ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್‌ಗೆ ಜಯ
Team Udayavani, Aug 20, 2018, 6:25 AM IST
ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಹುಬ್ಬಳ್ಳಿ ಆವೃತ್ತಿ ಮೊದಲ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡದ ವಿರುದ್ಧ ಆತಿಥೇಯ ಹುಬ್ಬಳ್ಳಿ ಟೈಗರ್ಸ್ 25 ರನ್ ಗೆಲುವು ಸಾಧಿಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹುಬ್ಬಳ್ಳಿ ಟೈಗರ್ಸ್ 20 ಓವರ್ 7 ವಿಕೆಟ್‌ಗೆ 160 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ನಮ್ಮ ಶಿವಮೊಗ್ಗ ತಂಡ 20 ಓವರ್‌ಗೆ 9 ವಿಕೆಟ್‌ಗೆ 135 ರನ್‌ಗಳಿಸಿ ಶರಣಾಯಿತು.
ಅಬ್ಬರಿಸಿದ ಹುಬ್ಬಳ್ಳಿ ಬ್ಯಾಟ್ಸ್‌ಮನ್: ಟಾಸ್ ಸೋತು ಬ್ಯಾಟಿಂಗ್ ಪಡೆದ ಹುಬ್ಬಳ್ಳಿ ಟೈಗರ್ಸ್ ಬ್ಯಾಟ್ಸ್‌ಮನ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ನಾಯಕ ವಿನಯಕುಮಾರ್ ಹಾಗೂ ಪ್ರವೀಣ ದುಬೆ ನೆಲಕಚ್ಚಿ ನಿಂತು ತಂಡದ ಮೊತ್ತ ಹೆಚ್ಚಿಸಿದರು. ವಿನಯ್ ಕುಮಾರ್ ಕೇವಲ 13 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 35 ರನ್ ಗಳಿಸಿದರೆ, ಪ್ರವೀಣ ದುಬೆ 2 ಸಿಕ್ಸರ್, 1 ಬೌಂಡರಿ ನೆರವಿನಿಂದ 32 ಎಸೆತಗಳಲ್ಲಿ 43 ರನ್ ಸಂಪಾದಿಸಿ ತಂಡಕ್ಕೆ ಕೊಡುಗೆ ನೀಡಿದರು. ಕೊನೆಯ ಓವರ್‌ನಲ್ಲಿ ದರ್ಶನ ಎಂ.ಬಿ.ಹ್ಯಾಟ್ರಿಕ್ ಸಿಕ್ಸ್ ಬಾರಿಸುವ ಮೂಲಕ ಕೇವಲ 3 ಎಸೆತಗಳಲ್ಲಿ 18 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಸುನೀಲ್ ಕುಮಾರ ಜೈನ್ 33 ಎಸೆತಗಳಲ್ಲಿ 23 ರನ್, ಅಭಿಷೇಕ್ ರೆಡ್ಡಿ 8 ಎಸೆತಗಳಲ್ಲಿ 13 ರನ್, ನಿತಿನ್ ಬಿÇÉೆ 17 ಎಸೆತಗಳಲ್ಲಿ 15 ರನ್ ಕಲೆ ಹಾಕಿದರು.
ಸಂಕ್ಷಿಪ್ತ ಸ್ಕೋರ್:
ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗೆ 160/7 (ಪ್ರವೀಣ್ ದುಬೆ 43, ವಿನಯ್ ಕುಮಾರ್ 35, ಪೃಥ್ವಿರಾಜ ಶೇಖಾವತ್ 4ಕ್ಕೆ2), ನಮ್ಮ ಶಿವಮೊಗ್ಗ 20 ಓವರ್‌ಗೆ 135/9 (ಜೋನಾಥನ್ 29, ಪೃಥ್ವಿರಾಜ್ 25, ಮಹೇಶ್ 19ಕ್ಕೆ2)
– ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.