ್ 29ಕ್ಕೆ 3). ಸಂಕ್ಷಿಪ್ತ ಸ್ಕೋರ್ ಬಳ್ಳಾರಿ ಟಸ್ಕರ್ 20 ಓವರ್‌ಗೆ 129/9(ಕೆ.ಬಿ.ಪವನ್ 64, ಅಭಿನವ್ ಮನೋಹರ್ 21, ಕೆ.ಗೌತಮ್ 23ಕ್ಕೆ4).
– ಸಿ.ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.