ಬೆಂಗಳೂರು ಟೆಸ್ಟ್ ಬೊಂಬಾಟ್ ಗೆಲುವು: ಕೊಹ್ಲಿಗೆ ದಿಗ್ಗಜರ ಪ್ರಶಂಸೆ
Team Udayavani, Mar 8, 2017, 11:57 AM IST
ಹೊಸದಿಲ್ಲಿ : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ಮಂಗಳವಾರ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವೇ ಪ್ರಬಲ ಆಸ್ಟ್ರೇಲಿಯ ತಂಡದೆದುರು 75 ರನ್ ಗಳ ರೋಮಾಂಚಕ ವಿಜಯವನ್ನು ಸಾಧಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತೋರಿರುವ ಆಕ್ರಮಕ ಶೈಲಿಯ ಹಾಗೂ ಪ್ರಬುದ್ದ ನಾಯಕತ್ವವನ್ನು ವಿಶ್ವ ಕ್ರಿಕೆಟ್‌ನ ಹಲವು ದಿಗ್ಗಜರು ಬಹುವಾಗಿ ಪ್ರಶಂಸಿಸಿದ್ದಾರೆ.
ಆಸ್ಟ್ರೇಲಿಯದ ಎದುರು ಪುಣೆಯಲ್ಲಾದ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಹೊರತಾಗಿಯೂ ಒಂದಿನಿತೂ ಕಂಗೆಡದೆ, ಕೆಚ್ಚೆದೆಯಿಂದ ಹೋರಾಡಿ ಬೆಂಗಳೂರಿನ ಎರಡನೇ ಟೆಸ್ಟ್ ಪಂದ್ಯವನ್ನು ರೋಮಾಂಚಕವಾಗಿ ಜಯಿಸಿ, ನಾಲ್ಕು ಟೆಸ್ಟ್ ಪಂದ್ಯಗಳ ಈ ಸರಣಿಯಲ್ಲೀಗ 1-1ರ ಸಮಬಲವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿರುವ ವಿರಾಟ್ ಕೊಹ್ಲಿ ಯನ್ನು ಕುಮಾರ ಸಂಗಕ್ಕಾರ, ಡೇಲ್ ಸ್ಟೇನ್, ಶೋಯಿಬ್ ಅಖ್‌ತರ್ ಮೊದಲಾದ ದಿಗ್ಗಜರು ಟ್ವಿಟರ್‌ನಲ್ಲಿ ಹೃದಯ ತುಂಬಿ ಅಭಿನಂದಿಸಿದ್ದಾರೆ.
* ಕೊಹ್ಲಿಯ ಆಕ್ರಮಕ ಶೈಲಿಯ ನಾಯಕತ್ವ ಮೆಚ್ಚುವಂಥದ್ದು; ಒಂದೊಮ್ಮೆ ಆತ ವೇಗದ ಎಸೆಗಾರನಾಗಿದ್ದರೆ ಎಂದನ್ನಿಸಿತು – ಡೇಲ್ ಸ್ಟೇನ್
* ವಿರಾಟ್ ಕೊಹ್ಲಿ ಮತ್ತು ಅವರ ತಂಡದವರದ್ದು ಸೂಪರ್ ಶೋ; ಆದರೆ ಕ್ರಿಕೆಟ್ ಹಾಗೂ ಖಾಸಗಿ ಬದುಕಿನ ಒತ್ತಡಗಳನ್ನು ಆತ ಭವಿಷ್ಯದಲ್ಲಿ ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಇತಿಹಾಸವೇ ಅಳೆಯಲಿದೆ – ಶೋಯಿಬ್ ಅಖ್‌ತರ್.
* ಭಾರತೀಯ ಕ್ರಿಕೆಟ್ ತಂಡದ್ದು ಗ್ರೇಟ್ ಫೈಟ್ ಬ್ಯಾಕ್; ಯಾವುದೇ ವಿಷಮ ಸನ್ನಿವೇಶದಲ್ಲೂ ತಂಡದ ಸದಸ್ಯರಿಂದ ಅವರ ಪೂರ್ತಿ ಸಾಮರ್ಥ್ಯವನ್ನು ಪಡೆದುಕೊಳ್ಳಲು ಅವರಲ್ಲಿ ಸಮಯ ಸ್ಫೂರ್ತಿ ತುಂಬುವುದು ಕೊಹ್ಲಿಗೆ ಸಾಧ್ಯವಾಗಿದೆ – ಕುಮಾರ ಸಂಗಕ್ಕಾರ.
ನಿನ್ನೆ ಬೆಂಗಳೂರು ಟೆಸ್ಟ್ ಪಂದ್ಯವನ್ನು ರೋಮಾಂಚಕವಾಗಿ ಜಯಿಸಿದ ಬಳಿಕ ಸ್ವತಃ ವಿರಾಟ್ ಕೊಹ್ಲಿ, “ಇದು ತಂಡದ ನಾಯಕನಾಗಿ ನನ್ನ ಕ್ರಿಕೆಟ್ ಬಾಳ್ವೆಯ ಶ್ರೇಷ್ಠ ನಿರ್ವಹಣೆಯಾಗಿದೆ’ ಎಂದು ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.