ರಾಜ್ಯ ಕ್ರಿಕೆಟಿಗರಿಗೆ ‘ಕೆಎಸ್‌ಸಿಎ ಸುರಕ್ಷಾ’ ಕವಚ
Team Udayavani, Mar 27, 2017, 3:59 PM IST
ಬೆಂಗಳೂರು: ಕೆಎಸ್‌ಸಿಎ (ರಾಜ್ಯ ಕ್ರಿಕೆಟ್ ಸಂಸ್ಥೆ) ಇತ್ತೀಚೆಗೆ ಸಬ್ ಏರ್ ಸಿಸ್ಟಮ್ ಅಳವಡಿಸಿ ವಿಶ್ವಕ್ಕೆ ಮಾದರಿಯಾಗಿತ್ತು. ಈ ಬೆನ್ನಲ್ಲೇ ಕ್ರಿಕೆಟಿಗರ ಹಿತದೃಷ್ಟಿಯನ್ನು ಕಾಯುವ ‘ಕೆಎಸ್‌ಸಿಎ ಸುರಕ್ಷಾ’ ಎಂಬ ಮಹತ್ವದ ಯೋಜನೆಯನ್ನು ಘೋಷಿಸಿದೆ. ಈ ಯೋಜನೆ ಹೊಂದಿದ ದೇಶದ ಮೊದಲ ಕ್ರಿಕೆಟ್ ಸಂಸ್ಥೆ ಎಂಬ ಕೀರ್ತಿಗೆ ಕೆಎಸ್‌ಸಿಎ ಪಾತ್ರವಾಗಿದೆ.
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಎಸ್‌ಸಿಎ ಈ ಯೋಜನೆಯನ್ನು ಘೋಷಿಸಿತು. ಈ ಯೋಜನೆಯಲ್ಲಿ ಆಟಗಾರರು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಆಟಗಾರರಿಗೆ ಪ್ರತ್ಯಕ್ಷವಾಗಿ ಅಥವಾ ಕುಟುಂಬಕ್ಕಾಗಿ ಸಿಗಲಿದೆ ಎಂದು ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
ನ್ಯಾಷನಲ್ ಇನ್‌ಶೂರೆನ್ಸ್ ಸಂಸ್ಥೆ ಸಹಭಾಗಿತ್ವ
ರಾಜ್ಯ ಕ್ರಿಕೆಟ್ ಸಂಸ್ಥೆ ಜತೆಗೆ ನ್ಯಾಷನಲ್ ಇನ್‌ಶೂರೆನ್ಸ್ ಕಂಪನಿ ಸಹಭಾಗಿತ್ವ ವಹಿಸಿದೆ. ‘ಕೆಎಸ್‌ಸಿಎ ಸುರಕ್ಷಾ’ ಯೋಜನೆ ಎ.1ರಿಂದ ಜಾರಿಯಾಗಲಿದೆ. ಬಿಸಿಸಿಐನಿಂದ ವಿಮೆಗೆ ಒಳಪಟ್ಟ ಆಟಗಾರರು ಹೊರತುಪಡಿಸಿದಂತೆ ಉಳಿದ ಆಟಗಾರರಿಗೆ ಮಾತ್ರ ಈ ವಿಮೆ ಅನ್ವಯವಾಗಲಿದೆ.
ಸುರಕ್ಷೆಯಿಂದ ಆಟಗಾರರಿಗೆ ಪ್ರಯೋಜನವೇನು?:
ಕ್ರಿಕೆಟಿಗನೊಬ್ಬ ಕ್ರೀಡಾಂಗಣ ಅವಘಡ ಅಥವಾ ಅಪಘಾತದಿಂದ ಮೃತಪಟ್ಟರೆ ಆತನ ಕುಟುಂಬಕ್ಕೆ 1 ಲಕ್ಷ ರೂ. ನಗದು ದೊರೆಯಲಿದೆ. ಅಲ್ಲದೆ ಆಟಗಾರ ಮಕ್ಕಳನ್ನು ಹೊಂದಿದ್ದರೆ ಅವರ ಶಿಕ್ಷಣಕ್ಕೆ ಶೇ.50ರಷ್ಟು ಹಣದ ಸಹಾಯ ಸಿಗಲಿದೆ. ಶಾಶ್ವದ ಅಂಗವಿಕಲತೆ, ಅರೆ ಅಂಗವಿಕಲತೆಗೆ ಒಳಗಾದರೆ 1 ಲಕ್ಷ ರೂ. ವರೆಗೆ ನೆರವು ಸಿಗಲಿದೆ. ಅಲ್ಲದೆ ಹೊರರೋಗಿ ವಿಭಾಗದಲ್ಲೂ ದಾಖಲಾದರೆ 5 ಸಾವಿರ ರೂ.ವರೆಗೆ ನೆರವು ದೊರೆಯಲಿದೆ.
ಕೆಎಸ್‌ಸಿಎನಿಂದ ಮತ್ತೂಂದು ಪ್ರಥಮ
ರಾಜ್ಯ ಕ್ರಿಕೆಟ್ ಸಂಸ್ಥೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಅದರಲ್ಲಿ ಕ್ರೀಡಾ ಪುನರ್ವಸತಿ ಕೇಂದ್ರ, ಸೋಲಾರ್ ಪವರ್ ಪ್ರೋಜೆಕ್ಟ್, ಸಬ್ ಏರ್ ಸಿಸ್ಟಮ್, ಮಳೆ ನೀರು ಮತ್ತು ನೀರಿನ ಶುದ್ಧೀಕರಣ ಘಟಕ ಪ್ರಮುಖವಾದವು. ಇದೀಗ ಸುರಕ್ಷಾ ಯೋಜನೆಯನ್ನು ದೇಶದಲ್ಲೇ ರಾಜ್ಯ ಕ್ರಿಕೆಟ್ ಸಂಸ್ಥೆ ಮೊದಲ ಬಾರಿಗೆ ಪರಿಚಯಿಸಿ ಎಲ್ಲರ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.