ಲಕ್ಷ್ಮೀ ವಿಶ್ವದ ಮೊದಲ ವನಿತಾ ಕ್ರಿಕೆಟ್ ರೆಫ್ರಿ
Team Udayavani, May 15, 2019, 6:19 AM IST
ದುಬಾೖ: ಭಾರತದ ಜಿ.ಎಸ್. ಲಕ್ಷ್ಮೀ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮ್ಯಾಚ್ ರೆಫ್ರಿ ಸಮಿತಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಮ್ಯಾಚ್ ರೆಫ್ರಿ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ವನಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
50 ವರ್ಷದ ಲಕ್ಷ್ಮೀ ಬಲಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಔಟ್ಸ್ವಿಂಗ್ ಬೌಲರ್. 1986 ರಿಂದ 2004ರ ವರೆಗೆ ಆಡಿದ ಅವರು ಸೌತ್ ಸೆಂಟ್ರಲ್ ರೈಲ್ವೇಸ್, ಆಂಧ್ರ, ಬಿಹಾರ್, ಈಸ್ಟ್ ಝೋನ್ ಮತ್ತು ಸೌತ ಝೋನ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008-2009ರಲ್ಲಿ ಸ್ಥಳೀಯ ಕ್ರಿಕೆಟಿನಲ್ಲಿ ಮ್ಯಾಚ್ ರೆಫ್ರಿಯಾಗಿ ಆಯ್ಕೆಗಾಗಿ ಅಲ್ಲೂ ಮೊದಲ ವನಿತಾ ರೆಫ್ರಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೆ 3 ವನಿತಾ ಏಕದಿನ ಮತ್ತು 3 ವನಿತಾ ಅಂತಾರಾಷ್ಟ್ರೀಯ ಟಿ20 ಗಳಲ್ಲೂ ಕಾಣಿಸಿಕೊಂಡಿದ್ದರು.
‘ಐಸಿಸಿಯ ಅಂತಾರಾಷ್ಟ್ರೀಯ ಸಮಿತಿಗೆ ಆಯ್ಕೆಯಾಗಿರುವುದು ನಿಜವಾಗಿಯೂ ಬಹುದೊಡ್ಡ ಗೌರವ. ಇದು ಜೀವನದ ಹೊಸ ಆಯಾಮವನ್ನು ತೆರೆದಿದೆ. ಭಾರತದಲ್ಲಿ ಕ್ರಿಕೆಟಿಗಳಾಗಿ ಮತ್ತು ಮ್ಯಾಚ್ ರೆಫ್ರಿಯಾಗಿ ಸುದೀರ್ಘ ಕ್ರಿಕೆಟ್ ಜೀವನ ನಿಭಾಯಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರ್ತಿಯ ಮತ್ತು ಪಂದ್ಯದ ರೆಫ್ರಿ ಅನುಭವವನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆ ಎಂಬ ನಂಬಿಕೆಯಿದೆ. ಈ ಅವಕಾಶ ಕೊಟ್ಟಿರುವ ಐಸಿಸಿ, ಬಿಸಿಸಿಐ ಅಧಿಕಾರಗಳು, ಹಿರಿಯರ ಕ್ರಿಕೆಟಿಗರು ಮತ್ತು ಕುಟುಂಬಕ್ಕೆ ಹಲವು ವರ್ಷಗಳಿಂದ ನನಗೆ ಪ್ರೋತ್ಸಾಹ ನೀಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ಲಕ್ಷ್ಮೀ ಹೇಳಿದ್ದಾರೆ.
ಇತ್ತೀಚೆಗಷ್ಟೇ ಪುರುಷರ ಏಕದಿನ ಪಂದ್ಯದ ಅಂಪಾಯರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ ಕ್ಲಾರಿ ಪೊಲೊಸ್ಕ್ ಅವರ ನೇಮಕಾತಿಯ ಕೆಲವೇ ದಿನಗಳಲ್ಲಿ ಲಕ್ಷ್ಮೀ ಅವರ ನೇಮಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.