ಇಂದು ಬೆಂಗಳೂರಿನಲ್ಲಿ ಕೆಪಿಎಲ್ ಹರಾಜು
Team Udayavani, Aug 6, 2017, 6:20 AM IST
ಬೆಂಗಳೂರು: ಆರನೇ ಆವೃತ್ತಿ ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಹರಾಜು ರವಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭ ವಾಗಲಿದೆ. ನಿರೂಪಕ ಚಾರು ಶರ್ಮ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಒಟ್ಟಾರೆ 215 ಆಟಗಾರರು, 7 ಫ್ರಾಂಚೈಸಿಗಳು ಕೆಪಿಎಲ್ ಹರಾಜಿನ ಮುಖ್ಯ ಆಕರ್ಷಣೆಯಾಗಿದ್ದಾರೆ. ಈ ಬಾರಿ ಮಂಗಳೂರು ಯುನೈಟೆಡ್, ಕಿಚ್ಚ ಸುದೀಪ್ ನೇತೃತ್ವದ ರಾಕ್‌ಸ್ಟಾರ್ ತಂಡಗಳು ಭಾಗವಹಿಸುತ್ತಿಲ್ಲ. ಹಾಗಂತ ಅಭಿಮಾನಿಗಳು ನಿರಾಶೆ ಪಡಬೇಕಾಗಿಲ್ಲ. “ಕಲ್ಯಾಣಿ ಮೋಟಾರ್’ ಮೂಲಕ ಬೆಂಗಳೂರು ತಂಡ ಹೊಸದಾಗಿ ಕೆಪಿಎಲ್ ಕುಟುಂಬವನ್ನು ಸೇರುತ್ತಿದೆ. ರಾಜ್ಯದ ಕ್ರಿಕೆಟ್ ಪ್ರೇಮಿಗಳನ್ನು ರಂಜಿ ಸಲು ಸಜ್ಜಾಗುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಯಲ್ಲಿ ಪಂದ್ಯಗಳು ಕ್ರಮವಾಗಿ ಸೆಪ್ಟಂಬರ್‌ನಲ್ಲಿ ನಡೆಯಲಿವೆ.
ಹೀಗೆ ನಡೆಯಲಿದೆ ಹರಾಜು…
ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಕ್ರಮವಾಗಿ “ಎ’ ಹಾಗೂ”ಬಿ’ ಗುಂಪುಗಳಲ್ಲಿ ಪ್ರತ್ಯೇಕಿಸಲಾಗಿದೆ. “ಎ’ ಗುಂಪಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ, ಐಪಿಎಲ್ ಕೂಟಗಳಲ್ಲಿ ಭಾಗವಹಿಸಿದ ತಾರಾ ಆಟಗಾರರು ಇರಲಿದ್ದಾರೆ. “ಬಿ’ ಗುಂಪಿನಲ್ಲಿ ಕೆಎಸ್‌ಸಿಎ ಕೂಟಗಳಲ್ಲಿ ಭಾಗವಹಿಸಿದ ಕ್ರಿಕೆಟಿಗರಿದ್ದಾರೆ.
ಒಂದು ತಂಡಕ್ಕೆ ಕನಿಷ್ಠ 15 ಹಾಗೂ ಗರಿಷ್ಠ 18 ಮಂದಿಯನ್ನು ಹೊಂದಲು ಅವಕಾಶವಿದೆ. ತಮ್ಮ ಜಿಲ್ಲೆಯ ಇಬ್ಬರು ಸ್ಥಳೀಯ ಆಟಗಾರರನ್ನು ಸೇರಿಸಿಕೊಳ್ಳಲೇಬೇಕು ಎನ್ನುವ ನಿಯಮ ಇದೆ. “ಎ’ ಗುಂಪಿನಲ್ಲಿರುವ ಆಟಗಾರರು
ಕನಿಷ್ಠ 50 ಸಾವಿರ ರೂ. ಮೂಲಬೆಲೆ ಹೊಂದಿರು ತ್ತಾರೆ.”ಬಿ’ ನಲ್ಲಿರುವ ಆಟಗಾರರು 15 ಸಾವಿರ ರೂ. ಮೂಲಬೆಲೆ ಹೊಂದಿರುತ್ತಾರೆ. ಒಂದು ತಂಡ ಗರಿಷ್ಠ 30 ಲಕ್ಷ ರೂ.ಗಳನ್ನು ಆಟಗಾರರ ಖರೀದಿಗೆ ಬಳಸಬಹುದು. “ಎ’ ಗುಂಪಿನಲ್ಲಿರುವ ಆಟಗಾರರಿಗಾಗಿ ಫ್ರಾಂಚೈಸಿಯೊಂದು ಗರಿಷ್ಠ 18 ಲಕ್ಷ ರೂ., “ಬಿ’ ಗುಂಪಿನಲ್ಲಿರುವ ಆಟಗಾರರಿಗಾಗಿ ಗರಿಷ್ಠ 12 ಲಕ್ಷ ರೂ. ವ್ಯಯಿಸಬಹುದು. ಈ ಬಾರಿ ಹರಾಜಿಗೆ ಗರಿಷ್ಠ ಮಹತ್ವ ಬಂದಿದೆ. ಐಪಿಎಲ್‌ಗೆ ವೇದಿಕೆಯಾಗಿರುವುದರಿಂದ ಪ್ರಮುಖ ಆಟಗಾರ ರಿಗಿರುವಷ್ಟೇ ಮಹತ್ವ, ಕಿರಿಯ ಆಟಗಾರರಿಗೂ ಇರಲಿದೆ.
ಹರಾಜಿನಲ್ಲಿ 7 ಫ್ರಾಂಚೈಸಿಗಳು
ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್, ಕಲ್ಯಾಣಿ ಬ್ಲಾಸ್ಟರ್ ಬೆಂಗಳೂರು, ಮೈಸೂರು ವಾರಿಯರ್, ನಮ್ಮ ಶಿವಮೊಗ್ಗ ತಂಡದ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ.
ಕೆ.ಎಲ್. ರಾಹುಲ್, ಅಭಿಷೇಕ್ ರೆಡ್ಡಿ, ಅಬ್ರಾರ್ ಖಾಜಿ, ಅಖೀಲ್ ಬಾಲಚಂದ್ರ, ಅಮಿತ್ ವರ್ಮ, ಅನಿರುದ್ಧ್ ಜೋಶಿ, ಎಸ್.ಅರವಿಂದ್, ಕೆ.ಸಿ.ಕಾರಿಯಪ್ಪ, ಡೇವಿಡ್ ಮಥಾಯಿಸ್, ಸಿ.ಎಂ.ಗೌತಮ್, ಕೆ.ಗೌತಮ್, ಕರುಣ್ ನಾಯರ್, ಕುನಾಲ್ ಕಪೂರ್, ಮನೀಷ್ ಪಾಂಡೆ, ಮಾಯಾಂಕ್ ಅಗರ್ವಾಲ್, ಮಿರ್ ಕೌನೇನ್ ಅಬ್ಟಾಸ್, ಅಭಿಮನ್ಯು ಮಿಥುನ್, ಮಿತ್ರಕಾಂತ್ ಯಾದವ್, ಮೊಹಮ್ಮದ್ ತಾಹ, ಪವನ್ ದೇಶಪಾಂಡೆ, ಕೆ.ಬಿ.ಪವನ್. ಟಿ.ಪ್ರದೀಪ್, ಪ್ರಸಿದ್ಧ್ ಎಂ.ಕೃಷ್ಣ, ಪ್ರತೀಕ್ ಜೈನ್, ಪ್ರವೀಣ್ ದುಬೆ, ರೋನಿತ್ ಮೋರೆ, ಆರ್. ಸಮರ್ಥ್, ಎಚ್.ಎಸ್.ಶರತ್, ಶಿಶಿರ್ ಭವಾನೆ. ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ, ಜೆ.ಸುಚಿತ್, ಸುನೀಲ್ ರಾಜು, ವಿನಯ್ ಕುಮಾರ್, ವೊ. ವೈಶಾಖ್ ಅವರೆಲ್ಲ “ಎ’ ಗುಂಪಿನಲ್ಲಿರುವ ತಾರಾ ಆಟಗಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.