ಕೆಪಿಎಲ್: ಟೈಗರ್ ಬಲೆಗೆ ಬಿದ್ದ ಬೆಂಗಳೂರು
Team Udayavani, Sep 7, 2017, 7:55 AM IST
ಮೈಸೂರು: ನಾಯಕ ವಿನಯ್ ಕುಮಾರ್(28) ಹಾಗೂ ಪ್ರವೀಣ್ ದುಬೆ (ಅಜೇಯ 32) ಅವರ ಜವಾಬ್ದಾರಿಯುತ ಬ್ಯಾಟಿಂಗ್, ಅಭಿಷೇಕ್ ಸಕುಜಾ ಬಿಗುದಾಳಿ ನೆರವಿನಿಂದ ಹುಬ್ಬಳ್ಳಿ ಟೈಗರ್ ಕೆಪಿಎಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ ವಿರುದ್ಧ 2 ವಿಕೆಟ್‌ನಿಂದ ಜಯ ಸಾಧಿಸಿದೆ.
ಇಲ್ಲಿನ ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್ ಒಡೆಯರ್(ಗ್ಲೆàಡ್ಸ್) ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 102 ರನ್‌ಗಳಿಸಿತು. ಗುರಿ ಬೆನ್ನು ಹತ್ತಿದ ಹುಬ್ಬಳ್ಳಿ ಟೈಗರ್ 19.1 ಓವರ್‌ಗಳಲ್ಲಿ 8 ವಿಕೆಟ್‌ಗೆ 103 ರನ್ ಬಾರಿಸಿ ಗೆಲುವಿನ ನಗೆಬೀರಿತು.
ವಿನಯ್-ದುಬೆ ತಾಳ್ಮೆಯ ಆಟ: ಬೆಂಗಳೂರು ತಂಡ ನೀಡಿದ 103 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನುಹತ್ತಿದ ಹುಬ್ಬಳ್ಳಿ ಟೈಗರ್ ಆರಂಭದಲ್ಲಿಯೇ ವೈಫಲ್ಯ ಎದುರಿಸಿತು. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರತೊಡಗಿದರು. ಇದರ ಪರಿಣಾಮ ಹುಬ್ಬಳ್ಳಿ ಟೈಗರ್ 34 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ 6ನೇ ವಿಕೆಟ್‌ಗೆ ಜತೆಯಾದ ನಾಯಕ ವಿನಯ್ ಕುಮಾರ್ ಹಾಗೂ ಪ್ರವೀಣ್ ದುಬೆ ತಂಡದ ಮೊತ್ತವನ್ನು 14.3 ಓವರ್‌ಗೆ 79ರನ್‌ಗೆ ತೆಗೆದುಕೊಂಡು ಹೋದರು. ಈ ಹಂತದಲ್ಲಿ ವಿನಯ್ ವಿಕೆಟ್ ಕಳೆದುಕೊಂಡರು. ಆದರೆ ಈ ಜೋಡಿಯ ದೊಡ್ಡ ಮೊತ್ತದ ಜತೆ ಆಟದಿಂದ ತಂಡ ಗೆಲುವಿನ ದಡ ಸೇರಿತು. ಬೆಂಗಳೂರು ಪರ ಅಭಿಷೇಕ್ ಭಟ್ 5 ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಬ್ಲಾಸ್ಟರ್ 20 ಓವರ್‌ಗೆ 102/8( ಮಂಜೇಶ್ ರೆಡ್ಡಿ 30, ಪವನ್ ದೇಶಪಾಂಡೆ 28, ಅಭಿಷೇಕ್ ಸಕುಜ 20ಕ್ಕೆ 3), ಹುಬ್ಬಳ್ಳಿ ಟೈಗರ್ 19.1 ಓವರ್‌ಗೆ 103/8( ಪ್ರವೀಣ್ ದುಬೆ 32, ವಿನಯ್ ಕುಮಾರ್ 28, ಅಭಿಷೇಕ್ 20ಕ್ಕೆ 5).
– ಸಿ.ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.