ಲೀಗ್ ಹೋರಾಟ ಮುಗಿಯಿತು: ಇನ್ನು ಪ್ಲೇ ಆಫ್ ಸೆಣಸಾಟ
Team Udayavani, May 21, 2018, 6:55 AM IST
ಮುಂಬಯಿ: ಎರಡು ತಿಂಗಳಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಐಪಿಎಲ್ ಕ್ರಿಕೆಟ್ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ರವಿವಾರಕ್ಕೆ ಲೀಗ್ ಹಂತದ ಹೋರಾಟ ಮುಗಿದಿವೆ. ಇನ್ನು ಪ್ಲೇ ಆಫ್ ಹೋರಾಟಕ್ಕೆ ಆಯ್ಕೆಯಾದ ತಂಡಗಳು ಸಿದ್ಧತೆ ನಡೆಸಬೇಕಾಗಿದೆ.
ಅಂಕಪಟ್ಟಿಯ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ನಲ್ಲಿ ಆಡಲಿವೆ. ಸದ್ಯ 18 ಅಂಕ ಹೊಂದಿರುವ ಸನ್‌ರೈಸರ್ ಹೈದರಾಬಾದ್, ತಲಾ 16 ಅಂಕ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡ ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಪ್ಲೇ ಆಫ್ಗೆ ತೇರ್ಗಡೆಯಾಗುವ ಇನ್ನೊಂದು ತಂಡಕ್ಕೆ ರಾಜಸ್ಥಾನ್ ಮತ್ತು ಪಂಜಾಬ್ ನಡುವೆ ಸ್ಪರ್ಧೆಯಿದೆ. ಒಂದು ವೇಳೆ ಲೀಗ್‌ನ ಅಂತಿಮ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್ ಬೃಹತ್ ಅಂತರದಿಂದ ಗೆದ್ದರೆ ಅದು ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಲಿದೆ. ಇಲ್ಲದಿದ್ದರೆ ರಾಜಸ್ಥಾನ್‌ಗೆ ಈ ಅವಕಾಶ ಲಭಿಸಲಿದೆ.
ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 14 ಪಂದ್ಯಗಳನ್ನು ಆಡಿದ್ದವು. ಹೈದರಾಬಾದ್ ಗರಿಷ್ಠ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಂತಿಮ ಲೀಗ್ ಪಂದ್ಯ ಗೆದ್ದರೆ ಚೆನ್ನೈ ಕೂಡ 9 ಪಂದ್ಯ ಗೆಲ್ಲಲಿದೆ. ಕಡಿಮೆ ಪಂದ್ಯ ಗೆದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
ಮೇ 22ರಿಂದ ಪ್ಲೇ ಆಫ್
ಪ್ಲೇ ಆಫ್ನ ಪಂದ್ಯಗಳು ಮೇ 22ರಿಂದ ಆರಂಭವಾಗಲಿವೆ. ಮೇ 21 ಐಪಿಎಲ್‌ಗೆ ವಿಶ್ರಾಂತಿಯ ದಿನವಾಗಿದೆ. ಮೇ 22ರಂದು ಮೊದಲ ಕ್ವಾಲಿಫೈಯರ್ ಪಂದ್ಯ ಮುಂಬಯಿಯಲ್ಲಿ ನಡೆಯಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಹೈದರಾಬಾದ್ ಮತ್ತು ಚೆನ್ನೈ ಈ ಪಂದ್ಯದಲ್ಲಿ ಆಡಲಿದ್ದು ಗೆದ್ದ ತಂಡ ನೇರವಾಗಿ ಫೈನಲಿಗೇರಲಿದೆ. ಮೇ 23ರಂದು ಕೋಲ್ಕತಾದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಕೆಕೆಆರ್ ಮತ್ತು ರಾಜಸ್ಥಾನ ಹೋರಾಡಲಿವೆ. ಈ ಪಂದ್ಯದಲ್ಲಿ ಸೋತ ತಂಡ ಹೊರಬೀಳಲಿದೆ. ಗೆದ್ದ ತಂಡ ಮೇ 25ರಂದು ಕೋಲ್ಕತಾದಲ್ಲಿಯೇ ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿ ಫೈಯರ್‌ನಲ್ಲಿ ಸೋತ ತಂಡದ ಜತೆ ಆಡಲಿದೆ. ಇಲ್ಲಿ ಗೆದ್ದ ತಂಡ ಮೇ 27ರಂದು ನಡೆಯುವ ಫೈನಲ್ ಹೋರಾಟದಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
2 ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ್ದ ಚೆನ್ನೈ ಪ್ಲೇ ಆಫ್ಗೆ ತೇರ್ಗಡೆಯಾಗಿರು ವುದು ವಿಶೇಷವಾಗಿದೆ. ಚೆನ್ನೈ 2 ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿದೆ. ಹಾಲಿ ಚಾಂಪಿಯನ್ ಆಗಿರುವ ಮುಂಬೈ ಈ ಬಾರಿ ಪ್ಲೇ ಆಫ್ಗೆ ತೇರ್ಗಡೆಯಾಗಲು ವಿಫಲವಾಗಿದೆ. ಬೆಂಗಳೂರು, ಪಂಜಾಬ್ ಮತ್ತು ಡೆಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.