ಕನ್ನಡಿಗರ ಆಟಕ್ಕೆ ಪಂಜಾಬ್ ಕಿಂಗ್
Team Udayavani, Apr 9, 2018, 6:15 AM IST
ಮೊಹಾಲಿ: ಕನ್ನಡಿಗರಾದ ಕೆ.ಎಲ್.ರಾಹುಲ್(51 ರನ್) ಹಾಗೂ ಕರುಣ್ ನಾಯರ್ (50ರನ್) ಬಿರುಗಾಳಿ ಅಬ್ಬರದ ಅರ್ಧಶತಕ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೌತಮ್ ಗಂಭೀರ್ ನೇತೃತ್ವದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ಗೌತಮ್ ಗಂಭೀರ್ (55 ರನ್) ಅರ್ಧಶತಕ ನೆರವಿನಿಂದ 20 ಓವರ್‌ಗೆ 7 ವಿಕೆಟ್‌ಗೆ 166 ರನ್‌ಗಳಿಸಿತು. ಈ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭದಲ್ಲೇ ಅಬ್ಬರಿಸಿತು. ಕನ್ನಡಿಗ ಜತೆ ಇನಿಂಗ್ಸ್ ಆರಂಭಿಸಿದ ಕರುನಾಡ ವೀರ ಕೆ.ಎಲ್.ರಾಹುಲ್ (51 ರನ್) ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಆದರೆ ಈ ಹಂತದಲ್ಲಿ ಮಾಯಾಂಕ್ ಅಗರ್ವಾಲ್ (7ರನ್) ಔಟಾದರು. ತಂಡದ ಮೊತ್ತ 64 ರನ್ ಆಗಿದ್ದಾಗ ರಾಹುಲ್ ವಿಕೆಟ್ ಕಳೆದುಕೊಂಡರು.ಇವರ ಬೆನ್ನಲ್ಲೇ ಯುವರಾಜ್ ಸಿಂಗ್ (12ರನ್) ಕೂಡ ಪೆವಿಲಿಯನ್‌ಗೆ ನಡೆದರು. ಆಗ 97 ರನ್ ಆಗಿತ್ತು. ಪಂಜಾಬ್ ಆತಂಕ ಮನೆ ಮಾಡಿತ್ತು.
ಆದರೆ ಡೇವಿಡ್ ಮಿಲ್ಲರ್ (ಅಜೇಯ 24 ರನ್) ಹಾಗೂ ಸ್ಟೋಯಿನಿಸ್ (ಅಜೇಯ 22 ರನ್) ತಂಡವನ್ನು 18.5 ಓವರ್‌ನಲ್ಲಿ 167 ರನ್ ಗಳಿಸುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರ್ : ಡೆಲ್ಲಿ ಡೇರ್‌ಡೆವಿಲ್ಸ್ 20 ಓವರ್‌ಗೆ 166/7 (ಗೌತಮ್ ಗಂಭೀರ್ ರನೌಟ್ 55, ಕ್ರಿಸ್ ಮಾರಿಸ್ ಔಟಾಗದೆ 27 ಮುಜೀಬ್ ಉರ್ 28ಕ್ಕೆ 2) ಕಿಂಗ್ಸ್ ಇಲೆ ವೆನ್ ಪಂಜಾಬ್ 18.5 ಓವರ್‌ಗೆ 167/4 ( ಕೆ.ಎಲ್.ರಾಹುಲ್ 51, ಕರುಣ್ ನಾಯರ್ 50,ರಾಹುಲ್ ಟೆವಾಟಿಯ 24ಕ್ಕೆ 1)
ಪಂದ್ಯಶ್ರೇಷ್ಠ: ಕೆ.ಎಲ್. ರಾಹುಲ್
ಕೆ.ಎಲ್.ರಾಹುಲ್ ಐಪಿಎಲ್ ದಾಖಲೆ
ಪಂಜಾಬ್ ತಂಡದ ಕೆ.ಎಲ್.ರಾಹುಲ್ 14 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಇದರೊಂದಿಗೆ ಯೂಸುಫ್ ಪಠಾಣ್ ಹೆಸರಲ್ಲಿ ದ್ದ ದಾಖಲೆಯನ್ನು ಅಳಿಸಿ ಹಾಕಿದರು. ಕೆಕೆಆರ್‌ನಲ್ಲಿದ್ದ ಯೂಸುಫ್ 2014ರಲ್ಲಿ ಹೈದರಾಬಾದ್ ವಿರುದಟಛಿ 15 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು. ಆರ್‌ಸಿಬಿ ವಿರುದ್ಧ 2017ರಲ್ಲಿ 15 ಎಸೆತದಲ್ಲಿ ಕೆಕೆಆರ್‌ನ ಸುನಿಲ್ ನಾರಾಯಣ್ ಅರ್ಧಶತಕ ಸಿಡಿಸಿದ್ದನ್ನು ಸ್ಮರಿಸಬಹುದು. ಉಳಿದಂತೆ 2014ರಲ್ಲಿ ಪಂಜಾಬ್ ವಿರುದ್ಧ ಸಿಎಸ್‌ಕೆ ಸುರೇಶ್ ರೈನಾ (16 ಎಸೆತ), ಡೆಲ್ಲಿ ವಿರುದಟಛಿ 2007ರಲ್ಲಿ ಡೆಕ್ಕನ್ ಚಾರ್ಜರ್ನ ಗಿಲ್‌ಕ್ರಿಸ್ಟ್ 17 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.