ದಿವಂಗತ ಪಟೌಡಿ ಉಪನ್ಯಾಸ: ಸಾಬಾ ಕರೀಂ ಶಿಫಾರಸಿಗೆ ಅಮಿತಾಭ್ ಅಸಮಾಧಾನ
Team Udayavani, May 13, 2018, 12:16 PM IST
ನವದೆಹಲಿ: ಜೂ.12ರಂದು ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಸ್ಮರಣಾರ್ಥ ಬೆಂಗಳೂರಿನಲ್ಲಿ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮಕ್ಕೆ ಕ್ರಿಕೆಟ್ ಅಪರೇಷನ್ ಜಿಎಂ ಸಾಬಾ ಕರೀಂ ನಾಲ್ವರು ಕ್ರಿಕೆಟ್ ದಿಗ್ಗಜರ ಹೆಸರನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಶಿಫಾರಸು ಸಲ್ಲಿಸಿದ್ದಾರೆ.
ಈ ಬೆನ್ನಲ್ಲೇ ಪಟ್ಟಿಯಲ್ಲಿರುವ ಹೆಸರುಗಳನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ವಿರೋಧಿಸಿದ್ದಾರೆ. ಸಾಬಾ ಕರೀಂ ಅವರು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಇಂಗ್ಲೆಂಡ್ ತಂಡದ ಮಾಜಿ ನಾಯಕರುಗಳಾದ ನಾಸಿರ್ ಹುಸೇನ್ ಹಾಗೂ ಕೆವಿನ್ ಪೀಟರ್ಸನ್ ಹಾಗೂ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ ಸಾಬಾ ನೀಡಿದ ಪಟ್ಟಿಯನ್ನು ನೋಡಿದ ಕೂಡಲೇ ಅಮಿತಾಭ್ ಈ ಮೊದಲೇ ತಿರಸ್ಕರಿಸಿದ್ದರು ಎನ್ನಲಾಗಿದೆ. ಅಮಿತಾಭ್ ಅವರಿಗೆ ಭಾರತದ ಮಾಜಿ ಕ್ರಿಕೆಟಿಗರುಗಳಾದ ಚಂದು ಬೋರ್ಡೆ, ನಾರಿ ಕಂಟ್ರಾಕ್ಟರ್, ಎರ್ರಾಪಳ್ಳಿ ಪ್ರಸನ್ನ ಅಥವಾ ಅಬ್ಟಾಸ್ ಅಲಿ ಬೇಗ್ ರಂತಹ ದಿಗ್ಗಜರಲ್ಲಿ ಯಾರಾದರೊಬ್ಬರನ್ನು ಉಪನ್ಯಾಸಕ್ಕೆ ಆಯ್ಕೆ ಮಾಡಬೇಕು ಎನ್ನುವ ಒಲವಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.