ಗುವಾಹಾಟಿಗೆ ಆಗಮಿಸಿದ ಲಂಕಾ ತಂಡ
Team Udayavani, Jan 3, 2020, 5:19 AM IST
ಗುವಾಹಾಟಿ: ಭಾರತದ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಕ್ರಿಕೆಟ್ ತಂಡ ಗುರುವಾರ ಗುವಾಹಾಟಿಗೆ ಆಗಮಿಸಿದೆ. ರವಿವಾರ ಇಲ್ಲಿ ಮೊದಲ ಮುಖಾ ಮುಖೀ ನಡೆಯಲಿದೆ.
ಇತ್ತೀಚೆಗಷ್ಟೇ ಪೌರತ್ವ ಕಾಯ್ದೆ ವಿರೋಧ ಪ್ರತಿಭಟನೆಯಿಂದ ಹಿಂಸಾಗ್ರಸ್ತವಾಗಿದ್ದ ಅಸ್ಸಾಮ್ ರಾಜಧಾನಿ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯ ನಡುವೆಯೇ ಪಂದ್ಯದ ಸಿದ್ಧತೆ ನಡೆಯುತ್ತಿದೆ.
ಭಾರೀ ಭದ್ರತೆ ನಡುವೆ ಶ್ರೀಲಂಕಾ ತಂಡದ ಆಟಗಾರರು ನೇರವಾಗಿ ಹೊಟೇಲಿಗೆ ತಲುಪಿದರು. ಭಾರತ ತಂಡದ ಆಟಗಾರರು ಶುಕ್ರವಾರ ಆಗ ಮಿಸಲಿದ್ದಾರೆ. ಮೊದಲು ಲಂಕಾ, ಸಂಜೆ ಆತಿಥೇಯ ತಂಡದ ಆಟಗಾರರು ಅಭ್ಯಾಸ ನಡೆಸಲಿದ್ದಾರೆ ಎಂದು ಅಸ್ಸಾಮ್ ಕ್ರಿಕೆಟ್ ಅಸೋಸಿಯೇಶನ್ (ಎಸಿಎ) ತಿಳಿಸಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ
ಪೌರತ್ವ ಕಾಯ್ದೆ ಗಲಭೆ ವೇಳೆ ಗುವಾ ಹಾಟಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಇದರಿಂದ ಇಲ್ಲಿ ನಡೆಯಬೇಕಿದ್ದ ರಣಜಿ ಮತ್ತು ಅಂಡರ್-19 ಪಂದ್ಯಗಳು ರದ್ದುಗೊಂಡಿದ್ದವು. ಆದರೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪಂದ್ಯ ಕ್ಕೇನೂ ಅಡ್ಡಿಯಾಗದು ಎಂದು ಎಸಿಎ ಕಾರ್ಯದರ್ಶಿ ದೇವಜಿತ್ ಸೈಕಿಯ ಹೇಳಿದ್ದಾರೆ.
“ಗುವಾಹಾಟಿ ಈಗ ಮಾಮೂಲು ಸ್ಥಿತಿಗೆ ಮರಳಿದೆ. ಪಂದ್ಯಕ್ಕೆ ಬಿಗಿ ಬಂದೋಬಸ್ತು ಮಾಡಲಾಗಿದೆ. ರಾಜ್ಯ ಸರಕಾರ ಭದ್ರತಾ ವ್ಯವಸ್ಥೆ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ. ಜ. 10ರಿಂದ ಇಲ್ಲಿ ಖೇಲೊ ಇಂಡಿಯಾ ಗೇಮ್ಸ್ ಕೂಡ ಆರಂಭವಾಗಲಿದೆ. ಇದರಲ್ಲಿ 7 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ’ ಎಂದು ಸೈಕಿಯ ಹೇಳಿದರು.
ಗುವಾಹಾಟಿಯ “ಬಾರಾಸಪ್ರಾ ಸ್ಟೇಡಿಯಂ’ 39,500 ವೀಕ್ಷಕರ ಸಾಮರ್ಥ್ಯ ಹೊಂದಿದೆ. 27 ಸಾವಿರ ಟಿಕೆಟ್‌ಗಳು ಮಾರಾಟಗೊಂಡಿವೆ. ಜನರೆಲ್ಲ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಡಗರದಲ್ಲಿ ಮುಳುಗಿದ್ದು, ಕೊನೆಯ ಕ್ಷಣದಲ್ಲಿ ಟಿಕೆಟ್ ಮಾರಾಟ ಬಿರುಸುಗೊಳ್ಳಬಹುದು ಎಂಬ ನಿರೀಕ್ಷೆ ಎಸಿಎಯದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.