ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್: ಕಿರ್ಗಿಯೋಸ್ ಏಟಿಗೆ ಮೆಡ್ವೆಡೇವ್ ಔಟ್
Team Udayavani, Sep 5, 2022, 11:13 PM IST
ನ್ಯೂಯಾರ್ಕ್: ಹಾಲಿ ಯುಎಸ್ ಓಪನ್ ಚಾಂಪಿಯನ್ ಹಾಗೂ ವಿಶ್ವದ ನಂ. 1 ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಈಗ “ಮಾಜಿ’ ಆಗಿದ್ದಾರೆ. ಆಸ್ಟ್ರೇಲಿ ಯದ ನಿಕ್ ಕಿರ್ಗಿಯೋಸ್ ಈ ರಷ್ಯನ್ ಆಟಗಾರನನ್ನು ಬಲೆಗೆ ಬೀಳಿಸು ವುದರೊಂದಿಗೆ 2022ರ ಅಮೋಘ ಓಟವನ್ನು ಮುಂದುವರಿಸಿದರು.
ವಿಂಬಲ್ಡನ್ ಫೈನಲಿಸ್ಟ್ ಆಗಿರುವ ನಿಕ್ ಕಿರ್ಗಿಯೋಸ್, ಕಳೆದ ರಾತ್ರಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 7-6 (13-11), 3-6, 6-3, 6-2 ಅಂತರದಿಂದ ಮಣಿಸಿದರು. ಇದು ಮೆಡ್ವೆಡೇವ್ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಆಸೀಸ್ ಆಟಗಾರನಿಗೆ ಒಲಿದ ಎರಡನೇ ಗೆಲುವು. ಈ ಸೋಲಿನಿಂದ ಮೆಡ್ವೆಡೇವ್ ಅವರ ನಂ.1 ಪಟ್ಟ ಬಹುತೇಕ ಜಾರಲಿದೆ.
ಕಿರ್ಗಿಯೋಸ್ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದು ಇದೇ ಮೊದಲು. ಇಲ್ಲಿ ಅವರ ಎದುರಾಳಿ ರಷ್ಯದ ಮತ್ತೋರ್ವ ಆಟಗಾರ ಕರೆನ್ ಕಶನೋವ್. ಅವರು ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ 5 ಸೆಟ್‌ಗಳ ಹೋರಾಟ ನಡೆಸಿ 4-6, 6-3, 6-1, 4-6, 6-3 ಅಂತರದ ಗೆಲುವು ಸಾಧಿಸಿದರು.
ರೂಡ್ ವರ್ಸಸ್ ಬರೆಟಿನಿ
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಮತ್ತು ಮ್ಯಾಟಿಯೊ ಬರೆಟಿನಿ ಮುಖಾಮುಖೀ ಆಗಲಿದ್ದಾರೆ. ನಾರ್ವೆಯ ಕ್ಯಾಸ್ಪರ್ ರೂಡ್ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ವಿರುದ್ಧ 6-1, 6-2, 6-7 (4-7), 6-2 ಅಂತರದ ಗೆಲುವು ಸಾಧಿಸಿದರು. ರೂಡ್ ಅವರಿಗೆ ಇದು ಮೊದಲ ಯುಎಸ್ ಓಪನ್ ಕ್ವಾರ್ಟರ್ ಫೈನಲ್. ಇನ್ಮೊಂದೆಡೆ ಮೌಟೆಟ್ “ಲಕ್ಕಿ ಲಾಸರ್’ ಆಗಿ ಪ್ರಧಾನ ಸುತ್ತಿಗೆ ಏರಿದ್ದರು.
ವನಿತಾ ವಿಭಾಗದಲ್ಲೂ ಆಸೀಸ್ ಸಂಭ್ರಮ
ನಿಕ್ ಕಿರ್ಗಿಯೋಸ್ ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯದ ಸಂಭ್ರಮ ಹೆಚ್ಚಿಸಿದರೆ, ಅಜ್ಲಾ ಟೊಮ್ಜಾನೋವಿಕ್ ವನಿತಾ ವಿಭಾಗದಲ್ಲಿ ಕಾಂಗರೂ ಟೆನಿಸ್ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದರು. ಸರೆನಾ ವಿಲಿಯಮ್ಸನ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದ ಅಜ್ಲಾ ಟೊಮ್ಜಾನೋವಿಕ್, ಈ ಗೆಲುವು ಆಕಸ್ಮಿಕವಲ್ಲ ಎಂಬುದನ್ನು ನಿರೂಪಿಸಿದರು. ರಷ್ಯದ ಲಿಯುದ್ಮಿಲಾ ಸಮೊÕನೋವಾ ಅವರನ್ನು 7-6 (10-8), 6-1ರಿಂದ ಹಿಮ್ಮೆಟ್ಟಿಸಿ ಮೊದಲ ಸಲ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇದರೊಂದಿಗೆ ಸಮೊÕನೋವಾ ಅವರ ಸತತ 13 ಗೆಲುವಿನ ಓಟ ಕೊನೆಗೊಂಡಿತು. ಯುಎಸ್ ಓಪನ್‌ಗೂ ಮುನ್ನ ನಡೆದ ಕ್ಲೇವ್‌ಲ್ಯಾಂಡ್ ಮತ್ತು ವಾಷಿಂಗ್ಟನ್ ಡಿಸಿ ಟೂರ್ನಿಗಳಲ್ಲಿ ಅವರು ಪ್ರಶಸ್ತಿ ಎತ್ತಿದ್ದರು.
ಅಜ್ಲಾ ಟೊಮ್ಜಾನೋವಿಕ್ ಅವರಿನ್ನು ಟ್ಯುನಿಶಿಯಾದ ಓನ್ಸ್ ಜೆಬ್ಯೂರ್ ವಿರುದ್ಧ ಆಡುವರು. ಅವರು ರಷ್ಯದ ವೆರೋನಿಕಾ ಕುಡೆರ್ಮಟೋವಾಗೆ 7-6 (7-1), 6-4ರಿಂದ ಆಘಾತವಿಕ್ಕಿದರು.
ಕೊಕೊ ಗಾಫ್ ಭರವಸೆ
18 ವರ್ಷದ ಯುವ ಆಟಗಾರ್ತಿ ಕೊಕೊ ಗಾಫ್ ಆತಿಥೇಯ ನಾಡಿನ ಭರವಸೆಯಾಗಿ ಉಳಿದಿದ್ದಾರೆ. ಅವರು ಭಾರೀ ಹೋರಾಟದ ಬಳಿಕ ಚೀನದ 33 ವರ್ಷದ ಅನುಭವಿ ಜಾಂಗ್ ಶುಯಿ ವಿರುದ್ಧ 7-5, 7-5 ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ವಿರುದ್ಧ ಕೊಕೊ ಗಾಫ್ ಕ್ವಾರ್ಟರ್ ಫೈನಲ್‌ನಲ್ಲಿ ಕಾದಾಡಬೇಕಿದೆ. ಗಾರ್ಸಿಯಾ ಅಮೆರಿಕದ ಅಲಿಸನ್ ರಿಸ್ಕೆ ಅವರನ್ನು 6-4, 6-1 ನೇರ ಸೆಟ್‌ಗಳಲ್ಲಿ ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
Team India: ಗಂಭೀರ್ ಅಧಿಕಾರಕ್ಕೆ ಕುತ್ತು ತಂದ ಸರಣಿ ಸೋಲು; ಬಿಸಿಸಿಐ ಮಹತ್ವದ ನಿರ್ಧಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.