ವನಿತಾ ವಿಶ್ವಕಪ್ ನಲ್ಲಿ ಅಜೇಯ ಓಟ ಮುಂದುವರಿಸಿದ ಆಸ್ಟ್ರೇಲಿಯ
Team Udayavani, Feb 15, 2023, 4:30 PM IST
ಕೆಬೆರಾ: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಸತತ ಎರಡನೇ ಜಯದೊಂದಿಗೆ ಅಜೇಯ ಓಟ ಬೆಳೆಸಿದೆ. ಮಂಗಳವಾರ ರಾತ್ರಿಯ ಪಂದ್ಯದಲ್ಲಿ ಅದು ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ 7 ವಿಕೆಟಿಗೆ ಗಳಿಸಿದ್ದು 107 ರನ್ ಮಾತ್ರ. ಆಸ್ಟ್ರೇಲಿಯ 18.2 ಓವರ್‌ಗಳಲ್ಲಿ 2 ವಿಕೆಟಿಗೆ 111 ರನ್ ಬಾರಿಸಿತು.
ಬಾಂಗ್ಲಾದ 107 ರನ್ ಮೊತ್ತದಲ್ಲಿ ನಾಯಕಿ ನಿಗಾರ್ ಸುಲ್ತಾನಾ ಅವರ ಪಾಲೇ 57 ರನ್ ಆಗಿತ್ತು. ಆಸೀಸ್ ಲೆಗ್‌ಸ್ಪಿನ್ನರ್ ಜಾರ್ಜಿಯಾ ವೇರ್‌ಹ್ಯಾಮ್ 20 ರನ್ನಿಗೆ 3 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಚೇಸಿಂಗ್ ವೇಳೆ ಆಸೀಸ್ ಅಬ್ಬರದ ಆಟಕ್ಕೆ ಮುಂದಾಗಲಿಲ್ಲ. ಅಲಿಸ್ಸಾ ಹೀಲಿ 37, ನಾಯಕಿ ಮೆಗ್ ಲ್ಯಾನಿಂಗ್ ಔಟಾಗದೆ 48,
ಗಾರ್ಡನರ್ ಔಟಾಗದೆ 19 ರನ್ ಮಾಡಿದರು.ಆಸ್ಟ್ರೇಲಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು 97 ರನ್ನುಗಳಿಂದ ಪರಾಭವಗೊಳಿಸಿತ್ತು. ಕಾಂಗರೂ ಪಡೆಯೀಗ “ಎ’ ವಿಭಾಗದ ಅಗ್ರಸ್ಥಾನದಲ್ಲಿದೆ. ಮತ್ತೊಂದು ಅಜೇಯ ತಂಡವಾದ ಶ್ರೀಲಂಕಾ ಕೂಡ 4 ಅಂಕಗಳನ್ನು ಹೊಂದಿದ್ದು, ರನ್‌ರೇಟ್‌ನಲ್ಲಿ ಆಸ್ಟ್ರೇಲಿಯಕ್ಕಿಂತ ಹಿಂದಿದೆ. ಒಂದು ಗೆಲುವು, ಒಂದು ಸೋಲನ್ನು ಕಂಡಿರುವ ಆತಿಥೇಯ ದಕ್ಷಿಣ ಆಫ್ರಿಕಾ 3ನೇ ಸ್ಥಾನಿಯಾಗಿದೆ. ಎರಡೂ ಪಂದ್ಯಗಳನ್ನು ಸೋತ ಬಾಂಗ್ಲಾ 4ನೇ, ನ್ಯೂಜಿಲ್ಯಾಂಡ್ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.