ನಾಯಕತ್ವ ತ್ಯಜಿಸಲು ಸಿದ್ಧ: ಲಸಿತ ಮಾಲಿಂಗ
Team Udayavani, Jan 13, 2020, 6:05 AM IST
ಕೊಲಂಬೊ: ಭಾರತ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಹೀನಾಯ ಸೋಲನ್ನು ಕಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ನಾಯಕತ್ವ ತ್ಯಜಿಸಲು ಸಿದ್ಧನಿದ್ದೇನೆ ಎಂದು ಲಸಿತ ಮಾಲಿಂಗ ಹೇಳಿದ್ದಾರೆ. ಭಾರತ ವಿರುದ್ಧ ನಡೆದ 3 ಪಂದ್ಯಗಳ ಸರಣಿಯನ್ನು ಶ್ರೀಲಂಕಾ 0-2 ಅಂತರದಿಂದ ಸೋತಿತ್ತು.
ಸರಣಿ ಮುಗಿಸಿ ತವರಿಗೆ ಮರಳಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಲಸಿತ ಮಾಲಿಂಗ, “ಟಿ20 ಸರಣಿಯಲ್ಲಿ ನಮ್ಮ ತಂಡ ಗಮನಾರ್ಹ ನಿರ್ವಹಣೆ ನೀಡುವಷ್ಟು ಸಮರ್ಥವಾಗಿರಲಿಲ್ಲ. ನಮ್ಮ ಬೌಲರ್‌ಗಳು ಎದುರಾಳಿ ಆಟಗಾರರನ್ನು ಕಟ್ಟಿಹಾಕಲು ವಿಫಲರಾದರು. ಬ್ಯಾಟ್ಸ್‌ಮನ್‌ಗಳು ಸವಾಲಿನ ಮೊತ್ತ ಪೇರಿಸಲು ಅಸಮರ್ಥರಾದರು’ ಎಂದರು.
“ನಾವು ಸಶಕ್ತ ಪಡೆಯನ್ನು ಹೊಂದಿಲ್ಲ. ವಿಶ್ವದ 9ನೇ ರ್‍ಯಾಂಕಿನ ತಂಡದಿಂದ ಗೆಲುವಿನ ನಿರ್ವಹಣೆಯನ್ನು ನಿರೀಕ್ಷಿಸುವುದು ಕೂಡ ಸೂಕ್ತವಲ್ಲ. ನಾನು ವರ್ಷದ ಹಿಂದಷ್ಟೇ ನಾಯಕತ್ವಕ್ಕೆ ಮರಳಿದ್ದೆ….’ ಎಂದ ಮಾಲಿಂಗ ನೈತಿಕ ಹೊಣೆ ಹೊತ್ತು ನಾಯಕತ್ವ ತ್ಯಜಿಸಲು ಸಿದ್ಧನಿದ್ದೇನೆ ಎಂದರು.
ಮಾಲಿಂಗ ಅವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವು 2014ರಲ್ಲಿ ಟಿ20 ವಿಶ್ವಕಪ್ ಜಯಿಸಿತ್ತು. 2016ರ ಆರಂಭದ ವರೆಗೆ ಅವರು ನಾಯಕತ್ವದಲ್ಲಿ ಮುಂದುವರಿದಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. 2018ರ ಡಿಸೆಂಬರ್‌ನಲ್ಲಿ ಮತ್ತೆ ತಂಡದ ನಾಯಕತ್ವ ಹುದ್ದೆಗೆ ಮರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.