ಕೆಪಿಎಲ್: ಬೆಂಗಳೂರು ಕಳಪೆ ಬ್ಯಾಟಿಂಗ್
Team Udayavani, Sep 12, 2017, 7:20 AM IST
ಮೈಸೂರು: ಅನುಭವಿ ಆಟಗಾರ ಪವನ್ ದೇಶಪಾಂಡೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್
6ನೇ ಕೆಪಿಎಲ್‌ನ ಮೈಸೂರು ಚರಣದಲ್ಲಿ ನಮ್ಮ ಶಿವಮೊಗ್ಗ ತಂಡಕ್ಕೆ 143 ರನ್ ಗುರಿ ನೀಡಿದೆ. ಇಲ್ಲಿನ ಮಾನಸಗಂಗೋತ್ರಿಯ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಸ್ಪರ್ಧಾತ್ಮಕ
ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು.
ಆರಂಭಿಕ ಆಘಾತ: ಆರಂಭಿಕ ಆಟಗಾರರಾದ ಆರ್. ಸಮರ್ಥ್ ಮತ್ತು ವಿಶ್ವನಾಥನ್ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಮೊತ್ತ 2 ರನ್ ಆಗುತ್ತಿದ್ದಂತೆ ಪ್ರದೀಪ್ ಎಸೆತದಲ್ಲಿ ಸಮರ್ಥ್(1) ವಿಕೆಟ್ ಕಳೆದುಕೊಂಡರು. 2ನೇ ಓವರ್‌ನಲ್ಲಿ ವಿಶ್ವನಾಥನ್ ಪೆವಿಲಿಯನ್ ಸೇರಿದರು. ಹೀಗಾಗಿ ತಂಡ ಆರಂಭದಲ್ಲಿಯೇ ಆಘಾತಕ್ಕೆ ತುತ್ತಾಯಿತು.
ನಂತರ ಬಂದ ಶಿಶಿರ್ ಭವಾನೆ (10) ಕೂಡ ಹೆಚ್ಚು ಹೊತ್ತ ನಿಲ್ಲಲಿಲ್ಲ. ಆದರೆ 4ನೇ ವಿಕೆಟ್‌ಗೆ ಜತೆಯಾದ ಮಂಜೇಶ್ ರೆಡ್ಡಿ ಮತ್ತು ಪವನ್ ದೇಶಪಾಂಡೆ ತಂಡಕ್ಕೆ ಆಸರೆಯಾದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ತಂಡದ ಮೊತ್ತವನ್ನು 81 ರನ್‌ಗೆ ತೆಗೆದುಕೊಂಡು ಹೋದರು. ಈ ಹಂತದಲ್ಲಿ ಸೋಮಣ್ಣ ಎಸೆತದಲ್ಲಿ ಮಂಜೇಶ್ ಎಲ್‌ಬಿ ಬಲೆಗೆ ಬಿದ್ದರು. ಮಂಜೇಶ್ 43 ಎಸೆತದಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿದಂತೆ 37 ರನ್ ಬಾರಿಸಿದರು. ನಂತರ ಪವನ್ ದೇಶಪಾಂಡೆ ತಂಡದ ಮೊತ್ತವನ್ನು ಏರಿಸುತ್ತಿದ್ದರು. ಆದರೆ ಸೋಮಣ್ಣ ಎಸೆತದಲ್ಲಿಯೇ ಲಿಯಾನ್‌ಗೆ ಕ್ಯಾಚ್ ನೀಡಿ ಪೆವಿಲಿಯನ್
ಸೇರಿದರು. ಈ ಸಂದರ್ಭದಲ್ಲಿ ತಂಡ 18.3 ಓವರ್‌ಗೆ 119 ರನ್ ಮಾಡಿತ್ತು. ಪವನ್ 36 ಎಸೆತದಲ್ಲಿ 47 ರನ್
ಬಾರಿಸಿದರು. ಅವರ ಆಟದಲ್ಲಿ 3 ಬೌಂಡರಿ, 2 ಸಿಕ್ಸರ್ ಸೇರಿತ್ತು.
ಒಂದು ವೇಳೆ ಪವನ್ ಮತ್ತು ಮಂಜೇಶ್ ಜೋಡಿ ಇನ್ನಷ್ಟು ಸಮಯ ಕ್ರೀಸ್‌ನಲ್ಲಿದ್ದರೆ ಇನ್ನಷ್ಟು ರನ್ ಹರಿದುಬರುವ
ಸಾಧ್ಯತೆ ಇತ್ತು. ಆದರೆ ಈ ಎರಡೂ ವಿಕೆಟ್ ಅನ್ನು ಸೋಮಣ್ಣ ಪಡೆದು ಬೆಂಗಳೂರಿಗೆ ಆಘಾತ ನೀಡಿದರು. ಕೊನೆಯ
ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಜು ಭಟ್ಕಳ್ ತಂಡದ ಮೊತ್ತವನ್ನು ಏರಿಸುವಲ್ಲಿ ನೆರವಾದರು. ರಾಜು 14
ಎಸೆತದಲ್ಲಿ ಅಜೇಯ 28 ರನ್ ಬಾರಿಸಿದರು. ಇವರ ಆಟದಲ್ಲಿ 3 ಭರ್ಜರಿ ಸಿಕ್ಸರ್ ಸೇರಿತ್ತು. ಆದರೆ ಉಳಿದ ಆಟಗಾರರು ಸ್ಫೋಟಕ ಬ್ಯಾಟಿಂಗ್ ನಡೆಸಲು ವಿಫಲರಾದರು. ಹೀಗಾಗಿ ತಂಡ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ನಮ್ಮ ಶಿವಮೊಗ್ಗ ತಂಡದ ಪರ ಬೌಲರ್‌ಗಳು ಚುರುಕಿನ ದಾಳಿ ನಡೆಸಿದರು. ಆದಿತ್ಯ ಶರ್ಮ 21ಕ್ಕೆ 3 ವಿಕೆಟ್ ಪಡೆದರು.
ಪ್ರದೀಪ್ 2 ವಿಕೆಟ್ ಪಡೆದರು. ಎಲ್ಲಾ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೂ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ
ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ 20 ಓವರ್‌ಗೆ 142/6 (ಪವನ್ ದೇಶಪಾಂಡೆ 47, ಮಂಜೇಶ್ ರೆಡ್ಡಿ 37,
ಆದಿತ್ಯ ಸೋಮಣ್ಣ 21ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.