ಹಾಕಿ: ತಂಡಕ್ಕೆ ಮರಳಿದ ಲಲಿತ್, ರೂಪಿಂದರ್‌ಪಾಲ್ ಸಿಂಗ್
ಬೆಲ್ಜಿಯಂ,ಸ್ಪೇನ್ ಪ್ರವಾಸ
Team Udayavani, Sep 21, 2019, 5:21 AM IST
ಹೊಸದಿಲ್ಲಿ: ಫಾರ್ವರ್ಡ್ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ಡ್ರ್ಯಾಗ್ ಫ್ಲಿಕರ್ ರೂಪಿಂದರ್‌ಪಾಲ್ ಸಿಂಗ್ ಭಾರತ ಹಾಕಿ ತಂಡಕ್ಕೆ ಮರಳಿದ್ದಾರೆ. ಮುಂಬರುವ ಬೆಲ್ಜಿಯಂ ಹಾಗೂ ಸ್ಪೇನ್ ಪ್ರವಾಸಕ್ಕೆಂದು ಶುಕ್ರವಾರ ಪ್ರಕಟಿಸಲಾದ 20 ಸದಸ್ಯರ ತಂಡದಲ್ಲಿ ಇವರಿಬ್ಬರೂ ಸ್ಥಾನ ಸಂಪಾದಿಸಿದ್ದಾರೆ.
ಒಂದು ವಾರದ ಈ ಪ್ರವಾಸದಲ್ಲಿ ಬೆಲ್ಜಿಯಂ ವಿರುದ್ಧ 3, ಸ್ಪೇನ್ ವಿರುದ್ಧ 2 ಪಂದ್ಯಗಳನ್ನು ಭಾರತ ಆಡಲಿದೆ.
ಲಲಿತ್ ಉಪಾಧ್ಯಾಯ ಭುವನೇಶ್ವರದಲ್ಲಿ ನಡೆದ ವಿಶ್ವಕಪ್ ಬಳಿಕ ಭಾರತವನ್ನು ಪ್ರತಿನಿಧಿಸಿರಲಿಲ್ಲ. ರೂಪಿಂದರ್‌ಪಾಲ್ ಕಳೆದ ಒಲಿಂಪಿಕ್ ಟೆಸ್ಟ್ ಪಂದ್ಯಾವಳಿಯನ್ನು ತಪ್ಪಿಸಿಕೊಂಡಿದ್ದರು. ಇದೇ ಕೂಟದ ವೇಳೆ ವಿಶ್ರಾಂತಿಯಲ್ಲಿದ್ದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಕೂಡ ತಂಡಕ್ಕೆ ವಾಪಸಾಗಿದ್ದಾರೆ. ಕೃಶನ್ ಪಿ. ಪಾಠಕ್ ಮತ್ತೂಬ್ಬ ಗೋಲ್‌ಕೀಪರ್.
ಫಾರ್ಮ್ ಮೇಲೆ ವಿಶ್ವಾಸ
“ತಂಡದ ಎಲ್ಲ ಸದಸ್ಯರೂ ತಮ್ಮ ಫಾರ್ಮ್ ಮುಂದುವರಿಸಿಕೊಂಡು ಹೋಗುವ ಬಗ್ಗೆ ವಿಶ್ವಾಸವಿದೆ. ಲಲಿತ್ ಮರಳಿದ್ದರಿಂದ ಫಾರ್ವರ್ಡ್ ವಿಭಾಗಕ್ಕೆ ಹೆಚ್ಚಿನ ಬಲ ಲಭಿಸಿದಂತಾಗಿದೆ. ರೂಪಿಂದರ್ ಆಟದಲ್ಲಿ ಬಹಳಷ್ಟು ಸುಧಾರಣೆ ಆಗಿದ್ದು, ರಕ್ಷಣಾ ವಿಭಾಗದಲ್ಲಿ ನೆರವಿಗೆ ಬರಲಿದ್ದಾರೆ’ ಎಂದು ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.
ಸ್ಪೇನ್ ಸವಾಲು ಹೆಚ್ಚು ಕಠಿನ, ಆದರೆ ಈ ಪ್ರವಾಸ ಒಲಿಂಪಿಕ್ ಅರ್ಹತಾ ಸುತ್ತಿನ ಪಂದ್ಯಗಳಿಗೆ ಉತ್ತಮ ತಾಲೀಮು ಆಗಲಿದೆ ಎಂದು ರೀಡ್ ಅಭಿಪ್ರಾಯಪಟ್ಟರು. ಈ ಮುಖಾಮುಖೀ ರಶ್ಯ ವಿರುದ್ಧ ಒಡಿಶಾದಲ್ಲಿ ನಡೆಯಲಿದೆ.
ಭಾರತ ಹಾಕಿ ತಂಡ
ಗೋಲ್‌ಕೀಪರ್
ಪಿ.ಆರ್. ಶ್ರೀಜೇಶ್, ಕೃಶನ್ ಬಿ. ಪಾಠಕ್.
ಡಿಫೆಂಡರ್
ಹರ್ಮನ್‌ಪ್ರೀತ್ ಸಿಂಗ್ (ಉಪನಾಯಕ), ಸುರೇಂದರ್ ಕುಮಾರ್, ಬೀರೇಂದ್ರ ಲಾಕ್ರ, ವರುಣ್ ಕುಮಾರ್, ಅಮಿತ್ ರೋಹಿದಾಸ್, ಗುರೀಂದರ್ ಸಿಂಗ್, ಕೆ. ಕೊಥಜೀತ್ ಸಿಂಗ್, ರೂಪಿಂದರ್‌ಪಾಲ್ ಸಿಂಗ್.
ಮಿಡ್ ಫೀಲ್ಡರ್
ಮನ್‌ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮ.
ಫಾರ್ವರ್ಡ್ಸ್
ಮನ್‌ದೀಪ್ ಸಿಂಗ್, ಎಸ್.ವಿ. ಸುನೀಲ್, ಲಲಿತ್ ಕುಮಾರ್ ಉಪಾಧ್ಯಾಯ, ರಮಣ್‌ದೀಪ್ ಸಿಂಗ್, ಸಿಮ್ರನ್‌ಜಿàತ್ ಸಿಂಗ್, ಆಕಾಶ್‌ದೀಪ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.