ಕೆಪಿಎಲ್: ಮಳೆಯಾಟಕ್ಕೆ ಪಂದ್ಯ ಬಲಿ
Team Udayavani, Sep 6, 2017, 10:03 AM IST
ಮೈಸೂರು: ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮೈಸೂರು ಚರಣದ 2ನೇ ದಿನದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್ ಒಡೆಯರ್(ಗ್ಲೆಡ್ಸ್) ಅಂಗಳದಲ್ಲಿ ಮಂಗಳವಾರ ಸಂಜೆ ನಮ್ಮ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲವೇ ನಿಮಿಷಕ್ಕೂ ಮುನ್ನ ಮಳೆ ಜೋರಾಗಿ ಸುರಿಯಿತು. ಮಳೆಯಿಂದಾಗಿ ಮೈಸೂರು ಚರಣದ 2ನೇ ಪಂದ್ಯ ಕನಿಷ್ಠ ಟಾಸ್‌ಗೂ ಸಾಧ್ಯವಾಗಲಿಲ್ಲ. ಕೊನೆಗೆ ಪಂದ್ಯ ರದ್ದು ಎಂದು ಘೋಷಿಸಲಾಯಿತು. ಇದರಿಂದಾಗಿ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡವು.
ಅಭಿಮಾನಿಗಳಿಗೆ ಬೇರೆ ಪಂದ್ಯ ವೀಕ್ಷಿಸಲು ವ್ಯವಸ್ಥೆ: 2ನೇ ದಿನದಂದು ನಡೆಯಬೇಕಿದ್ದ ನಮ್ಮ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕಸ್Õì ನಡುವಿನ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಅಂದಾಜು 800ಕ್ಕೂ ಹೆಚ್ಚು ಪ್ರೇಕ್ಷಕರು ಮೈದಾನಕ್ಕಾಗಮಿಸಿದ್ದರು. ಆದರೆ ವರುಣನ ಅವಕೃಪೆಯಿಂದಾಗಿ ಪಂದ್ಯ ಒಂದು ಎಸೆತವನ್ನು ಕಾಣದೆ ರದ್ದಾಗಿದ್ದರಿಂದ ಟಿಕೆಟ್ ಖರೀದಿಸಿ ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರು ನಿರಾಸೆಗೆ ಒಳಗಾಗಿದ್ದರು. ಹೀಗಾಗಿ ಮಂಗಳವಾರದ ಪಂದ್ಯದ ಟಿಕೆಟ್ ಖರೀದಿಸಿದ್ದ ಕೆಲವು ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಹಿಂದಿರುಗಿಸುವ ಅಥವಾ ಮುಂದಿನ ದಿನಗಳಲ್ಲಿ(ಶುಕ್ರವಾರ, ಶನಿವಾರ ಹಾಗೂ ಬಾನುವಾರ ಹೊರತುಪಡಿಸಿ)ವಾರದ ಮಧ್ಯದಲ್ಲಿ ಒಂದು ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕೊಡೆ ಹಿಡಿದುಕೊಂಡು ಗಮನ ಸೆಳೆದ ಬ್ರೆಟ್ ಲೀ: ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಭಾರೀ ಮಳೆಯ ನಡುವೆಯೂ ಛತ್ರಿ ಹಿಡಿದುಕೊಂಡು ಮೈದಾನದಲ್ಲಿ ಗಮನ ಸೆಳೆದರು. ಪ್ರೇಕ್ಷಕರು ಇವರನ್ನು ನೋಡಿ ಜೋರಾಗಿ ಬ್ರೆಟ್ ಲೀ…ಬ್ರೆಟ್ ಲೀ ಎಂದು ಕೂಗಿ ಕರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.